IPL 2023: ಹೀನಾಯ ಸೋಲಿನ ಬೆನ್ನಲ್ಲೇ RCB ಗೆ ಬಿಗ್ ಶಾಕ್: ತಂಡದಿಂದ ಹೊರಬಿದ್ದ ಪ್ರಮುಖ ಆಟಗಾರ..!

IPL 2023 RCB: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಆರ್​ಸಿಬಿ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿಯೊಬ್ಬರು ಐಪಿಎಲ್​ನಿಂದ ಹೊರ ನಡೆದಿದ್ದಾರೆ.ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ರೀಸ್ ಟೋಪ್ಲಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇದಕ್ಕೂ ಮುನ್ನ ಟೋಪ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮಾತ್ರ ಅಲಭ್ಯರಾಗಿದ್ದಾರೆ ಎನ್ನಲಾಗಿತ್ತು.ಆದರೀಗ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ವೈದ್ಯಕೀಯ ವರದಿಯಲ್ಲಿ ಅವರ ಭುಜಕ್ಕೆ ಗಂಭೀರ ಗಾಯವಾಗಿರುವುದು ಕಂಡು ಬಂದಿದೆ. ಹೀಗಾಗಿ ರೀಸ್ ಟೋಪ್ಲಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.ಇದಕ್ಕೂ ಮುನ್ನ ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಐಪಿಎಲ್​ನಿಂದ ಹೊರಗುಳಿದಿದ್ದರು. ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪಾಟಿದಾರ್ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಅವರು ಸಹ ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದೀಗ ಬ್ಯಾಕ್ ಟು ಬ್ಯಾಕ್ ಇಬ್ಬರು ಆಟಗಾರರು ಹೊರಗುಳಿದಿರುವುದು ಆರ್​ಸಿಬಿ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಬಹುದು. ಏಕೆಂದರೆ ಆರ್​ಸಿಬಿ ಇನ್ನೂ ಕೂಡ ಪಾಟಿದಾರ್ ಬದಲಿ ಆಟಗಾರನ ಆಯ್ಕೆ ಮಾಡಿಲ್ಲ. ಇದೀಗ ಇಬ್ಬರು ಹೊಸ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿದೆ ಆರ್​ಸಿಬಿ.ಒಟ್ಟಿನಲ್ಲಿ ಈ ಸಲ ಕಪ್ ಗೆಲ್ಲುವ ಇರಾದೆಯೊಂದಿಗೆ ಬಲಿಷ್ಠ ಪಡೆಯನ್ನು ರೂಪಿಸಿದ್ದ ಆರ್​ಸಿಬಿಗೆ ಆಟಗಾರರ ಗಾಯದ ಸಮಸ್ಯೆಯೇ ಹೊಸ ಚಿಂತೆಯನ್ನುಂಟು ಮಾಡಿದೆ. ಏಕೆಂದರೆ ಈ ಹಿಂದೆ ವಿಲ್ ಜಾಕ್ಸ್​ ಹೊರಗುಳಿದ ಕಾರಣ ಮೈಕೆಲ್ ಬ್ರೇಸ್​ವೆಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು.ಇದೀಗ ತಂಡದಲ್ಲಿ ಪ್ರಮುಖ ವೇಗಿ ರೀಸ್ ಟೋಪ್ಲಿ ಸಹ ಹೊರಬಿದ್ದಿದ್ದಾರೆ. ಮತ್ತೊಂದೆಡೆ ಗಾಯದ ಕಾರಣ ಜೋಶ್ ಹ್ಯಾಝಲ್​ವುಡ್ ಇನ್ನೂ ಕೂಡ ತಂಡವನ್ನು ಸೇರಿಕೊಂಡಿಲ್ಲ. ಸದ್ಯ ಆರ್​ಸಿಬಿ ತಂಡದ ಬಳಿಯಿರುವ ಏಕೈಕ ವಿದೇಶಿ ವೇಗದ ಬೌಲರ್ ಆಯ್ಕೆ ಡೇವಿಡ್ ವಿಲ್ಲಿ ಮಾತ್ರ. ಹೀಗಾಗಿ ಮುಂಬರುವ ಪಂದ್ಯಗಳಿಗೆ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕೂಡ ಸವಾಲಾಗಿರಲಿದೆ.RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

source https://tv9kannada.com/photo-gallery/cricket-photos/ipl-2023-rcb-reece-topley-out-of-ipl-kannada-news-zp-au50-550668.html

Views: 0

Leave a Reply

Your email address will not be published. Required fields are marked *