IPL 2023: ಸವ್ಯಸಾಚಿ ಧೋನಿಗೆ ಯಾರೂ ನಿರೀಕ್ಷಿಸದ ಉಡುಗೊರೆ ನೀಡಿದ ಚೆನ್ನೈ ಫ್ಯಾನ್ಸ್..! ವಿಡಿಯೋ

IPL 2023: ಸವ್ಯಸಾಚಿ ಧೋನಿಗೆ ಯಾರೂ ನಿರೀಕ್ಷಿಸದ ಉಡುಗೊರೆ ನೀಡಿದ ಚೆನ್ನೈ ಫ್ಯಾನ್ಸ್..! ವಿಡಿಯೋ

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ ಧೋನಿಗೆ ಇದು ಕೊನೆಯ ಐಪಿಎಲ್ ಎಂತಲೇ ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಧೋನಿ (MS Dhoni) ಬಳಗ ಈ ಸೀಸನ್​ನ ಅಂತಿಮ ಹೋಮ್ ಗ್ರೌಂಡ್ ಪಂದ್ಯವನ್ನು ಆಡಿತ್ತು. ಈ ಪಂದ್ಯದ ನಂತರ, ಧೋನಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೈದಾನದ ಸುತ್ತು ಹಾಕಿ ಅಭಿಮಾನಿಗಳಿಗೆ ಗೌರವ ಸಲ್ಲಿಸಿತ್ತು. ವಾಸ್ತವವಾಗಿ ಚೆಪಾಕ್ ಕ್ರೀಡಾಂಗಣದೊಂದಿಗೆ (Chepauk Stadium) ಧೋನಿಗೆ ವಿಶೇಷ ಸಂಬಂಧವಿದೆ. ಚೆಪಾಕ್ ಸ್ಟೇಡಿಯಂ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾಗಿದೆ. ಧೋನಿ ಮತ್ತು ತಂಡಕ್ಕೆ ಇಲ್ಲಿನ ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಸಂದರ್ಶನವೊಂದರಲ್ಲಿ ಧೋನಿ ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುವುದಾಗಿ ಹೇಳಿದ್ದರು. ಇದೀಗ ಈ ಸೀಸನ್​ನ ಕೊನೆಯ ಹೋಂ ಗ್ರೌಂಡ್ ಪಂದ್ಯವನ್ನಾಡಿದ್ದ ಧೋನಿಗೆ ಕೆಲವು ಅಭಿಮಾನಿಗಳು ಚೆಪಾಕ್ ಸ್ಟೇಡಿಯಂನ ಮಿನಿಯೇಚರ್ (Miniature) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಧೋನಿ ಮತ್ತು ಅವರ ಅಭಿಮಾನಿಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಎಂಎ ಚಿದಂಬರಂ ಸ್ಟೇಡಿಯಂ ಅಂದರೆ ಚೆಪಾಕ್ ಸ್ಟೇಡಿಯಂನ ಮಿನಿಯೇಚರ್ ಅನ್ನು ಅಭಿಮಾನಿಗಳು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ನೋಡಿದ ಧೋನಿ ಖುಷಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚೆನ್ನೈಗೆ ಫೈನಲ್ ಪಂದ್ಯದಲ್ಲಿ ಗೆಲುವು ಅನಿವಾರ್ಯ

ಇನ್ನು ಐಪಿಎಲ್​​ನಲ್ಲಿ ಚೆನ್ನೈ ಪ್ರದರ್ಶನವನ್ನ ನೋಡುವುದಾದರೆ, ಪಾಯಿಂಟ್ಸ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದ್ದರೂ ಪ್ಲೇ ಆಫ್​ಗೆ ಇನ್ನು ಟಿಕೆಟ್ ಖಚಿತಪಡಿಸಿಕೊಂಡಿಲ್ಲ. ಗುರುವಾರದ ಗೆಲುವಿನೊಂದಿಗೆ ಬೆಂಗಳೂರು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಚೆನ್ನೈ ಮತ್ತು ಲಕ್ನೋ ತಂಡಗಳಿಗೆ ಈಗ ಫೈನಲ್ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

PBKS vs RR Live Score IPL 2023: ಟಾಸ್ ಗೆದ್ದ ರಾಜಸ್ಥಾನ್; ಪಂಜಾಬ್ ಬ್ಯಾಟಿಂಗ್

ಚೆನ್ನೈ ಮತ್ತು ಲಕ್ನೋ ತಲಾ 15 ಪಾಯಿಂಟ್ಸ್ ಹೊಂದಿವೆ. ಬೆಂಗಳೂರು ಈಗ 14 ಅಂಕಗಳನ್ನು ಹೊಂದಿದೆ. ಮುಂಬೈ ಕೂಡ 14 ಅಂಕ ಹೊಂದಿದೆ. ರಾಜಸ್ಥಾನ್ ರಾಯಲ್ಸ್ 12 ಅಂಕಗಳನ್ನು ಹೊಂದಿದೆ. ಹೀಗಾಗಿ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ಗೆದ್ದರೆ 14 ಅಂಕಗಳಿಸಬಹುದು. ಅವರ ನೆಟ್ ರನ್ ರೇಟ್ ಕೂಡ ಪ್ಲಸ್​ನಲ್ಲಿ ಇದೆ. ಆದಾಗ್ಯೂ, ಬೆಂಗಳೂರು, ಚೆನ್ನೈ ಮತ್ತು ಲಕ್ನೋ ತಮ್ಮ ಉಳಿದ ಅಂತಿಮ ಪಂದ್ಯಗಳನ್ನು ಗೆದ್ದರೆ, ಅವರು ಪ್ಲೇ ಆಫ್‌ಗೆ ನೇರ ಟಿಕೆಟ್ ಪಡೆಯಬಹುದು. ಒಂದು ವೇಳೆ ಕೊನೆಯ ಪಂದ್ಯದ ಸೋಲು ತಂಡವನ್ನು ಪ್ಲೇ ಆಫ್​ನಿಂದಲೇ ಹೊರಹಾಕಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-fans-gifted-a-miniature-of-chepauk-stadium-to-ms-dhoni-see-video-psr-582605.html

Leave a Reply

Your email address will not be published. Required fields are marked *