IPL 2023 RCB vs GT: ಮಳೆ ಬಂದರೂ ಪಂದ್ಯ ನಡೆಯುವುದು ಬಹುತೇಕ ಖಚಿತ

IPL 2023 RCB vs GT: ಐಪಿಎಲ್​ನ 70ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ.ಏಕೆಂದರೆ ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್​ಸಿಬಿ ತಂಡವು 16 ಪಾಯಿಂಟ್ಸ್​ಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಆದರೀಗ ನಿರ್ಣಾಯಕ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ.ಏಕೆಂದರೆ ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. accuweather ವರದಿ ಪ್ರಕಾರ, ರಾತ್ರಿ 7 ಗಂಟೆಯಿಂದ ಮಳೆ ಶುರುವಾಗಲಿದ್ದು, ಶೇ.65 ರಷ್ಟು ಪಂದ್ಯದ ವೇಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.ಇನ್ನು ಸ್ಪೋರ್ಟ್ಸ್​ಸ್ಟಾರ್ ವರದಿ ಪ್ರಕಾರ, ಸಂಜೆ 7 ಗಂಟೆಗೆ ಶೇ.65 ರಷ್ಟು ಮಳೆಯಾಗಲಿದ್ದು, ಇದಾದ ಬಳಿಕ ಕೂಡ ಮಳೆ ಮುಂದುವರೆಯಲಿದೆ. ಅಲ್ಲದೆ ರಾತ್ರಿ 10 ಗಂಟೆಯವರೆಗೂ ಸತತ ಮಳೆಯಾಗಲಿದೆ ಎಂದು ವರದಿ ಮಾಡಿದೆ.ಆದರೆ ಇತ್ತ ಮಳೆ ಬಂದರೂ ಪಂದ್ಯವನ್ನು ಆಯೋಜಿಸಲು ಬೇಕಿರುವ ಅತ್ಯಾಧುನಿಕ ತಂತ್ರಜ್ಞಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ. ಹೀಗಾಗಿ ಮಳೆ ಬಂದು ಬಿಡುವು ಸಿಕ್ಕರೆ ಪಂದ್ಯವನ್ನು ಆಯೋಜಿಸುವುದು ಖಚಿತ ಎಂದೇ ಹೇಳಬಹುದು.ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು.ಸತತವಾಗಿ 1 ಗಂಟೆ ಮಳೆಯಾದರೆ ಮೈದಾನದ ಒಳಗಿರುವ ಸಬ್ ಏರ್ ಸಿಸ್ಟಂ ಮೂಲಕ 10 ರಿಂದ 15 ನಿಮಿಷದೊಳಗೆ ಗ್ರೌಂಡ್​ ಅನ್ನು  ಸಿದ್ಧಗೊಳಿಸಬಹುದು. ಅಲ್ಲದೆ ಸಬ್​ ಏರ್​ ಸಿಸ್ಟಂ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಶೀಘ್ರದಲ್ಲೇ ಒಣಗಿಸುವ ವ್ಯವಸ್ಥೆ ಕೂಡ ಇದೆ. ಹಾಗಾಗಿ ಸತತ ಮಳೆ ಬಂದರೂ ಪಂದ್ಯ ನಡೆಸಲು ಕೆಲವು ಗಂಟೆಗಳು ಲಭ್ಯವಾದರೂ ಓವರ್ ಕಡಿತಗಳೊಂದಿಗೆ ಆರ್​ಸಿಬಿ-ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ನಡೆಯಲಿದೆ. ಹೀಗಾಗಿ ಇಂದು ಬೆಂಗಳೂರಿನಾದ್ಯಂತ ಮಳೆಯಾದರೂ RCB vs GT ಪಂದ್ಯ ನಡೆಯುವುದು ಬಹುತೇಕ ಖಚಿತ ಎನ್ನಬಹುದು.

source https://tv9kannada.com/photo-gallery/cricket-photos/ipl-2023-rcb-vs-gt-weather-report-from-bangalore-kannada-news-zp-583861.html

Views: 0

Leave a Reply

Your email address will not be published. Required fields are marked *