IPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯ ನಾಯಕ! ರೋಹಿತ್ ಕಥೆ ಏನು?

IPL 2023 Rohit Sharma likely to miss few IPL 2023 matches due to workload; Suryakumar Yadav tipped to lead in his absence

ಇದೇ ಮಾ.31 ರಿಂದ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Gujarat Titans vs Chennai Super Kings) ತಂಡಗಳು ಮುಖಾಮುಖಿಯಾಗಲಿವೆ. ಆ ನಂತರ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಭಾನುವಾರದ ಎರಡನೇ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore vs Mumbai Indians) ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಮುಖಾಮುಖಿಗೂ ಮುನ್ನ ಮುಂಬೈ ಪಾಳಯದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಈ ಆವೃತ್ತಿಯ ಐಪಿಎಲ್​ನ ಎಲ್ಲಾ ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ಲದೆ ಸ್ವತಃ ರೋಹಿತ್ ಅವರೇ ಈ ತೀರ್ಮಾನಕ್ಕೆ ಮುಂದಾಗಿದ್ದು, ತಾವು ಯಾವ ಪಂದ್ಯವನ್ನು ಆಡಬೇಕು. ಯಾವ ಪಂದ್ಯದಿಂದ ಹೊರಗಿರಬೇಕು ಎಂಬುದನ್ನು ರೋಹಿತ್ ಅವರೇ ನಿರ್ಧರಿಸಲಿದ್ದಾರಂತೆ. ಹೀಗಾಗಿ ರೋಹಿತ್ ವಿಶ್ರಾಂತಿ ಪಡೆಯುವ ಪಂದ್ಯಗಳಲ್ಲಿ ಅವರ ಬದಲಿಯಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪಯಣ ನಿರಾಶಾದಾಯಕವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ತಂಡ 10 ಸೋಲುಗಳೊಂದಿಗೆ ಕೊನೆಯ ಸ್ಥಾನದೊಂದಿಗೆ ಟೂರ್ನಿಗೆ ವಿದಾಯ ಹೇಳಿತ್ತು. ಹೀಗಾಗಿ ಮುಂಬೈ ಈ ಬಾರಿ ಉತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಕಪ್ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಶಯವಾಗಿತ್ತು. ಆದರೆ ಇದೀಗ ರೋಹಿತ್ ಎಲ್ಲಾ ಪಂದ್ಯಗಳನ್ನು ಆಡುತ್ತಿಲ್ಲ ಎಂಬ ವಿಚಾರ ಮುಂಬೈ ಫ್ಯಾನ್ಸ್​ಗೆ ಬಿಗ್ ಶಾಕ್ ನೀಡಿದೆ. ಮುಂಬೈ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಹೇರ್ ​ಸ್ಟೈಲ್ ಬದಲಿಸಿ ಹೊಸ ಟ್ಯಾಟೂ ಹಾಕಿಸಿಕೊಂಡ ಕೊಹ್ಲಿ; ಫೋಟೋ ನೋಡಿ

ಕೆಲವು ಪಂದ್ಯಗಳಿಂದ ರೋಹಿತ್​ಗೆ ವಿಶ್ರಾಂತಿ

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿರುವ ಪ್ರಕಾರ, ಮುಂಬರುವ ಐಸಿಸಿ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ. ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕಾಗಿದೆ. ಆ ನಂತರ ವಿಶ್ವಕಪ್ ಕೂಡ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಅವರನ್ನು ಹೆಚ್ಚುವರಿ ಆಯಾಸದಿಂದ ಪಾರು ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸುದ್ದಿ ಪ್ರಕಾರ, ರೋಹಿತ್ ಅವರೇ ತಮ್ಮ ಅನುಕೂಲಕ್ಕೆ ಅನುಗುಣವಾಗಿ, ಯಾವ ಪಂದ್ಯದಲ್ಲಿ ಆಡಬೇಕು ಮತ್ತು ಆಡಬಾರದು ಎಂದು ನಿರ್ಧರಿಸುತ್ತಾರೆ. ಅವರು ತಂಡದಿಂದ ಹೊರಗಿರುವಾಗಲೆಲ್ಲಾ ಸೂರ್ಯಕುಮಾರ್ ಯಾದವ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

ಫ್ರಾಂಚೈಸಿಗೆ ನಿರ್ಧರಿಸುವ ಹಕ್ಕಿದೆ

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ ನಂತರ, ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ಆಟಗಾರರು ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧರಿಸುವ ಹಕ್ಕು ಫ್ರಾಂಚೈಸಿಗೆ ಮಾತ್ರ ಎಂದು ಕೆಲಸದ ಹೊರೆ ನಿರ್ವಹಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು. ಆಟಗಾರರ ಕೆಲಸದ ಹೊರೆಯನ್ನು ಹೇಗೆ ನಿರ್ವಹಿಸಬೇಕೆಂದು ಆ ಆಟಗಾರನಾಡುವ ಫ್ರಾಂಚೈಸಿ ನಿರ್ಧರಿಸುತ್ತದೆ. ಅಲ್ಲದೆ ಆಟಗಾರರಿಗೆ ತಮ್ಮ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಅನಿಸಿದರೆ, ಅವರು ಒಂದು ಅಥವಾ ಎರಡು ಪಂದ್ಯಗಳಿಗೆ ವಿರಾಮ ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-rohit-sharma-likely-to-miss-few-ipl-2023-matches-due-to-workload-suryakumar-yadav-tipped-to-lead-in-his-absence-psr-au14-544875.html

Views: 0

Leave a Reply

Your email address will not be published. Required fields are marked *