IPL 2023: ಈ ಐಪಿಎಲ್​​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಟಾಪ್ 5 ತಂಡಗಳಿವು

ಟಿ20 ಕ್ರಿಕೆಟ್‌ನಲ್ಲಿ ಡಾಟ್ ಬಾಲ್​ಗಳನನ್ನು ಅಮೂಲ್ಯ ರತ್ನಗಳೆಂದೇ ಪರಿಗಣಿಸಲಾಗುತ್ತದೆ. ಈ ಡಾಟ್ ಬಾಲ್​ಗಳು ಬ್ಯಾಟಿಂಗ್ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಐಪಿಎಲ್ 2023ರಲ್ಲಿ ಇದುವರೆಗೆ 37 ಪಂದ್ಯಗಳು ನಡೆದಿದ್ದು, ಇಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಟಾಪ್ 5 ತಂಡಗಳ ವಿವರ ಇಲ್ಲಿದೆ.ಇದುವರೆಗಿನ 7 ಪಂದ್ಯಗಳಲ್ಲಿ ಅತಿ ಹೆಚ್ಚು 341 ಡಾಟ್ ಬಾಲ್ ಎಸೆದಿರುವ ಗುಜರಾತ್ ಟೈಟಾನ್ಸ್ ಅಗ್ರಸ್ಥಾನದಲ್ಲಿದೆ.  ಗುಜರಾತ್ 836 ಎಸೆತಗಳಲ್ಲಿ 53 ವಿಕೆಟ್ ಪಡೆದು 1159 ರನ್ ನೀಡಿದೆ.  ಸದ್ಯ ಗುಜರಾತ್ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಇದುವರೆಗೆ 322 ಡಾಟ್ ಬಾಲ್‌ಗಳನ್ನು ಎಸೆದಿದೆ.  8 ಪಂದ್ಯಗಳಲ್ಲಿ ಆರ್‌ಸಿಬಿ 950 ಎಸೆತಗಳಲ್ಲಿ 59 ವಿಕೆಟ್‌ ಪಡೆದು 1497 ರನ್‌ ನೀಡಿದೆ.  ಅಂಕಪಟ್ಟಿಯಲ್ಲಿ ಆರ್‌ಸಿಬಿ 5ನೇ ಸ್ಥಾನದಲ್ಲಿದೆ.ಸನ್‌ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ 311 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.  808 ಎಸೆತಗಳಲ್ಲಿ 1152 ರನ್‌ಗಳನ್ನು ನೀಡಿರುವ ಹೈದರಾಬಾದ್43 ವಿಕೆಟ್‌ಗಳನ್ನು ಪಡೆದಿದೆ. ಸದ್ಯ ಎಸ್​​ಆರ್​ಹೆಚ್ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ.ಲಕ್ನೋ ಸೂಪರ್ ಜೈಂಟ್ಸ್ ತಂಡವು 306 ಡಾಟ್ ಬಾಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 837 ಎಸೆತಗಳಲ್ಲಿ 1133 ರನ್‌ ನೀಡಿ 46 ವಿಕೆಟ್‌ಗಳನ್ನು ಕಬಳಿಸಿದೆ.  ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಆದರೆ ನಾವು ಡಾಟ್ ಬಾಲ್‌ಗಳ ಬಗ್ಗೆ ಮಾತನಾಡುವುದಾದರೆ, ತಂಡವು 7 ಪಂದ್ಯಗಳಲ್ಲಿ 300 ಡಾಟ್ ಬಾಲ್‌ಗಳನ್ನು ಎಸೆದಿದೆ.  ತಂಡವು 828 ಎಸೆತಗಳಲ್ಲಿ 1166 ರನ್ ನೀಡಿ 40 ವಿಕೆಟ್ ಗಳಿಸಿದೆ.  ಡೆಲ್ಲಿ, ಎಸ್‌ಆರ್‌ಎಚ್‌ನಂತೆ ಕೇವಲ ಎರಡು ಪಂದ್ಯಗಳನ್ನು ಗೆದ್ದು ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ.

source https://tv9kannada.com/photo-gallery/cricket-photos/ipl-2023-most-dot-balls-in-ipl-2023-at-halfway-stage-list-of-top-five-teams-psr-au14-565696.html

Leave a Reply

Your email address will not be published. Required fields are marked *