IPL 2023: ಫಾಫ್ ತಲೆಯಿಂದ ಕೆಳಗಿಳಿಯುತ್ತಾ ಆರೆಂಜ್ ಕ್ಯಾಪ್? ರೇಸ್​ನಲ್ಲಿರುವವರು ಯಾರ್ಯಾರು?

16ನೇ ಆವೃತ್ತಿಯ ಐಪಿಎಲ್​ನ ಲೀಗ್ ಹಂತದ ಪ್ರಯಾಣ ಮೇ 21 ರಂದು ಕೊನೆಗೊಂಡಿದೆ. ಲೀಗ್ ಹಂತದ ಅಂತ್ಯಕ್ಕೆ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವವರ ಟಾಪ್ 5 ಬ್ಯಾಟರ್​ಗಳನ್ನು ನೋಡುವುದಾದರೆ..ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳಿಂದ 730 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಇನ್ನು ಗುಜರಾತ್ ತಂಡದ ಯುವ ಆಟಗಾರ ಶುಭ್​ಮನ್ ಗಿಲ್ ಸತತ ಎರಡು ಶತಕ ಸಿಡಿಸಿ 680 ರನ್​ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಆವೃತ್ತಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಕೊಹ್ಲಿ ಕೂಡ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ಟಾಪ್ 3ರಲ್ಲಿ ಸ್ಥಾನ ಪಡೆದಿದ್ದು, ಕೊಹ್ಲಿ ಆಡಿರುವ 14 ಪಂದ್ಯಗಳಲ್ಲಿ 649 ರನ್ ಕಲೆಹಾಕಿದ್ದಾರೆರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 625 ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.ಐದನೇ ಸ್ಥಾನದಲ್ಲಿರುವ ಚೆನ್ನೈ ಆರಂಭಿಕ ಡೆವೋನ್ ಕಾನ್ವೇ 14 ಪಂದ್ಯಗಳಿಂದ 585 ರನ್ ಬಾರಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-orange-cap-table-du-plessis-leads-after-league-stage-gill-second-with-680-runs-psr-584686.html

Leave a Reply

Your email address will not be published. Required fields are marked *