IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಅಂಪೈರ್ ತೀರ್ಪು

IPL 2023 LSG vs MI: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ 11 ರನ್​ಗಳಿಸಿ ಔಟಾದರೆ, ಇಶಾನ್ ಕಿಶನ್ 15 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.ಇನ್ನು ಸೂರ್ಯಕುಮಾರ್ ಯಾದವ್ (33) ಹಾಗೂ ಕ್ಯಾಮರೋನ್ ಗ್ರೀನ್ (41) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಇವರಿಬ್ಬರ ನಿರ್ಗಮನದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿತು.ಈ ಹಂತದಲ್ಲಿ ಕ್ರೀಸ್​ನಲ್ಲಿದ್ದ ಟಿಮ್ ಡೇವಿಡ್ ಕಡೆಯಿಂದ ಭರ್ಜರಿ ಬ್ಯಾಟಿಂಗ್ ಅನ್ನು ಮುಂಬೈ ಇಂಡಿಯನ್ಸ್ ನಿರೀಕ್ಷಿತ್ತು. ಆದರೆ 16ನೇ ಓವರ್​ನಲ್ಲಿ ಯಶ್ ಠಾಕೂರ್ ಎಸೆದ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು.ಆದರೆ ಚೆಂಡು ನೇರವಾಗಿ ದೀಪಕ್ ಹೂಡಾ ಅವರ ಕೈ ಸೇರಿತು. ಇತ್ತ ಚೆಂಡು ಸೊಂಟಕ್ಕಿಂತ ಮೇಲ್ಭಾಗದತ್ತ ಬಂದಿದ್ದರಿಂದ ಟಿಮ್ ಡೇವಿಡ್ ಹೈ ನೋಬಾಲ್​ಗಾಗಿ ಅಂಪೈರ್​ಗೆ ಮನವಿ ಸಲ್ಲಿಸಿದರು. ಈ ವೇಳೆ ಬೌಲ್ ಎತ್ತರವನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.ಆದರೆ ಟಿಮ್ ಡೇವಿಡ್ ಚೆಂಡು ನನ್ನ ಸೊಂಟಕ್ಕಿಂತ ಮೇಲ್ಭಾಗದಲ್ಲಿತ್ತು ಎಂಬ ವಾದವನ್ನು ಮುಂದಿಟ್ಟು ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದರು.ಆದರೆ ಮೂರನೇ ಅಂಪೈರ್ ವಿಡಿಯೋ ಪರಿಶೀಲಿಸಿದ ವೇಳೆ ಚೆಂಡು ಟಿಮ್ ಟೇವಿಡ್ ಅವರ ಸೊಂಟಕ್ಕಿಂತ ತುಸು ಕೆಳ ಭಾಗದಲ್ಲಿರುವುದು ಕಾಣಬಹುದು. ಹಾಗೆಯೇ ಬಾಲ್ ನೇರವಾಗಿ ವಿಕೆಟ್ ಬೇಲ್ಸ್ ಅನ್ನು ಕೂಡ ಎಗರಿಸುವಂತಿದೆ. ಇದೇ ಕಾರಣದಿಂದಾಗಿ ಟಿವಿ ಅಂಪೈರ್ ನೋಬಾಲ್ ಅಲ್ಲ, ಔಟ್ ಎಂಬ ತೀರ್ಪು ನೀಡಿದ್ದರು.ಇದಾಗ್ಯೂ ಅಂಪೈರ್ ತೀರ್ಪಿನ ವಿರುದ್ಧ ಇದೀಗ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಅದು ನೋಬಾಲ್/ಗುಡ್ ಬಾಲ್ ಎಂಬ ಪರ-ವಿರೋಧ ಚರ್ಚೆಗಳು ಶರುವಾಗಿದೆ.

source https://tv9kannada.com/photo-gallery/cricket-photos/ipl-2023-playoffs-tim-david-out-or-not-out-kannada-news-zp-586245.html

Views: 0

Leave a Reply

Your email address will not be published. Required fields are marked *