IPL 2023: ಐಪಿಎಲ್​ನಲ್ಲಿ ವಿಶೇಷ ದಾಖಲೆ ನಿರ್ಮಾಣ..!

IPL 2023 MI vs KKR: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 22ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಈ ಪಂದ್ಯದ ಮೂಲಕ ಐಪಿಎಲ್ ಇತಿಹಾಸದಲ್ಲೇ ವಿಭಿನ್ನ ದಾಖಲೆಯೊಂದು ನಿರ್ಮಾಣವಾಗಿದ್ದು ವಿಶೇಷ.ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ವೆಂಕಟೇಶ್ ಅಯ್ಯರ್ ಕೆಕೆಆರ್ ಪರ ಸೆಂಚುರಿಸಿ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅದರಲ್ಲೂ 15 ವರ್ಷಗಳ ಬಳಿಕ ಕೊಲ್ಕತ್ತಾ ಪರ ಶತಕ ಮೂಡಿಬಂದಿರುವುದು ವಿಶೇಷ.ಇನ್ನು ಈ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು. ಇದರೊಂದಿಗೆ ಐಪಿಎಲ್​ ಆಡಿದ ಮೊದಲ ಅಪ್ಪ-ಮಗ ಎಂಬ ಕೀರ್ತಿಗೆ ಸಚಿನ್ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಭಾಜನರಾದರು.ವಿಶೇಷ ಎಂದರೆ ಈ ತಂದೆ-ಮಗ ಇಬ್ಬರೂ ಮುಂಬೈ ಇಂಡಿಯನ್ಸ್ ಪರವೇ ಪಾದಾರ್ಪಣೆ ಮಾಡಿರುವುದು ಮತ್ತೊಂದು ವಿಶೇಷ. ಇದರೊಂದಿಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡ ಮೊದಲ ಅಪ್ಪ-ಮಗ ಜೋಡಿಯಾಗಿ ಸಚಿನ್-ಅರ್ಜುನ್ ಗುರುತಿಸಿಕೊಂಡಿದ್ದಾರೆ.ಇನ್ನು ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಪರ ಡುವಾನ್ ಯಾನ್ಸೆನ್ ಕಣಕ್ಕಿಳಿದಿದ್ದರು. ಇದರೊಂದಿಗೆ ಐಪಿಎಲ್​ ಆಡಿದ ಮೊದಲ ಅವಳಿ ಸಹೋದರರು ಎಂಬ ದಾಖಲೆ ಯಾನ್ಸೆನ್ ಬ್ರದರ್ಸ್ ಪಾಲಾಯಿತು.ಅಂದರೆ ಎಸ್​ಆರ್​ಹೆಚ್​ ಪರ ಆಡುತ್ತಿರುವ ಸೌತ್ ಆಫ್ರಿಕಾ ವೇಗಿ ಮಾರ್ಕೊ ಯಾನ್ಸೆನ್ ಅವರ ಸಹೋದರ ಡುವಾನ್ ಯಾನ್ಸೆನ್ ಇದೀಗ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.ಐಪಿಎಲ್​ನಲ್ಲಿ ಯೂಸುಫ್ ಪಠಾಣ್-ಇರ್ಫಾನ್ ಪಠಾಣ್, ಹಾರ್ದಿಕ್-ಕೃನಾಲ್, ಮೈಕೆಲ್ ಹಸ್ಸಿ-ಡೇವಿಡ್ ಹಸ್ಸಿ...ಹೀಗೆ ಹಲವು ಸಹೋದರರು ಕಣಕ್ಕಿಳಿದಿದ್ದರೂ, ಇದೇ ಮೊದಲ ಬಾರಿಗೆ ಇಬ್ಬರು ಅವಳಿ-ಜವಳಿ ಸಹೋದರರು ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಐಪಿಎಲ್ ಆಡಿದ ಮೊದಲ ಅವಳಿಗಳು ಎಂಬ ಹೆಗ್ಗಳಿಕೆ ಯಾನ್ಸೆನ್ ಬ್ರದರ್ಸ್ ಪಾಲಾಗಿದೆ.

source https://tv9kannada.com/photo-gallery/cricket-photos/ipl-2023-marco-duan-jansen-first-twins-to-play-in-ipl-kannada-news-zp-au50-557977.html

Leave a Reply

Your email address will not be published. Required fields are marked *