IPL 2023: ಫೀಲ್ಡಿಂಗ್​ ಮೂಲಕವೇ ದಾಖಲೆ ಬರೆದ ವಿರಾಟ್ ಕೊಹ್ಲಿ

IPL 2023: ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾದರೂ, ಫೀಲ್ಡಿಂಗ್ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಆದರೆ ಮಿಡ್​ಆಫ್​​ ಫೀಲ್ಡಿಂಗ್​ನಲ್ಲಿದ್ದ ವಿರಾಟ್ ಕೊಹ್ಲಿ ಅತ್ಯುತ್ತವಾಗಿ ಕ್ಯಾಚ್ ಹಿಡಿಯುವ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅದು ಕೂಡ ಪೊಲಾರ್ಡ್ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.ಹೌದು, ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದರು.ಮುಂಬೈ ಇಂಡಿಯನ್ಸ್ ಪರ ಆಡಿದ್ದ ಕೀರನ್ ಪೊಲಾರ್ಡ್ ಒಟ್ಟು 103 ಕ್ಯಾಚ್​ಗಳನ್ನು ಹಿಡಿದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಕಿಂಗ್ ಕೊಹ್ಲಿ ಒಟ್ಟು 104 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಆರ್​ಸಿಬಿ ಪರ ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಅತೀ ಹೆಚ್ಚು ಕ್ಯಾಚ್​ ಹಿಡಿದ 2ನೇ ಫೀಲ್ಡರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.
ಅಂದರೆ ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 204 ಇನಿಂಗ್ಸ್​ಗಳಲ್ಲಿ ರೈನಾ ಒಟ್ಟು 109 ಕ್ಯಾಚ್​ಗಳನ್ನು ಹಿಡಿದು ಇತಿಹಾಸ ನಿರ್ಮಿಸಿಟ್ಟಿದ್ದಾರೆ.ಇದೀಗ 233 ಇನಿಂಗ್ಸ್​ಗಳಲ್ಲಿ 104 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.ಹಾಗೆಯೇ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದು, ವಿಂಡೀಸ್ ಆಟಗಾರ 189 ಐಪಿಎಲ್ ಇನಿಂಗ್ಸ್​ಗಳಲ್ಲಿ 103 ಕ್ಯಾಚ್​ಗಳನ್ನು ಹಿಡಿದಿದ್ದಾರೆ.ವಿಶೇಷ ಎಂದರೆ ಈ ಮೂವರನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಫೀಲ್ಡರ್ ಐಪಿಎಲ್​ನಲ್ಲಿ 100 ಕ್ಯಾಚ್​ಗಳನ್ನು ಹಿಡಿದಿಲ್ಲ. ಹೀಗಾಗಿಯೇ ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಕೀರನ್ ಪೊಲಾರ್ಡ್​ರನ್ನು ಐಪಿಎಲ್​ನ ಅತ್ಯುತ್ತಮ ಕ್ಷೇತ್ರರಕ್ಷಕರೆಂದು ಬಣ್ಣಿಸಲಾಗುತ್ತದೆ.

source https://tv9kannada.com/photo-gallery/cricket-photos/ipl-2023-virat-kohli-breaks-kieron-pollards-most-catches-in-ipl-kannada-news-zp-578607.html

Leave a Reply

Your email address will not be published. Required fields are marked *