IPL 2023: ಸ್ಟಾರ್ ಆಟಗಾರನ ಸಂಭಾವನೆಗೆ ಕತ್ತರಿ ಹಾಕಿದ CSK

IPL 2023: ಐಪಿಎಲ್ ಸೀಸನ್ 16 ರ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಈಗಾಗಲೇ ಧೋನಿ ಪಡೆ ಬಂದಿಳಿದಿದೆ.ಆದರೆ ಸಿಎಸ್​ಕೆ ತಂಡದಲ್ಲಿ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಮಾತ್ರ. ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಸ್ಟೋಕ್ಸ್ ಈಗಾಗಲೇ ಇಂಗ್ಲೆಂಡ್​ಗೆ ಮರಳಿದ್ದಾರೆ. ಹೀಗಾಗಿ ಅವರು ಫೈನಲ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.ಇತ್ತ ಸಿಎಸ್​ಕೆ ಫ್ರಾಂಚೈಸಿಯು ಈ ಬಾರಿ ಬೆನ್ ಸ್ಟೋಕ್ಸ್ ಅವರನ್ನು ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಅವರು 14 ಪಂದ್ಯಗಳಲ್ಲಿ ಕಣಕ್ಕಿಳಿದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಅಂದರೆ ಸಂಪೂರ್ಣ ಫಿಟ್​ ಆಗಿಲ್ಲದಿದ್ದರೂ ಸ್ಟೋಕ್ಸ್ ಐಪಿಎಲ್​ಗೆ ಆಗಮಿಸಿ ಬೆಂಚ್ ಕಾದಿದ್ದೇ ಬಂತು.ಅಲ್ಲದೆ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಪರ ಟೆಸ್ಟ್ ಆಡಲು ಮರಳಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಸಿಎಸ್​ಕೆ ಫ್ರಾಂಚೈಸಿಯು ಬೆನ್ ಸ್ಟೋಕ್ಸ್ ಅವರ ಸಂಭಾವನೆ ಕಡಿತಕ್ಕೆ ನಿರ್ಧರಿಸಿದೆ.ಐಪಿಎಲ್​ ಒಪ್ಪಂದದ ನಿಯಮದ ಪ್ರಕಾರ, ಆಟಗಾರರು ಪ್ಲೇಯಿಂಗ್ ಇಲೆವೆನ್​ ಭಾಗವಾಗದಿದ್ದರೆ ಅನುಪಾತದ ಆಧಾರದಲ್ಲಿ ವೇತನದಲ್ಲಿ ಶೇ.20 ರಷ್ಟು ಕಡಿತ ಮಾಡಬಹುದು. ಅದರಂತೆ ಇದೀಗ 12 ಪಂದ್ಯಗಳಿಂದ ಹೊರಗುಳಿದ ಬೆನ್ ಸ್ಟೋಕ್ಸ್ ಅವರ ಸಂಭಾವನೆಯಲ್ಲಿ ಕಡಿತ ಮಾಡಲು ನಿರ್ಧರಿಸಲಾಗಿದೆ.ಅಂದರೆ 12 ಪಂದ್ಯಗಳಂತೆ ಪ್ರತಿ ಪಂದ್ಯ ಶುಲ್ಕದಿಂದ 23.20 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ. ಅದರಂತೆ ಒಟ್ಟಾರೆ ಸಂಭಾವನೆಯಿಂದ 2.78 ಕೋಟಿ ರೂ. ಕಡಿತ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ನಿರ್ಧರಿಸಿದೆ ಎಂದು ವರದಿಯಾಗಿದೆ.ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾಣ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.

source https://tv9kannada.com/sports/ipl-2023-csk-to-cut-ben-stokes-salary-kannada-news-zp-588344.html

Leave a Reply

Your email address will not be published. Required fields are marked *