IPL 2023: ಕಳೆದ ವರ್ಷ ನಾವು RCBಗೆ ಸಹಾಯ ಮಾಡಿದ್ದೆವು, ಈ ಸಲ ಅವರು ಮಾಡ್ತಾರೆ: ರೋಹಿತ್ ಶರ್ಮಾ

IPL 2023: ಐಪಿಎಲ್​ನ 70ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯವು ಆರ್​ಸಿಬಿ ಪಾಲಿಗೆ ಎಷ್ಟು ನಿರ್ಣಾಯಕವೊ, ಮುಂಬೈ ಇಂಡಿಯನ್ಸ್ ಪಾಲಿಗೂ ಅಷ್ಟೇ ನಿರ್ಣಾಯಕ.ಏಕೆಂದರೆ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್​ಸಿಬಿ ತಂಡ ಸೋತರೆ 16 ಪಾಯಿಂಟ್ಸ್​ನೊಂದಿಗೆ ಮುಂಬೈ ಇಂಡಿಯನ್ಸ್​ ತಂಡ ಪ್ಲೇಆಫ್​​ಗೆ ಎಂಟ್ರಿ ಕೊಡಲಿದೆ. 
ಹೀಗಾಗಿಯೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಆರ್​ಸಿಬಿ ತಂಡಕ್ಕೆ ಮಾಡಿದ ಹಳೆಯ ಸಹಾಯವನ್ನು ನೆನಪಿಸಿ ಕಿಚಾಯಿಸಿದ್ದಾರೆ. ಅಂದರೆ ಕಳೆದ ಸೀಸನ್​ನಲ್ಲೂ ಆರ್​ಸಿಬಿ ಕೊನೆಯ ಹಂತದಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಅದು ಕೂಡ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನೆರವಿನ ಮೂಲಕ ಎಂಬುದು ವಿಶೇಷ.ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದ ಪರಿಣಾಮ RCB ಪ್ಲೇಆಫ್ ಪ್ರವೇಶಿಸಿತ್ತು.ಒಂದು ವೇಳೆ ಕಳೆದ ಸೀಸನ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತಿದ್ದರೆ 16 ಪಾಯಿಂಟ್ಸ್​ನೊಂದಿಗೆ ನೆಟ್ ರನ್​ ರೇಟ್​ನಲ್ಲಿ ಆರ್​ಸಿಬಿಯನ್ನು ಹಿಂದಿಕ್ಕಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸುತ್ತಿತ್ತು. ಇದೀಗ ಅಂದು ಮಾಡಿದ ಸಹಾಯವನ್ನು ರೋಹಿತ್ ಶರ್ಮಾ ನೆನಪಿಸಿದ್ದಾರೆ.ಎಸ್​ಆರ್​ಹೆಚ್ ವಿರುದ್ಧ ಜಯ ಸಾಧಿಸಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕಳೆದ ಬಾರಿ ನಾವು ಆರ್​ಸಿಬಿಗೆ ದೊಡ್ಡ ಸಹಾಯವನ್ನು ಮಾಡಿದ್ದೆವು. ಈ ಬಾರಿ ನಮಗೆ ಆರ್​ಸಿಬಿ ಕಡೆಯಿಂದ ನಮಗೆ ಬೇಕಾದ ಫಲಿತಾಂಶ ಸಿಗಲಿದೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಸೋತು, ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇಆಫ್ ಅವಕಾಶ ಮಾಡಿಕೊಡಲಿದೆ ಎಂಬಾರ್ಥದಲ್ಲಿ ರೋಹಿತ್ ಶರ್ಮಾ ಹೇಳಿರುವುದು ವಿಶೇಷ.

source https://tv9kannada.com/photo-gallery/cricket-photos/ipl-2023-last-year-we-did-a-favour-to-rcb-so-hopefully-we-get-this-year-rohit-sharma-kannada-news-zp-584080.html

Leave a Reply

Your email address will not be published. Required fields are marked *