IPL 2023 Orange Cap: ಆರೆಂಜ್​ ಕ್ಯಾಪ್​ ರೇಸ್​ನಲ್ಲಿ ಆರ್​ಸಿಬಿ ನಾಯಕನ ಅಕ್ಕ ಪಕ್ಕದಲ್ಲೂ ಯಾರಿಲ್ಲ..!

16ನೇ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದೆ. ಈ ಲೀಗ್​ನಲ್ಲಿ ಇದುವರೆಗೆ 33 ಪಂದ್ಯಗಳು ಪೂರ್ಣಗೊಂಡಿದ್ದು ಒಂದೆಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ತಂಡಗಳ ನಡುವೆ ತೀವ್ರ ಕದನ ಮುಂದುವರೆದಿದೆ. ಇತ್ತ ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ....ಆರೆಂಜ್ ಕ್ಯಾಪ್ ರೇಸ್​ನಲ್ಲಿ ಸದ್ಯ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿದ್ದು, ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ಫಾಫ್ 405 ರನ್ ಬಾರಿಸಿದ್ದಾರೆ. 67.50 ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಫಾಫ್ ಇದುವರೆಗೆ 33 ಬೌಂಡರಿ ಹಾಗೂ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇದ್ದು, ಈ ಆಟಗಾರ 7 ಇನ್ನಿಂಗ್ಸ್‌ಗಳಲ್ಲಿ ಸತತ ನಾಲ್ಕನೇ ಅರ್ಧಶತಕದೊಂದಿಗೆ 314 ರನ್ ಗಳಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ 285 ರನ್ ಸಿಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ.ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಓಪನರ್ ಕೊಹ್ಲಿ ಇದ್ದು, ವಿರಾಟ್ ಇದುವರೆಗೆ 7 ಇನ್ನಿಂಗ್ಸ್​ಗಳಲ್ಲಿ 279 ಬಾರಿಸಿದ್ದಾರೆ.5ನೇ ಸ್ಥಾನದಲ್ಲಿ 7 ಇನ್ನಿಂಗ್ಸ್​ಗಳಲ್ಲಿ 270 ರನ್ ಬಾರಿಸಿರುವ ಸಿಎಸ್​ಕೆ ಓಪನರ್ ರುತುರಾಜ್ ಗಾಯಕ್ವಾಡ್ ಇದ್ದಾರೆ.262 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದಾರೆ.7 ಇನ್ನಿಂಗ್ಸ್​ಗಳಲ್ಲಿ 254 ರನ್ ಬಾರಿಸಿರುವ ಕೆಕೆಆರ್ ಆರಂಭಿಕ ವೆಂಕಟೇಶ್ ಅಯ್ಯರ್​ಗೆ 7ನೇ ಸ್ಥಾನ8ನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಆಟಗಾರ ಮ್ಯಾಕ್ಸ್​ವೆಲ್ ಇದ್ದು, ಅವರು ಇದುವರೆಗೆ 253 ರನ್ ಚಚ್ಚಿದ್ದಾರೆ.9ನೇ ಸ್ಥಾನದಲ್ಲಿ 244 ರನ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ ಇದ್ದಾರೆ.10ನೇ ಸ್ಥಾನದಲ್ಲಿರುವ ಲಕ್ನೋ ಆರಂಭಿಕ ಕೈಲ್ ಮೇಯರ್ಸ್​ 7 ಇನ್ನಿಂಗ್ಸ್​ಗಳಲ್ಲಿ 243 ರನ್ ಸಿಡಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-orange-cap-most-runs-so-far-this-season-after-33rd-match-psr-au14-562668.html

Views: 0

Leave a Reply

Your email address will not be published. Required fields are marked *