IPL 2023: ಕೆಎಲ್ ರಾಹುಲ್ ಬದಲಿಯಾಗಿ ಲಕ್ನೋ ತಂಡ ಸೇರಿಕೊಂಡ ಮತ್ತೊಬ್ಬ ಕನ್ನಡಿಗ

ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡು ಐಪಿಎಲ್​​ನಿಂದ ಹೊರಬಿದ್ದಿದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬದಲಿ ಆಟಗಾರನನ್ನು ಲಕ್ನೋ ಫಾಂಚೈಸ್ ಆಯ್ಕೆ ಮಾಡಿದೆ.ಕನ್ನಡಿಗ ಕೆಎಲ್ ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿರುವ ಲಕ್ನೋ ಆಡಳಿತ ಮಂಡಳಿ ಕರುಣ್ ನಾಯರ್​​ ಅವರನ್ನು ರಾಹುಲ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.ಇನ್ನು ಇದೀಗ ಲಕ್ನೋ ತಂಡ ಸೇರಿಕೊಂಡಿರುವ ಕರುಣ್ ನಾಯರ್ ಅವರ ಐಪಿಎಲ್ ರೆಕಾರ್ಡ್​ ನೋಡುವುದಾದರೆ, ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ 76 ಪಂದ್ಯಗಳನ್ನಾಡಿರುವ ನಾಯರ್ 10 ಅರ್ಧಶತಕದೊಂದಿಗೆ 1496 ರನ್ ಬಾರಿಸಿದ್ದಾರೆ.ಐಪಿಎಲ್​​ನಲ್ಲಿ ಮೊದಲ ಬಾರಿಗೆ ಆರ್​ಸಿಬಿ ಪರ ಆಡಿದ್ದ ನಾಯರ್ ಆ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದರು. ನಂತರ ಡೆಲ್ಲಿ ಡೇರ್ ಡೇವಿಲ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರವಾಗಿಯೂ ಕಣಕ್ಕಿಳಿದಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದ ನಾಯರ್ ಕೊನೆಯದಾಗಿ ಕೆಕೆಆರ್ ತಂಡದ ಪರ ಆಡಿದ್ದರು.ಇದೀಗ ರಾಹುಲ್ ಬದಲಿಗೆ ಲಕ್ನೋ ತಂಡ ಸೇರಿಕೊಂಡಿರುವ ಕರುಣ್​ಗೆ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.ಇನ್ನು ಇಂಜುರಿಯಿಂದಾಗಿ ಐಪಿಎಲ್ ತೊರೆದಿರುವ ರಾಹುಲ್ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಕೃನಾಲ್ ಪಾಂಡ್ಯ ಲಕ್ನೋ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.

source https://tv9kannada.com/photo-gallery/cricket-photos/ipl-2023-karun-nair-has-been-named-as-kl-rahuls-replacement-for-lsg-psr-571161.html

Leave a Reply

Your email address will not be published. Required fields are marked *