

ಐಪಿಎಲ್ನ (IPL 2023) 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (( Kolkata Knight Riders vs Royal Challengers Bangalore)) ವಿರುದ್ಧ ಆತಿಥ್ಯ ವಹಿಸಲು ಸಿದ್ಧವಾಗಿದೆ. ಎರಡು ತಂಡಗಳು ಈ ಸೀಸನ್ನಲ್ಲಿ ಎರಡನೇ ಬಾರಿಗೆ ಇದೇ ಬುಧವಾರ, ಅಂದರೆ ಏಪ್ರಿಲ್ 26 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ (M. Chinnaswamy Stadium in Bengaluru) ಮುಖಾಮುಖಿಯಾಗಲಿವೆ. ಸದ್ಯ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಕಿಂಗ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಮತ್ತೊಂದೆಡೆ, ಕೆಕೆಆರ್ ಸಿಎಸ್‌ಕೆ ಎದುರು 49 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಇಲ್ಲಿಯವರೆಗೆ ಎರಡೂ ತಂಡಗಳು ಐಪಿಎಲ್ನಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ಇದರಲ್ಲಿ ಆರ್ಸಿಬಿ 4 ರಲ್ಲಿ ಗೆದ್ದು 3 ರಲ್ಲಿ ಸೋಲನುಭವಿಸಿದೆ. ಇತ್ತ ಕೆಕೆಆರ್ 2 ರಲ್ಲಿ ಗೆದ್ದು 5 ರಲ್ಲಿ ಸೋಲನುಭವಿಸಿದೆ. 2ರಲ್ಲಿ ಒಂದು ಗೆಲುವು ಆರ್ಸಿಬಿ ವಿರುದ್ಧವೇ ಬಂದಿದ್ದು ಎಂಬುದು ಇಲ್ಲಿ ವಿಶೇಷ.
ಐಪಿಎಲ್ನಲ್ಲಿ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡ ಆರ್ಸಿಬಿ ವಿರುದ್ಧ 81 ರನ್‌ಗಳ ಬೃಹತ್ ಜಯಗಳಿಸಿತ್ತು. ಹೀಗಾಗಿ ಒಂದೆಡೆ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಗೆಲುವಿನ ಲಯದಲ್ಲಿರುವ ಆರ್ಸಿಬಿ ಹೋರಾಡಲಿದ್ದಾರೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್, ಆರ್ಸಿಬಿ ಮಣಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಲು ಯತ್ನಿಸಲಿದೆ.
IPL 2023: ಲಕ್ನೋ ತಂಡಕ್ಕೆ ಬಿಗ್ ಶಾಕ್; ನಿರ್ಣಾಯಕ ಪಂದ್ಯಗಳಿಗೆ ಸ್ಟಾರ್ ವೇಗಿ ಅಲಭ್ಯ..!
ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ.
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಯಾವಾಗ?
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ (ಏಪ್ರಿಲ್ 26) ನಾಳೆ ಬುಧವಾರ ನಡೆಯಲಿದೆ.
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಸಂಜೆ 7.30 ಕ್ಕೆ ಪ್ರಾರಂಭವಾಗುತ್ತದೆ. ಪಂದ್ಯದ ಟಾಸ್ 7 ಗಂಟೆಗೆ ನಡೆಯಲಿದೆ.
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ಆರ್ಸಿಬಿ ಮತ್ತು ಕೆಕೆಆರ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೋಡಬಹುದು. ಇದಲ್ಲದೆ, ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ