IPL 2023: ಪಂಜಾಬ್ ಕಿಂಗ್ಸ್​ ಸೋಲು RCBಗೆ ಪ್ಲಸ್ ಪಾಯಿಂಟ್

IPL 2023: ಐಪಿಎಲ್​ನ 64ನೇ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ ರೇಸ್​ನಲ್ಲಿ ಹಿಂದುಳಿದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವು ಆರ್​ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿ ಮಾರ್ಪಟ್ಟಿದೆ.ಏಕೆಂದರೆ 64ನೇ ಪಂದ್ಯಕ್ಕೂ ಮುನ್ನ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್​ನಲ್ಲಿ ಸಮಬಲದಲ್ಲಿದ್ದರು. ಉಭಯ ತಂಡಗಳು 12 ಅಂಕಗಳನ್ನು ಪಡೆದಿದ್ದರಿಂದ ಕೊನೆಯ 2 ಪಂದ್ಯಗಳನ್ನು ಗೆದ್ದು 16 ಪಾಯಿಂಟ್ಸ್​ನೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇತ್ತು.ಆದರೀಗ ಪಂಜಾಬ್ ಕಿಂಗ್ಸ್ ಸೋತಿದ್ದರಿಂದ ಆರ್​ಸಿಬಿ ತಂಡದ ಹಾದಿ ಮತ್ತಷ್ಟು ಸುಗಮವಾಗಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ತಂಡ ಕೊನೆಯ ಪಂದ್ಯದಲ್ಲಿ ಗೆದ್ದರೂ ಇನ್ನು 14 ಪಾಯಿಂಟ್ಸ್ ಮಾತ್ರ ಗಳಿಸಲಿದೆ. ಇತ್ತ ಆರ್​ಸಿಬಿ ತನ್ನ ಮುಂದಿನ 2 ಪಂದ್ಯಗಳನ್ನು ಗೆದ್ದು 16 ಪಾಯಿಂಟ್ಸ್​ನೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇಲ್ಲಿ ಆರ್​ಸಿಬಿಗೆ ಮುಂಬೈ ಇಂಡಿಯನ್ಸ್ ತಂಡದಿಂದ ಪೈಪೋಟಿ ಎದುರಾಗಲಿದೆ.
ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಕೊನೆಯ ಪಂದ್ಯದಲ್ಲಿ ಗೆದ್ದರೆ 16 ಪಾಯಿಂಟ್ಸ್​ಗಳಿಸಲಿದೆ. ಈ ಮೂಲಕ ಪ್ಲೇಆಫ್​ಗೆ ಪ್ರವೇಶಿಸುವ ಉತ್ತಮ ಅವಕಾಶ ಹೊಂದಿದೆ.ಇತ್ತ ಆರ್​ಸಿಬಿ ತಂಡವು ಸನ್​ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಇಲ್ಲಿ ಮುಂಬೈ ಇಂಡಿಯನ್ಸ್​ಗಿಂತ ಆರ್​ಸಿಬಿ ತಂಡದ ನೆಟ್ ರನ್​ ರೇಟ್ ಉತ್ತಮವಾಗಿದ್ದರೆ ಮಾತ್ರ ಫಾಫ್ ಡುಪ್ಲೆಸಿಸ್ ಪಡೆ 4ನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.ಆದರೆ ಇಲ್ಲಿ ಆರ್​ಸಿಬಿ ಲೀಗ್ ಹಂತದ ಕೊನೆಯ ಪಂದ್ಯವಾಡಲಿದೆ. ಇದುವೇ ಫಾಫ್ ಪಡೆಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ 16 ಅಂಕಗಳನ್ನು ಪಡೆದರೂ, ಆರ್​ಸಿಬಿ ಗುಜರಾತ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನೆಟ್ ರನ್​ ರೇಟ್ ಟಾರ್ಗೆಟ್ ಮಾಡಿ ಗೆಲ್ಲಲು ಉತ್ತಮ ಅವಕಾಶವಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ಮೂಲಕ ಆರ್​ಸಿಬಿ ತಂಡವು ಪ್ಲೇಆಫ್​ಗೆ ಪ್ರವೇಶಿಸಬಹುದು.

source https://tv9kannada.com/photo-gallery/cricket-photos/ipl-2023-punjab-kings-fall-way-behind-in-rcbs-playoffs-race-kannada-news-zp-581649.html

Leave a Reply

Your email address will not be published. Required fields are marked *