IPL 2023: ಭರ್ಜರಿ ದಾಖಲೆಯ ಬೆನ್ನಲ್ಲೇ ಅನಗತ್ಯ ದಾಖಲೆ ಬರೆದ ವೈಶಾಕ್

IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ವೇಗಿ ವೈಶಾಕ್ ವಿಜಯಕುಮಾರ್ ಅನಗತ್ಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು.ಆದರೆ ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ, ಆರ್​ಸಿಬಿ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಕಳೆದ ಪಂದ್ಯದಲ್ಲಿ 4 ಓವರ್​ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ವೈಶಾಕ್ ವಿಜಯಕುಮಾರ್ ಈ ಬಾರಿ ದುಬಾರಿಯಾಗಿದ್ದರು.ಈ ಪಂದ್ಯದಲ್ಲಿ 4 ಓವರ್​ ಬೌಲಿಂಗ್ ಮಾಡಿದ್ದ ವೈಶಾಕ್ ಬರೋಬ್ಬರಿ 62 ರನ್​ ನೀಡಿ 1 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಆರ್​ಸಿಬಿ ಪರ 4 ಓವರ್​ಗಳಲ್ಲಿ ಅತ್ಯಧಿಕ ರನ್ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡರು.ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್​ಗಳಲ್ಲಿ 20 ರನ್​ಗೆ 3 ವಿಕೆಟ್ ಕಬಳಿಸಿ ಆರ್​ಸಿಬಿ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ವೈಶಾಕ್ ವಿಜಯಕುಮಾರ್ ಬರೆದಿದ್ದರು.ಇದೀಗ 24 ಎಸೆತಗಳಲ್ಲಿ 62 ರನ್​ ನೀಡಿ ಅನಗತ್ಯ ದಾಖಲೆಯನ್ನು ಕನ್ನಡಿಗ ವೈಶಾಕ್ ವಿಜಯಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ.ಇನ್ನು ಆರ್​ಸಿಬಿ ಪರ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಕೆಟ್ಟ ದಾಖಲೆ  ಜೋಶ್ ಹ್ಯಾಝಲ್​ವುಡ್ ಹೆಸರಿನಲ್ಲಿದೆ. ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹ್ಯಾಝಲ್​ವುಡ್ 4 ಓವರ್​ಗಳಲ್ಲಿ 64 ರನ್​ ನೀಡಿದ್ದರು. ಇದೀಗ ಈ ಕಳಪೆ ಬೌಲಿಂಗ್ ದಾಖಲೆ ಪಟ್ಟಿಯಲ್ಲಿ ವೈಶಾಕ್ 2ನೇ ಸ್ಥಾನ ಅಲಂಕರಿಸಿದ್ದಾರೆ.

source https://tv9kannada.com/photo-gallery/cricket-photos/vyshak-vijaykumar-has-the-2nd-most-expensive-spell-for-rcb-kannada-news-zp-au50-558145.html

Leave a Reply

Your email address will not be published. Required fields are marked *