IPL 2023: ಕೊಹ್ಲಿ ಹಾದಿಯಲ್ಲಿ ಶುಭ್​ಮನ್; 60 ಎಸೆತಗಳಲ್ಲಿ 129 ರನ್ ಚಚ್ಚಿದ ಗಿಲ್ ಬರೆದ ದಾಖಲೆಗಳಿವು

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರನ್​ಗಳ ಸುನಾಮಿ ಎಬ್ಬಿಸಿದ ಗುಜರಾತ್ ಬ್ಯಾಟರ್ ಶುಭ್​ಮನ್ ಗಿಲ್ ಸಿಡಿಲಬ್ಬರದ ಶತಕ ಸಿಡಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 60 ಎಸೆತಗಳನ್ನು ಎದುರಿಸಿದ ಗಿಲ್ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ನೊಂದಿಗೆ 129 ರನ್ ಬಾರಿಸಿದರು. ಇದರೊಂದಿಗೆ ಈ ಆವೃತ್ತಿಯ ಆರೆಂಜ್ ಕ್ಯಾಪ್​ ಹೋಲ್ಡರ್ ಎನಿಸಿಕೊಂಡಿದ್ದಾರೆ.ಐದು ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ ಮನಮೋಹಕ ಶತಕ ಬಾರಿಸಿದ ಗಿಲ್ ಆಟಕ್ಕೆ ಮನಸೋತ ಮುಂಬೈ ನಾಯಕ ರೋಹಿತ್, ಗಿಲ್ ಶತಕದ ಬಳಿಕ ಅವರ ಕೈಕುಲುಕಿ ಅಭಿನಂಧಿಸಿದರು.ಈ ಆವೃತ್ತಿಯ ಕಳೆದ 4 ಪಂದ್ಯಗಳಲ್ಲಿ 3 ಶತಕ ಬಾರಿಸಿರುವ ಗಿಲ್ 2016 ರಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಶತಕ ಹಿಂದಿದ್ದಾರೆ. ಅಲ್ಲದೆ ಕೊಹ್ಲಿ ನಂತರ ಒಂದು ಆವೃತ್ತಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಗಿಲ್ ಪಾತ್ರರಾಗಿದ್ದಾರೆ. ಇನ್ನು ಒಟ್ಟಾರೆಯಾಗಿ ನೋಡುವುದಾದರೆ, ಭಾರತೀಯನಾಗಿ ಕೊಹ್ಲಿ 4 ಶತಕ ಸಿಡಿಸಿದ್ದರೆ, ವಿದೇಶಿ ಆಟಗಾರನಾಗಿ 2022 ರ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿದ್ದ ಜೋಸ್ ಬಟ್ಲರ್ 2ನೇ ಸ್ಥಾನದಲ್ಲಿದ್ದಾರೆ. ಆ ನಂತರ ಒಂದು ಆವೃತ್ತಿಯಲ್ಲಿ ಅಧಿಕ ಶತಕ ಬಾರಿಸಿದ ಮೂರನೇ ಬ್ಯಾಟರ್ ಆಗಿ ಗಿಲ್ ಹೊರಹೊಮ್ಮಿದ್ದಾರೆ.ಹಾಗೆಯೇ ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಗಿಲ್ ಬರೆದಿದ್ದಾರೆ. ಈ ಹಿಂದೆ 2016 ರ ಆವೃತ್ತಿಯಲ್ಲಿ ಕಿಂಗ್ ಕೊಹ್ಲಿ ಆರ್​ಸಿಬಿ ಪರ 973 ರನ್ ಬಾರಿಸಿ ಒಂದು ಆವೃತ್ತಿಯಲ್ಲಿ ಅತು ಹೆಚ್ಚು ರನ್ ಬಾರಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.ಒಟ್ಟಾರೆಯಾಗಿ ನೋಡುವುದಾದರೆ 973 ರನ್​ಗಳೊಂದಿಗೆ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಜೋಸ್ ಬಟ್ಲರ್ 863 ರನ್​ಗಳೊಂದಿಗೆ ಎರಡನೇ ಸ್ಥಾನದ್ದಾರೆ. ಇದೀಗ ಈ ಪಟ್ಟಿಯಲ್ಲಿ ಗಿಲ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

source https://tv9kannada.com/photo-gallery/cricket-photos/shubman-gill-joins-virat-kohli-in-incredible-list-after-record-smashing-third-century-in-ipl-2023-psr-587808.html

Leave a Reply

Your email address will not be published. Required fields are marked *