IPL 2023: ಐಪಿಎಲ್ 50 ಫೈಟ್: RCB ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ

IPL 2023: ಐಪಿಎಲ್​ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಶನಿವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯ ಮುಂದುವರೆಸುವ ಇರಾದೆಯಲ್ಲಿದೆ ಉಭಯ ತಂಡಗಳು.ಅದರಲ್ಲೂ ಪಾಯಿಂಟ್ಸ್​ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿರುವ ಆರ್​ಸಿಬಿಗೆ ಡೆಲ್ಲಿ ವಿರುದ್ಧದ ಪಂದ್ಯ ಬಹಳ ಮುಖ್ಯ. ಏಕೆಂದರೆ ಆರ್​ಸಿಬಿ ತಂಡದ ನೆಟ್​ ರನ್​ ರೇಟ್ (-0.030) ಮೈನಸ್​ನಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಜಯದೊಂದಿಗೆ ಪ್ಲಸ್ ಆಗಲಿದೆ. ಅಲ್ಲದೆ ಒಟ್ಟು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಟಾಪ್-4 ಹಂತಕ್ಕೇರಬಹುದು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವು ಆರ್​ಸಿಬಿ ಪಾಲಿಗೆ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ. ಇತ್ತ ಈ ಮಹತ್ವದ ಪಂದ್ಯಕ್ಕಾಗಿ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲೂ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.ಏಕೆಂದರೆ ಆರ್​ಸಿಬಿ ಪರ ಕಳೆದ 9 ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಯಾವುದೇ ಆಟಗಾರರು ಯಶಸ್ವಿಯಾಗಿಲ್ಲ. ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಮೈಕೆಲ್ ಬ್ರೇಸ್​ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್ ಸೇರಿದಂತೆ ಐವರು ಆಟಗಾರರು 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ. ಅಚ್ಚರಿ ಎಂದರೆ ಐದು ಬ್ಯಾಟ್ಸ್​ಮನ್​​ಗಳು ಸೇರಿ ಕಲೆಹಾಕಿರುವುದು ಕೇವಲ 56 ರನ್​ ಮಾತ್ರ.ಹೀಗಾಗಿಯೇ ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ದಿಢೀರ್ ಆಗಿ ಅನುಭವಿ ಆಟಗಾರ ಕೇದಾರ್ ಜಾಧವ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿಕೊಂಡಿದೆ. ಇತ್ತ ತಂಡದಲ್ಲಿರುವ ಆಟಗಾರರೆಲ್ಲರೂ ವಿಫಲರಾಗಿರುವ ಕಾರಣ ಕೇದರ್ ಜಾಧವ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ...
1- ಫಾಫ್ ಡುಪ್ಲೆಸಿಸ್ (ನಾಯಕ)2- ವಿರಾಟ್ ಕೊಹ್ಲಿ3- ಕೇದಾರ್ ಜಾಧವ್4- ಗ್ಲೆನ್ ಮ್ಯಾಕ್ಸ್​ವೆಲ್5- ಸುಯಶ್ ಪ್ರಭುದೇಸಾಯಿ6- ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)7- ವನಿಂದು ಹಸರಂಗ8- ವೈಶಾಕ್ ವಿಜಯಕುಮಾರ್9- ಹರ್ಷಲ್ ಪಟೇಲ್10- ಮೊಹಮ್ಮದ್ ಸಿರಾಜ್11- ಜೋಶ್ ಹ್ಯಾಝಲ್​ವುಡ್RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-playing-xi-vs-dc-match-number-50-kannada-news-zp-570374.html

Leave a Reply

Your email address will not be published. Required fields are marked *