IPL 2023 Prize Money: ಚಾಂಪಿಯನ್​ಗೆ 20 ಕೋಟಿ! ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ಸಿಗುವ ಬಹುಮಾನವೆಷ್ಟು ಗೊತ್ತಾ?

IPL 2023 Prize Money: ಚಾಂಪಿಯನ್​ಗೆ 20 ಕೋಟಿ! ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ಸಿಗುವ ಬಹುಮಾನವೆಷ್ಟು ಗೊತ್ತಾ?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ ಗುಜರಾತ್ ಇದೀಗ ಫೈನಲ್​ನಲ್ಲಿ ಚೆನ್ನೈ ತಂಡವನ್ನು ಎದುರಿಸಲು ಸಜ್ಜಾಗಿದೆ. ನಾಳೆ ಅಂದರೆ, ಮಾ.28 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈ ತಂಡವನ್ನು (Chennai Super Kings vs Gujarat Titans) ಎದುರಿಸಲಿದೆ. ಹೀಗಾಗಿ ಭಾನುವಾರ ಸಂಜೆ 7.30ಕ್ಕೆ ಆರಂಭವಾಗಲಿರುವ ಪಂದ್ಯದ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಇದರೊಂದಿಗೆ ಈ ಆವೃತ್ತಿಯ ಚಾಂಪಿಯನ್​ ಹಾಗೂ ರನ್ನರ್ ಅಪ್ ಸೇರಿದಂತೆ ವಿವಿದ ಪ್ರಶಸ್ತಿ ಪಡೆದ ಆಟಗಾರರಿಗೆ ಸಿಗುವ ಬಹುಮಾನದ ಮೊತ್ತ (IPL 2023 Prize Money) ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಕೂಡ ಎಲ್ಲರ ಆಸಕ್ತದಾಯಕ ವಿಚಾರವಾಗಿದೆ. ಈ ಮಿಲಿಯನ್ ಡಾಲರ್ ಟೂರ್ನಿಯ ಮೊದಲ ಎರಡು ಆವೃತ್ತಿಗಳಲ್ಲಿ, ವಿಜೇತ ತಂಡವು 4.8 ಕೋಟಿ ರೂಪಾಯಿಗಳನ್ನು ಪಡೆದರೆ, ರನ್ನರ್ ಅಪ್ ತಂಡಕ್ಕೆ 2.4 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇನ್ನು ಇತ್ತೀಚಿನ ಅಂದರೆ, ಕಳೆದ ಸೀಸನ್ ಐಪಿಎಲ್ ಗೆದ್ದಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ.ಗಳನ್ನು ಬಹುಮಾನವನ್ನಾಗಿ ನೀಡಲಾಗಿತ್ತು. ಹಾಗೆಯೇ ರನ್ನರ್ ಅಪ್ ಆಗಿದ್ದ ರಾಜಸ್ಥಾನ್ ರಾಯಲ್ಸ್ 13 ಕೋಟಿ ರೂ. ಬಹುಮಾನ ಪಡೆದಿತ್ತು. ಇನ್ನು ಈ ಆವೃತ್ತಿಯ ವಿಚಾರಕ್ಕೆ ಬಂದರೆ, ಈ ಆವೃತ್ತಿಯಲ್ಲೂ ಕಳೆದ ಆವೃತ್ತಿಯಷ್ಟೇ ಬಹುಮಾನ ನೀಡಲಾಗುತ್ತಿದೆ.

ಈ ಬಾರಿಯ ಐಪಿಎಲ್​ಗಾಗಿ ಸುಮಾರು 46.5 ಕೋಟಿ ರೂಗಳನ್ನು ಬಹುಮಾನದ ಮೊತ್ತವನ್ನಾಗಿ ಮೀಸಲಿರಿಸಲಾಗಿದೆ. ಮೇಲೆ ತಿಳಿಸಿರುವಂತೆ ನಾಳಿನ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಕ್ಕರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 13 ಕೋಟಿ ರೂ. ಬಹುಮಾನ ಸಿಗಲಿದೆ. ಹಾಗೆಯೇ ಈ ಎರಡೂ ತಂಡಗಳನ್ನು ಹೊರತುಪಡಿಸಿ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಕೂಡ ಭಾರಿ ಮೊತ್ತವನ್ನು ಬಹುಮಾನವನ್ನಾಗಿ ಪಡೆಯಲಿವೆ. ಇದಲ್ಲದೇ ಇತರೆ ಪ್ರಶಸ್ತಿಗಳನ್ನು ಪಡೆದ ಆಟಗಾರರಿಗೂ ಲಕ್ಷ ಲಕ್ಷ ರೂ. ಬಹುಮಾನ ಸಿಗಲಿದೆ. ಹಾಗಿದ್ದರೆ ಯಾವ ಪ್ರಶಸ್ತಿಗೆ ಎಷ್ಟು ಹಣ ನೀಡಲಾಗುತ್ತದೆ ಎಂಬುದರ ವಿವರ ಇಲ್ಲಿದೆ.

IPL 2023: 6,6,6; 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೌಲರ್​ ಸದ್ದಡಗಿಸಿದ ಗಿಲ್..!

ಯಾವ ಪ್ರಶಸ್ತಿ ಗೆದ್ದವರಿಗೆ ಎಷ್ಟು ಹಣ ಸಿಗಲಿದೆ?

• ವಿಜೇತ ತಂಡ- ರೂ 20 ಕೋಟಿ

• ರನ್ನರ್ ಅಪ್ ತಂಡ- ರೂ 13 ಕೋಟಿ

• ಮೂರನೇ ಸ್ಥಾನ ತಂಡ (ಮುಂಬೈ ಇಂಡಿಯನ್ಸ್)- ರೂ 7 ಕೋಟಿ

• ನಾಲ್ಕನೇ ಸ್ಥಾನ ತಂಡ (ಲಕ್ನೋ ಸೂಪರ್ ಜೈಂಟ್ಸ್)- ರೂ 6.5 ಕೋಟಿ

• ಪಂದ್ಯಾವಳಿಯ ಉದಯೋನ್ಮುಖ ಆಟಗಾರ- ರೂ 20 ಲಕ್ಷ ರೂ

• ಸೀಸನ್‌ನ ಸೂಪರ್ ಸ್ಟ್ರೈಕರ್- ರೂ 15 ಲಕ್ಷ

• ಆರೆಂಜ್ ಕ್ಯಾಪ್ ಹೋಲ್ಡರ್- ರೂ 15 ಲಕ್ಷ (ಹೆಚ್ಚಿನ ರನ್‌)

• ಪರ್ಪಲ್ ಕ್ಯಾಪ್ ಹೋಲ್ಡರ್- ರೂ 15 ಲಕ್ಷ (ಹೆಚ್ಚಿನ ವಿಕೆಟ್‌)

• ಸೀಸನ್​ನ ಅತ್ಯಂತ ಮೌಲ್ಯಯುತ ಆಟಗಾರ- ರೂ 12 ಲಕ್ಷ

• ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರನಿಗೆ – 12 ಲಕ್ಷ ರೂ.

• ಸೀಸನ್​ನ ಗೇಮ್ ಚೇಂಜರ್​ಗೆ- 12 ಲಕ್ಷ ರೂ.

ಇನ್ನು ಈ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರರನನ್ನು ನೋಡುವುದಾದರೆ..

• ಶುಭ್​ಮನ್ ಗಿಲ್ (ಗುಜರಾತ್ ಟೈಟಾನ್ಸ್)- 851 ರನ್

• ಫಾಫ್ ಡು ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)- 730 ರನ್

• ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)- 639 ರನ್

• ಡೆವೊನ್ ಕಾನ್ವೇ (ಚೆನ್ನೈ ಸೂಪರ್ ಕಿಂಗ್ಸ್)- 625 ರನ್

• ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್)- 625 ರನ್

ಅತಿ ಹೆಚ್ಚು ವಿಕೆಟ್ ತೆಗೆದಿರುವ ಟಾಪ್ 5 ಬೌಲರ್​ಗಳು

• ಮೊಹಮ್ಮದ್ ಶಮಿ (ಗುಜರಾತ್ ಟೈಟಾನ್ಸ್)- 28 ವಿಕೆಟ್‌ಗಳು

• ರಶೀದ್ ಖಾನ್ (ಗುಜರಾತ್ ಟೈಟಾನ್ಸ್)- 27 ವಿಕೆಟ್‌ಗಳು

• ಮೋಹಿತ್ ಶರ್ಮಾ (ಗುಜರಾತ್ ಟೈಟಾನ್ಸ್)- 24 ವಿಕೆಟ್‌ಗಳು

• ಪಿಯೂಷ್ ಚಾವ್ಲಾ (ಮುಂಬೈ ಇಂಡಿಯನ್ಸ್)- 22 ವಿಕೆಟ್‌ಗಳು

• ಯುಜ್ವೇಂದ್ರ ಚಾಹಲ್ (ರಾಜಸ್ಥಾನ್ ರಾಯಲ್ಸ್) 1 ವಿಕೆಟ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-prize-money-details-how-much-prize-to-get-winning-teams-in-ipl-final-psr-588174.html

Leave a Reply

Your email address will not be published. Required fields are marked *