IPL 2023 Mini Auction Live: 13.25 ಕೋಟಿ ರೂ.ಗೆ ಹೈದರಾಬಾದ್ ಪಾಲಾದ ಬ್ರೂಕ್​

ಐಪಿಎಲ್ 2023 ರ ಮಿನಿ ಹರಾಜು ಪ್ರಾರಂಭವಾಗಿದೆ. 10 ಫ್ರಾಂಚೈಸಿಗಳು ತಮ್ಮ ತಂಡವನ್ನು ಪೂರ್ಣಗೊಳಿಸಲು ಇಂದು ಹರಾಜಿಗೆ ಎಂಟ್ರಿಕೊಟ್ಟಿವೆ. ಹರಾಜಿನಲ್ಲಿ 405 ಆಟಗಾರರನ್ನು ಹರಾಜು ಹಾಕಲಾಗುತ್ತಿದೆ. ಈ ಹರಾಜಿಗಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದಾರೆ. ಈ ಮಿನಿ ಹರಾಜಿನಲ್ಲಿ ಪ್ರಮುಖವಾಗಿ ಇಂಗ್ಲೆಂಡ್​ನ ಆಲ್​ರೌಂಡರ್​ಗಳಾದ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಸೇರಿದಂತೆ ಹಲವು ಆಟಗಾರರಿಗೆ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸನ್‌ರೈಸರ್ಸ್ ಹೈದರಾಬಾದ್ ಹೆಚ್ಚು ಹಣವನ್ನು ಹೊಂದಿದ್ದು, ಇದರ ನಂತರ ಪಂಜಾಬ್ ಕಿಂಗ್ಸ್ ಇದೆ. ಈ ಎರಡೂ ತಂಡಗಳು ಕೊಚ್ಚಿಯಲ್ಲಿ ಮುಖ್ಯ ಆಟಗಾರರ ಮೇಲೆ ದೊಡ್ಡ ಮೊತ್ತದ ಹಣ ಹೂಡುವುದನ್ನು ನಾವು ಕಾಣಬಹುದಾಗಿದೆ.

source https://tv9kannada.com/sports/cricket-news/ipl-auction-2023-live-updates-on-players-sold-unsold-and-team-wise-players-list-and-retained-players-list-full-details-in-kannada-psr-au14-489577.html

Leave a Reply

Your email address will not be published. Required fields are marked *