IPL 2023: RCB ಮುಂದಿದೆ 2 ಬಿಗ್ ಟಾರ್ಗೆಟ್

IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಆವೃತ್ತಿಯಲ್ಲಿ ಪ್ಲೇಆಫ್ ಪ್ರವೇಶಿಸಲು RCB ಮುಂದಿದೆ 2 ದೊಡ್ಡ ಸವಾಲುಗಳು. ಈ ಸವಾಲುಗಳನ್ನು ಮೆಟ್ಟಿ ನಿಂತರೆ ಫಾಫ್ ಡುಪ್ಲೆಸಿಸ್ ಬಳಗಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.ಇಲ್ಲಿ ಆರ್​ಸಿಬಿ ಮುಂದಿರುವ ಮೊದಲ ಸವಾಲು ಸನ್​ರೈಸರ್ಸ್ ಹೈದರಾಬಾದ್. ಮೇ 18 ರಂದು ಹೈದರಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ಆಸೆ ಜೀವಂತವಿರಲಿದೆ. ಹೀಗಾಗಿಯೇ ಫಾಫ್ ಪಡೆಗೆ ಮುಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.ಇನ್ನು 2ನೇ ಸವಾಲು ಗುಜರಾತ್ ಟೈಟಾನ್ಸ್. ಮೇ 21 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಆರ್​ಸಿಬಿ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತ.ಏಕೆಂದರೆ ಅಂಕಪಟ್ಟಿಯಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಸೋತು, ಕೊನೆಯ ಪಂದ್ಯ ಗೆದ್ದರೂ 16 ಪಾಯಿಂಟ್ಸ್​ ಆಗಲಿದೆ. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋತರೆ ಆರ್​ಸಿಬಿ ತಂಡದ ಪ್ಲೇಆಫ್ ಅವಕಾಶ ಮತ್ತಷ್ಟು ಹೆಚ್ಚಾಗಲಿದೆ. ಏಕೆಂದರೆ 13 ಪಾಯಿಂಟ್ಸ್ ಹೊಂದಿರುವ ಲಕ್ನೋ ತಂಡವು ಮುಂದಿನ 2 ಪಂದ್ಯಗಳನ್ನು ಗೆದ್ದರೆ 17 ಪಾಯಿಂಟ್ಸ್​ ಪಡೆಯಲಿದೆ. ಒಂದು ವೇಳೆ ಒಂದು ಮ್ಯಾಚ್ ಸೋತರೆ 15 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರಲಿದೆ.ಇತ್ತ ಆರ್​ಸಿಬಿ ತಂಡವು ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಬಹುದು. ಇಲ್ಲಿ ಮುಂಬೈ ಇಂಡಿಯನ್ಸ್ (16 ಅಂಕ) ಹಾಗೂ ಪಂಜಾಬ್ ಕಿಂಗ್ಸ್​ 16 ಅಂಕಗಳನ್ನು ಪಡೆದರೂ ಆರ್​ಸಿಬಿಗೆ ನೆಟ್​ ರನ್​ ರೇಟ್ ಟಾರ್ಗೆಟ್​ನೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡುವ ಅವಕಾಶ ಇದೆ.ಏಕೆಂದರೆ ಈ ಬಾರಿಯ ಐಪಿಎಲ್​ನ ಲೀಗ್​ ಹಂತದ ಕೊನೆಯ ಪಂದ್ಯವನ್ನು ಆರ್​ಸಿಬಿ ಆಡಲಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಪ್ಲೇಆಫ್ ಪ್ರವೇಶಿಸಲು ಬೇಕಿರುವ ನೆಟ್ ರನ್​ ರೇಟ್ ಅನ್ನು ಟಾರ್ಗೆಟ್ ಮಾಡಿ ನಿರ್ದಿಷ್ಟ ಓವರ್​ಗಳಲ್ಲಿ ಪಂದ್ಯ ಗೆಲ್ಲುವ ಅವಕಾಶ ಆರ್​ಸಿಬಿಗೆ ಇರಲಿದೆ. ಹೀಗಾಗಿಯೇ ಈ ಬಾರಿ ಆರ್​ಸಿಬಿಗೆ ಪ್ಲೇಆಫ್ ಪ್ರವೇಶಿಸಲು ಉತ್ತಮ ಅವಕಾಶವಿದೆ.

source https://tv9kannada.com/photo-gallery/cricket-photos/ipl-2023-rcb-next-match-rcb-vs-srh-kannada-news-zp-579376.html

Views: 0

Leave a Reply

Your email address will not be published. Required fields are marked *