IPL 2023 RCB: ದಿಗ್ಗಜರ ಸಮಾಗಮ: ಈ ಸಲ ಕಪ್ ನಮ್ದೇ ಎಂದ RCB ಫ್ಯಾನ್ಸ್

IPL 2023 RCB: ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ತಯಾರಿಯಲ್ಲಿದೆ. ಕಳೆದೆರಡು ದಿನಗಳಿಂದ ಬೆವರಿಳಿಸುತ್ತಿರುವ ಆರ್​ಸಿಬಿ ಆಟಗಾರರನ್ನು ಶುಕ್ರವಾರ ವಿಶೇಷ ಅತಿಥಿಯೊಬ್ಬರು ಭೇಟಿಯಾಗಿದ್ದರು. ಅದು ಕೂಡ ಕಿಂಗ್ ಕೊಹ್ಲಿಯ ಜೊತೆಗೆ ಆಗಮಿಸುವ ಮೂಲಕ ಎಂಬುದು ವಿಶೇಷ.ಹೌದು, ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್​ನ ಕಿಂಗ್ ಆದರೆ, ಭಾರತದ ಫುಟ್​ಬಾಲ್ ಅಂಗಳದ ಕಿಂಗ್ ಸುನಿಲ್ ಛೆಟ್ರಿ. ಇದೀಗ ಭಾರತೀಯ ಫುಟ್​ಬಾಲ್ ತಂಡದ ನಾಯಕ ಆರ್​ಸಿಬಿ ಕ್ಯಾಂಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಶುಕ್ರವಾರ ಆರ್​ಸಿಬಿ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಯೊಂದಿಗೆ ತಂಡ ಜೆರ್ಸಿ ಧರಿಸಿ ಆಗಮಿಸಿದ ಸುನಿಲ್ ಛೆಟ್ರಿ ಆಟಗಾರರೊಂದಿಗೆ ಸಮಾಲೋಚಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಆರ್​ಸಿಬಿ ಪ್ಲೇಯರ್​ಗಳನ್ನು ಹುರಿದುಂಬಿಸಿದರು.ಅಷ್ಟೇ ಅಲ್ಲದೆ ಅದ್ಭುತವಾಗಿ ಫೀಲ್ಡಿಂಗ್ ಮಾಡುವ ಮೂಲಕ ಆರ್​ಸಿಬಿ ಆಟಗಾರರೇ ನಿಬ್ಬೆರಗಾಗುವಂತೆ ಮಾಡಿದರು. ಇದೇ ವೇಳೆ ಮಾತನಾಡಿದ ಸುನಿಲ್ ಛೆಟ್ರಿ, ನಾನು ಕೂಡ ಬೆಂಗಳೂರಿಗ, ಆರ್​ಸಿಬಿ ನಮ್ಮ ತಂಡ ಎಂದರು.ನಾನು ಸಹ ಬೆಂಗಳೂರು ಫುಟ್​ಬಾಲ್ ಕ್ಲಬ್​ನ ಆಟಗಾರ. ಬಿಎಫ್​ಸಿ ಜೊತೆ ಆಡಲಾರಂಭಿಸಿದಾಗಿನಿಂದ ನಾನು ಆರ್​ಸಿಬಿಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಬೆಂಗಳೂರು ನಮ್ಮ ನಗರ, ಅಂದ್ರೆ ಬೆಂಗಳೂರಿನ ತಂಡ ನಮ್ಮದಲ್ಲವೇ ಎಂದರು. ಇದೀಗ ಆರ್​ಸಿಬಿ ಹಂಚಿಕೊಂಡಿರುವ ಸುನಿಲ್ ಛೆಟ್ರಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆರ್​ಸಿಬಿ ತಂಡದ ಮೇಲಿನ ಅವರ ಅಭಿಮಾನಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್​ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ಬಾರಿ ಹೊಸ ಉತ್ಸಾಹದಲ್ಲಿರುವ ಆರ್​ಸಿಬಿ ಹೋಮ್​ ಗ್ರೌಂಡ್​ ಮೂಲಕ ಐಪಿಎಲ್ ಅಭಿಯಾನ ಆರಂಭಿಸುತ್ತಿರುವುದರಿಂದ ಈ ಸಲ ಕಪ್ ನಮ್ದೇ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಫ್ಯಾನ್ಸ್​.

source https://tv9kannada.com/photo-gallery/cricket-photos/ipl-2023-rcb-sunil-chhetri-meets-virat-kohli-kannada-news-zp-au50-547166.html

Views: 0

Leave a Reply

Your email address will not be published. Required fields are marked *