IPL 2023: ರಶ್ಮಿಕಾ, ಕತ್ರಿನಾ, ಟೈಗರ್ ಶ್ರಾಫ್; ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಸ್ಟಾರ್​ಗಳ ಮೆರುಗು

ಈ ಬಾರಿಯ ಐಪಿಎಲ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಐಪಿಎಲ್ ಉದ್ಘಾಟನಾ ಸಮಾರಂಭವೂ ನಡೆಯಲಿದ್ದು, ಇದರಲ್ಲಿ ಹಲವು ಬಾಲಿವುಡ್ ತಾರೆಯರು ಕಾಣಿಸಿಕೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಯಾವ ತಾರೆಯರು ಪ್ರದರ್ಶನ ನೀಡಲಿದ್ದಾರೆ ಎಂಬುದರ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಕೆಲವು ಸ್ಟಾರ್​ಗಳ ಹೆಸರುಗಳು ಸಖತ್ ಸದ್ದು ಮಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ. ರಶ್ಮಿಕಾ ಜೊತೆಗೆ ಬಾಲಿವುಡ್ ಹಿರಿಯ ನಟಿ ಕತ್ರಿನಾ ಕೈಫ್ ಕೂಡ ಕಾಣಿಸಿಕೊಳ್ಳಲಿದ್ದಾರೆ.  ಸದ್ಯಕ್ಕೆ ಕತ್ರಿನಾ ಭಾಗವಹಿಸುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಮಾಧ್ಯಮ ವರದಿಗಳಲ್ಲಿ ಅವರ ಹೆಸರು ಹರಿದಾಡುತ್ತಿದೆ.ಇವರ ಜೊತೆಗೆ ಸೌತ್ ಇಂಡಿಯನ್ ನಟಿ ತಮನ್ನಾ ಭಾಟಿಯಾ ಕೂಡ ಹೆಜ್ಜೆ ಹಾಕಲಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಕೂಡ ಪ್ರದರ್ಶನ ನೀಡಿದ್ದಾರೆ ಎಂಬ ವರದಿಗಳಿವೆ. ಖ್ಯಾತ ಸಿನಿತಾರೆಯರ ಜೊತೆಗೆ ಖ್ಯಾತ ಗಾಯಕ ಅರಿಜಿತ್ ಸಿಂಗ್ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.

source https://tv9kannada.com/photo-gallery/cricket-photos/ipl-2023-opening-ceremony-rashmika-mandanna-tamannah-bhatia-to-perform-psr-au14-544982.html

Views: 0

Leave a Reply

Your email address will not be published. Required fields are marked *