IPL 2023: ಸಿಕ್ಸ್ ಸಿಡಿಸುವುದರಲ್ಲಿ RCB ಬ್ಯಾಟರ್​ಗಳೇ ಮುಂದು..!

IPL 2023: ಐಪಿಎಲ್ ಸೀಸನ್ 16 ರ ಲೀಗ್ ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 64 ಪಂದ್ಯಗಳು ಮುಗಿದಿದ್ದು, ಈ ವೇಳೆ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಆರ್​ಸಿಬಿ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.ಅಂದರೆ ಟೂರ್ನಿಯುದ್ದಕ್ಕೂ ಆರ್​ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ನಡುವೆಯೇ ಸಿಕ್ಸರ್ ಸರದಾರನ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿರುವುದು ವಿಶೇಷ. ಐಪಿಎಲ್ 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.1- ಫಾಫ್ ಡುಪ್ಲೆಸಿಸ್: ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ 12 ಪಂದ್ಯಗಳಲ್ಲಿ ಒಟ್ಟು 34 ಸಿಕ್ಸ್​ ಸಿಡಿಸಿ ಈ ಬಾರಿಯ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.2- ಗ್ಲೆನ್ ಮ್ಯಾಕ್ಸ್​ವೆಲ್: ಈ ಬಾರಿ ಆರ್​ಸಿಬಿ ಪರ 12 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಗ್ಲೆನ್ ಮ್ಯಾಕ್ಸ್​ವೆಲ್ 30 ಸಿಕ್ಸ್​ಗಳನ್ನು ಬಾರಿಸಿದ್ದಾರೆ.3- ಶಿವಂ ದುಬೆ: ಸಿಎಸ್​ಕೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ 11 ಇನಿಂಗ್ಸ್​ಗಳಲ್ಲಿ ಒಟ್ಟು 30 ಸಿಕ್ಸ್​ಗಳನ್ನು ಸಿಡಿಸಿದ್ದಾರೆ.4- ಯಶಸ್ವಿ ಜೈಸ್ವಾಲ್: ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 13 ಪಂದ್ಯಗಳಲ್ಲಿ ಒಟ್ಟು 26 ಸಿಕ್ಸ್​ಗಳನ್ನು ಬಾರಿಸಿದ್ದಾರೆ.5- ಮಾರ್ಕಸ್ ಸ್ಟೋಯಿನಿಸ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್​ರೌಂಡರ್ ಮಾರ್ಕಸ್ ಸ್ಟೋಯಿನಿಸ್ 13 ಇನಿಂಗ್ಸ್​ಗಳಲ್ಲಿ ಒಟ್ಟು 26 ಸಿಕ್ಸ್ ಸಿಡಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

source https://tv9kannada.com/photo-gallery/cricket-photos/ipl-2023-most-sixes-in-ipl-2023-players-list-kannada-news-zp-581154.html

Views: 0

Leave a Reply

Your email address will not be published. Required fields are marked *