Skip to content
  • Thursday, March 26, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • IPL 2023 Points Table: ಭರ್ಜರಿ ಜಯದೊಂದಿಗೆ ಟಾಪ್-4 ಗೆ RCB ಎಂಟ್ರಿ
Sports

IPL 2023 Points Table: ಭರ್ಜರಿ ಜಯದೊಂದಿಗೆ ಟಾಪ್-4 ಗೆ RCB ಎಂಟ್ರಿ

May 18, 2023
samagrasuddi

IPL 2023 Points Table: ಐಪಿಎಲ್ ಸೀಸನ್ 16 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳ 13 ಪಂದ್ಯಗಳು ಮುಗಿದಿದೆ. ಇದಾಗ್ಯೂ ಪ್ಲೇಆಫ್ ಪ್ರವೇಶಿಸಿರುವುದು ಗುಜರಾತ್ ಟೈಟಾನ್ಸ್ ತಂಡ ಮಾತ್ರ.ಅದರಲ್ಲೂ ಕೆಕೆಆರ್ ವಿರುದ್ಧ ಸೋತಿರುವ ಸಿಎಸ್​ಕೆ ತಂಡವು ಪ್ಲೇಆಫ್ ಪ್ರವೇಶಿಸಲು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಟಾಪ್-4 ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.ಅತ್ತ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಲಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.​ಅದರಂತೆ 65 ಪಂದ್ಯಗಳ ಮುಕ್ತಾಯದ ಬಳಿಕ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...1- ಗುಜರಾತ್ ಟೈಟಾನ್ಸ್ (18 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 4 ಸೋಲು ಹಾಗೂ 9 ಗೆಲುವು ದಾಖಲಿಸಿದೆ. ಈ ಮೂಲಕ +0.835 ನೆಟ್​ ರನ್​ ರೇಟ್​ನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಂಡಿದೆ.2- ಚೆನ್ನೈ ಸೂಪರ್ ಕಿಂಗ್ಸ್ (15 ಅಂಕಗಳು)​: 13 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 5 ಸೋಲು ಮತ್ತು 7 ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ರದ್ದಾದ ಕಾರಣ 1 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ +0.381​ ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.5- ಮುಂಬೈ ಇಂಡಿಯನ್ಸ್ (14 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 7 ಜಯ ಹಾಗೂ 6 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.128 ನೆಟ್​ ರನ್​ ರೇಟ್ ಪಡೆದು 5ನೇ ಸ್ಥಾನದಲ್ಲಿದೆ.3- ಲಕ್ನೋ ಸೂಪರ್ ಜೈಂಟ್ಸ್ (15 ಅಂಕಗಳು)​: 13 ಪಂದ್ಯಗಳಲ್ಲಿ 5 ಸೋಲು ಹಾಗೂ 7 ಗೆಲುವು ದಾಖಲಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಒಂದು ಪಂದ್ಯವು ರದ್ದಾಗಿತ್ತು. ಅದರಂತೆ 1 ಅಂಕ ಪಡೆದಿರುವ ಲಕ್ನೋ ತಂಡವು +0.304 ನೆಟ್​ ರನ್​ ರೇಟ್​ನೊಂದಿಗೆ 3ನೇ ಸ್ಥಾನ ಅಲಂಕರಿಸಿದೆ.4- ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು 13 ಪಂದ್ಯಗಳನ್ನು ಮುಗಿಸಿದ್ದು, ಇದರಲ್ಲಿ 7 ಪಂದ್ಯಗಳಲ್ಲಿ ಗೆದ್ದರೆ, 6 ರಲ್ಲಿ ಸೋತಿದೆ. ಇದೀಗ +0.180 ನೆಟ್​ ರನ್​ ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ.6- ರಾಜಸ್ಥಾನ್ ರಾಯಲ್ಸ್ (12 ಅಂಕಗಳು): 13 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 6 ಗೆಲುವು ಹಾಗೂ 7 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ ಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ನೆಟ್ +0.140.7- ಕೊಲ್ಕತ್ತಾ ನೈಟ್ ರೈಡರ್ಸ್ (12 ಅಂಕಗಳು): ಕೆಕೆಆರ್ ಆಡಿರುವ 13 ಪಂದ್ಯಗಳಲ್ಲಿ 7 ಸೋಲು, 6 ಗೆಲುವು ದಾಖಲಿಸಿದೆ. ಇದೀಗ -0.256 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 7ನೇ ಸ್ಥಾನದಲ್ಲಿದೆ.8 - ಪಂಜಾಬ್ ಕಿಂಗ್ಸ್ (12 ಅಂಕಗಳು)​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, ಹಾಗೆಯೇ 7 ರಲ್ಲಿ ಸೋಲು ಕಂಡಿದೆ. ಇದೀಗ -0.308 ನೆಟ್​ ರನ್​ ರೇಟ್​ನೊಂದಿಗೆ 8ನೇ ಸ್ಥಾನ ಅಲಂಕರಿಸಿದೆ.9- ಡೆಲ್ಲಿ ಕ್ಯಾಪಿಟಲ್ಸ್ (10 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಪ್ರಸ್ತುತ ಪಾಯಿಂಟ್ ಟೇಬಲ್​ನಲ್ಲಿ -0.572 ನೆಟ್​ ರನ್​ ರೇಟ್​ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9ನೇ ಸ್ಥಾನದಲ್ಲಿದೆ.10- ಸನ್​ರೈಸರ್ಸ್ ಹೈದರಾಬಾದ್ (8 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ, 8 ಮ್ಯಾಚ್​ನಲ್ಲಿ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -0.558 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ.ಶುಕ್ರವಾರದವರೆಗೆ (ಮೇ 18) ಒಟ್ಟು 65 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

source https://tv9kannada.com/photo-gallery/cricket-photos/ipl-2023-points-table-after-rcb-vs-srh-match-kannada-news-zp-582043.html

Tags: Bengaluru, Cricket, IPL, IPL 2023, RCB, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

LSG New Jersey: LSG ಮಾಸ್ಟರ್ ​ಪ್ಲ್ಯಾನ್: ಹೊಸ ಜೆರ್ಸಿ ಅನಾವರಣ
ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿರಲು ಕಾರಣಗಳೇನು ? ಹೈಕಮಾಂಡ್ ನಿಲುವೇನು ?

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ

March 25, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
  • ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ.”
  • SSLC 2026 : ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮುಂದೂಡಿಕೆ; ಹೊಸ ದಿನಾಂಕದ ವಿವರ.
  • Horoscope Today, 26 March: ಈ ರಾಶಿಯವರಿಗೆ ಇಂದು ಮಾನಸಿಕವಾಗಿ ಸ್ವಲ್ಪ ಗೊಂದಲದ ದಿನ.
  • 2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ
  • RCB New Era:ಬೃಹತ್ ಮೊತ್ತಕ್ಕೆ ಮಾರಾಟವಾದ ಆರ್‌ಸಿಬಿ; ಹೊಸ ಮಾಲೀಕರು ಯಾರು? ಕೊಹ್ಲಿ ಭವಿಷ್ಯವೇನು? ಸಂಪೂರ್ಣ ವಿವರ.
Copyright © 2026
CONTACT US
Theme by: Theme Horse
Proudly Powered by: WordPress