IPL 2023 Orange and Purple Cap: ಈ ಸಲ ಕ್ಯಾಪ್ ನಮ್ದೆ..!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ 36 ಪಂದ್ಯಗಳು ಮುಕ್ತಾಯಗೊಂಡಿದೆ. ಇತ್ತ ಆಡಿರುವ 8 ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ಆಟಗಾರರು ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.36 ಪಂದ್ಯಗಳ ಬಳಿಕ ಅತ್ಯಧಿಕ ರನ್​ ಕಲೆಹಾಕಿರುವ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್​ ಧರಿಸಿದ್ದಾರೆ. ಡುಪ್ಲೆಸಿಸ್ 8 ಪಂದ್ಯಗಳಿಂದ 422 ರನ್​ ಕಲೆಹಾಕಿದ್ದಾರೆ. ಈ ವೇಳೆ 5 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.ಸದ್ಯ ಆರೆಂಜ್ ಕ್ಯಾಪ್ ಧರಿಸಿರುವ ಫಾಫ್ ಡುಪ್ಲೆಸಿಸ್​ಗೆ ಪೈಪೋಟಿ ನೀಡುತ್ತಿರುವುದು ಕೂಡ ಆರ್​ಸಿಬಿ ಆಟಗಾರ. ಅಂದರೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 8 ಪಂದ್ಯಗಳಿಂದ 321 ರನ್​ ಕಲೆಹಾಕಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ 2ನೇ ಸ್ಥಾನದಲ್ಲಿದ್ದಾರೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಅತ್ಯಧಿಕ ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. 8 ಪಂದ್ಯಗಳಿಂದ 7.31 ರನ್ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿರುವ ಸಿರಾಜ್ ಪರ್ಪಲ್ ಕ್ಯಾಪ್ ಧರಿಸಿದ್ದಾರೆ.ಇದಾಗ್ಯೂ ಸಿರಾಜ್​ಗೆ ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್​ರಿಂದ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ರಶೀದ್ ಖಾನ್ 7 ಪಂದ್ಯಗಳಿಂದ 14 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಸಿರಾಜ್ ಹಾಗೂ ರಶೀದ್ ನಡುವೆ ಪರ್ಪಲ್​ ಕ್ಯಾಪ್​ಗಾಗಿ ಭರ್ಜರಿ ಪೈಪೋಟಿ ಕಂಡು ಬರಲಿದೆ.ಒಟ್ಟಿನಲ್ಲಿ ಕಪ್ ಗೆಲ್ಲುವ ಉತ್ಸಾಹದಲ್ಲಿರುವ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ ಹಾಗೂ ಮೊಹಮ್ಮದ್ ಸಿರಾಜ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಈ ಮೂಲಕ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಧರಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-orange-and-purple-cap-list-kannada-news-zp-au50-564460.html

Views: 0

Leave a Reply

Your email address will not be published. Required fields are marked *