IPL 2023: ಜೈಸ್ವಾಲ್ ಆಟಕ್ಕೆ ಮನಸೋತ ಬಿಸಿಸಿಐ ಬಿಗ್​ಬಾಸ್; ಟೀಂ ಇಂಡಿಯಾಕ್ಕೆ ಎಂಟ್ರಿ ಗ್ಯಾರಂಟಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಹಿಂದೆ ಐಪಿಎಲ್​​ನಲ್ಲಿ ದಾಖಲಾಗಿದ್ದ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.ಈ ಹಿಂದೆ ಲಕ್ನೋ ನಾಯಕ ಕೆಎಲ್ ರಾಹುಲ್ ಹಾಗೂ ಮಾಜಿ ಕೆಕೆಆರ್ ಆಟಗಾರ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆ ಜೈಸ್ವಾಲ್ ಪಾಲಾಗಿದೆ.ಕೆಕೆಆರ್ ವಿರುದ್ಧ ಕೇವಲ 47 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 12 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​ಗಳ ನೆರವಿನಿಂದ ಅಜೇಯ 98 ರನ್ ಬಾರಿಸಿದರು. ಜೈಸ್ವಾಲ್ ಅವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ್ ಕೂಡ ಕೇವಲ 14ನೇ ಓವರ್​ನಲ್ಲಿ ಗೆಲುವು ದಡ ಸೇರಿತು.ಇದೀಗ ಈ ಯುವ ಬ್ಯಾಟರ್ ಆಟಕ್ಕೆ ಮನಸೋತಿರುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಯಶಸ್ವಿ ಜೈಸ್ವಾಲ್ ಅವರ ಆಟವನ್ನು ಆಡಿ ಹೊಗಳಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಜೈ ಶಾ, ಯಶಸ್ವಿ ಜೈಸ್ವಾಲ್ ಅವರ ಈ ಇನ್ನಿಂಗ್ಸ್ ವಿಶೇಷವಾಗಿದೆ. ಆಟದ ಬಗ್ಗೆ ಅವರ ಧೈರ್ಯ ಮತ್ತು ಉತ್ಸಾಹವು ಸ್ಪಷ್ಟವಾಗಿತ್ತು. ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ್ದಕ್ಕೆ ಅಭಿನಂದನೆಗಳು. ಮುಂದೆಯೂ ನಿಮ್ಮ ಫಾರ್ಮ್​ ಹೀಗೆಯೇ ಮುಂದುವರೆಯಲಿ'' ಎಂದು ಬರೆದುಕೊಂಡಿದ್ದಾರೆ.ಯಶಸ್ವಿ ಜೈಸ್ವಾಲ್ ತಂಡ ಭಾರತ ಪರ ಆಡುವ ಸಮಯ ಬಂದಿದೆ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದರೆ, ಇನ್ನು 3 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಜೈಸ್ವಾಲ್ ಸ್ಥಾನ ಪಡೆಯುತ್ತೇನೆ ಎಂದು ಆಕಾಶ್ ಚೋಪ್ರಾ ಬರೆದುಕೊಂಡಿದ್ದಾರೆ.ಇಷ್ಟೆ ಅಲ್ಲದೆ ಯಶಸ್ವಿ ಜೈಸ್ವಾಲ್ ಆಟವನ್ನು ಐಪಿಎಲ್​ನ ಎಲ್ಲಾ ತಂಡಗಳು ಹಾಡಿ ಹೊಗಳುವುದರೊಂದಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.

source https://tv9kannada.com/photo-gallery/cricket-photos/ipl-2023-yashasvi-jaiswal-hit-half-century-jay-shah-told-young-batsman-as-future-star-team-india-psr-576381.html

Leave a Reply

Your email address will not be published. Required fields are marked *