IPL 2023: ಶುಭ್​ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ ಸಚಿನ್ ತೆಂಡೂಲ್ಕರ್..!

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

source https://tv9kannada.com/photo-gallery/cricket-photos/ipl-2023-shubman-gill-cameron-green-batted-well-for-mumbai-indians-sachin-tendulkars-cheeky-post-goes-viral-psr-584572.html

Leave a Reply

Your email address will not be published. Required fields are marked *