IPL 2023: RCB ತಂಡದ ಮುಂದಿನ ಎದುರಾಳಿ ಯಾರು? ಈಗಲೇ ಚಿಂತೆ ಶುರುವಾಗಿದ್ದೇಕೆ?

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯನ್ನು ಭರ್ಜರಿ ಜಯದೊಂದಿಗೆ ಶುರು ಮಾಡಿದ್ದ ಆರ್​ಸಿಬಿ ಇದೀಗ ಸೋಲುಗಳಿಂದ ಕಂಗೆಟ್ಟಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅಂದರೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಆರ್​ಸಿಬಿ ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸಿಎಸ್​ಕೆ ವಿರುದ್ಧ ಸೋಲನುಭವಿಸಿದೆ. ಇದೀಗ ಆರ್​ಸಿಬಿ ತಂಡವು ಮುಂದಿನ ಪಂದ್ಯಕ್ಕಾಗಿ ಸಜ್ಜಾಗಿದೆ.ಆರ್​ಸಿಬಿ ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್. ಅತ್ತ ಆಡಿರುವ 5 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 3 ರಲ್ಲಿ ಜಯ ಸಾಧಿಸಿದೆ. ಆದರೆ ಇಲ್ಲಿ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿರುವುದು ಅವೇ ಮ್ಯಾಚ್.
ಅಂದರೆ ಆರ್​ಸಿಬಿ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡದ ಹೋಮ್​ ಗ್ರೌಂಡ್ ಮೊಹಾಲಿಯಲ್ಲಿ ಆಡಬೇಕಿದೆ. ಇತ್ತ ಹೋಮ್ ಗ್ರೌಂಡ್​ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಆರ್​​ಸಿಬಿ 2 ರಲ್ಲಿ ಸೋತು, 2 ರಲ್ಲಿ ಗೆದ್ದಿದೆ. ಇನ್ನು ಕೆಕೆಆರ್ ವಿರುದ್ದ ಕೊಲ್ಕತ್ತಾದಲ್ಲಿ ನಡೆದ ಪಂದ್ಯ ಹೀನಾಯವಾಗಿ ಸೋಲನುಭವಿಸಿತ್ತು. ಅಂದರೆ ಹೋಮ್​ ಗ್ರೌಂಡ್​ನಲ್ಲೇ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಆರ್​ಸಿಬಿಗೆ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಿಂದ ಭರ್ಜರಿ ಪೈಪೋಟಿ ಎದುರಾಗಲಿದೆ.ಏಕೆಂದರೆ ಪಂಜಾಬ್ ಕಿಂಗ್ಸ್​ ಮೊಹಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಲ್ಲಿ ಆಡಿರುವ 2 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದೆ, ಮತ್ತೊಂದು ಪಂದ್ಯದಲ್ಲಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತು. ಹಾಗೆಯೇ ಎದುರಾಳಿಗಳ ತವರಿನಲ್ಲಿ ನಡೆದ 3 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದೆ. ಇದೇ ಆತ್ಮ ವಿಶ್ವಾಸದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ತವರಿನಲ್ಲಿ ಕಣಕ್ಕಿಳಿಯಲಿದೆ.ಇತ್ತ ತವರು ಮೈದಾನದಲ್ಲಿನ 3ನೇ ಸೋಲಿನ ಬಳಿಕ ಆರ್​ಸಿಬಿ ಮೊಹಾಲಿಯಲ್ಲಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಹೀಗಾಗಿ ಏಪ್ರಿಲ್ 20 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

source https://tv9kannada.com/photo-gallery/cricket-photos/ipl-2023-rcbs-next-match-pbks-vs-rcb-kannada-news-zp-au50-558880.html

Leave a Reply

Your email address will not be published. Required fields are marked *