IPL 2023: ಫೋರ್​ಗಳ ಮೂಲಕವೇ ದಾಖಲೆ ಬರೆದ ವಿರಾಟ್ ಕೊಹ್ಲಿ

IPL 2023 PBKS vs RCB: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 5 ಫೋರ್​ ಮೂಲಕ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಫೋರ್​ಗಳ ವಿಶೇಷ ದಾಖಲೆಯ ಬರೆಯುವ ಮೂಲಕ ಎಂಬುದು ವಿಶೇಷ.ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 5 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 59 ರನ್​ ಬಾರಿಸಿದ್ದರು. ಈ 5 ಫೋರ್​ಗಳೊಂದಿಗೆ ಐಪಿಎಲ್​ನಲ್ಲಿ 600 ಫೋರ್ ಬಾರಿಸಿದ ಆರ್​ಸಿಬಿ ತಂಡದ ಮೊದಲ ಬ್ಯಾಟರ್ ಎನಿಸಿಕೊಂಡರು.ಅಲ್ಲದೆ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿದು ಐಪಿಎಲ್​ನಲ್ಲಿ 600 ಫೋರ್​ ಬಾರಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿಯ ಪಾಲಾಯಿತು. ಇದರ ಜೊತೆಗೆ ಐಪಿಎಲ್​ನಲ್ಲಿ ಆರು ನೂರಕ್ಕೂ ಅಧಿಕ ಫೋರ್​ ಬಾರಿಸಿದ 2ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.ಇದಕ್ಕೂ ಮುನ್ನ ಶಿಖರ್ ಧವನ್ ಈ ಸಾಧನೆ ಮಾಡಿದ್ದರು. ಧವನ್ 210 ಪಂದ್ಯಗಳಲ್ಲಿ 730 ಫೋರ್​ಗಳನ್ನು ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಇದೀಗ ವಿರಾಟ್ ಕೊಹ್ಲಿ 221 ಇನಿಂಗ್ಸ್​ಗಳ ಮೂಲಕ ಒಟ್ಟು 603 ಫೋರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಫೋರ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

source https://tv9kannada.com/photo-gallery/cricket-photos/virat-kohli-becoming-the-2nd-player-to-reach-600-fours-in-ipl-kannada-news-zp-au50-560087.html

Leave a Reply

Your email address will not be published. Required fields are marked *