IPL 2024: ಐಪಿಎಲ್ ಮುನ್ನವೇ ಚೆನ್ನೈ ತಂಡ ಅತಿ ದೊಡ್ಡ ಘೋಷಣೆ ಮಾಡಿದೆ. ಈ ವಿಚಾರ ಸದ್ಯ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೌದು, ಚೆನ್ನೈ ತಂಡ ಐಪಿಎಲ್ 17ನೇ ಸೀಸನ್ ಪ್ರವೇಶಿಸುವ ಮುನ್ನವೇ ತನ್ನ ತಂಡದ ನಾಯಕನನ್ನು ಬದಲಿಸಿದೆ.

ನಾಳೆಯಿಂದ ಐಪಿಎಲ್ 2024ರ 17ನೇ ಸೀಸನ್ ಆರಂಭವಾಗಲಿದೆ. ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದಕ್ಕೂ ಮುನ್ನವೇ ಚೆನ್ನೈ ತಂಡ ಅತಿ ದೊಡ್ಡ ಘೋಷಣೆ ಮಾಡಿದೆ. ಈ ವಿಚಾರ ಸದ್ಯ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೌದು, ಚೆನ್ನೈ ತಂಡ ಐಪಿಎಲ್ 17ನೇ ಸೀಸನ್ ಪ್ರವೇಶಿಸುವ ಮುನ್ನವೇ ತನ್ನ ತಂಡದ ನಾಯಕನನ್ನು ಬದಲಿಸಿದೆ. ಈ ಮೂಲಕ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಇಂದು ಬಿಸಿಸಿಐ ನಡೆಸಿದ ಐಪಿಎಲ್ ಜೊತೆಗಿನ ನಾಯಕರ ಹೊಸ ಫೋಟೋಶೂಟ್ ನಲ್ಲಿ ಚೆನ್ನೈ ತಂಡದ ಪರ ಧೋನಿ ಬದಲು ರುತುರಾಜ್ ಗಾಯಕ್ವಾಡ ಅವರು ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಚೆನ್ನೈ ತಂಡದ ನೂತನ ನಾಯಕ ರುತುರಾಜ್ ಗಾಯಕ್ವಾಡ ಎಂದು ಬರೆದುಕೊಂಡಿದೆ.
ಈ ಮೂಲಕ ಕೋಟ್ಯಾಂತರ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇನ್ನು, 2024ರ ಐಪಿಎಲ್ ಋತುವಿನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲ ಎಲ್ಲರಲ್ಲಿಯೂ ಮನೆ ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಧೋನಿ ಫೇಸ್ಬುಕ್ ನಲ್ಲಿ ಹೊಸ ರೋಲ್ ಎಂದು ಬರೆದುಕೊಂಡಿದ್ದು ಇದರ ಮುನ್ಸುಚನೆ ಎಂದು ತಿಳಿದುಬಂದಿದೆ.
ಇನ್ನು, ಧೋನಿ ಈ ಐಪಿಎಲ್ ಬಳಿಕ ನಿವೃತ್ತಿ ನೀಡಲಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಚೆನ್ನೈ ತಂಡಕ್ಕೆ ಹೊಸ ನಾಯಕನ್ನು ಸಿದ್ಧಪಡಿಸುವ ಸಲುವಾಗಿ ಧೋನಿ ಇರುವಾಗಲೇ ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವದ ಪಟ್ಟವನ್ನು ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ 2022ರಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ನೀಡಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಬ್ಯಾಕ್ ಟು ಬ್ಯಾಕ್ ಸೋಲನ್ನಪ್ಪಿತ್ತು. ಸೋಲಿನ ನಂತರ ಪಂದ್ಯಾವಳಿಯ ಮಧ್ಯದಲ್ಲಿ ಜಡ್ಡು ನಾಯಕತ್ವದಿಂದ ಕೆಳಗಿಳಿದರು. ಬಳಿಕ ಮತ್ತೆ ಧೋನಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಮತ್ತೊಮ್ಮೆ ಚೆನ್ನೈ ನಾಯಕತ್ವವನ್ನು ಬದಲಾಯಿಸಿದೆ.
ಇನ್ನು, ಧೋನಿ ನೇತೃತ್ವದ ಸಿಎಸ್‌ಕೆ ಕಳೆದ ವರ್ಷ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಮುಂಬೈ ಇಂಡಿಯನ್ಸ್‌ನೊಂದಿಗೆ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಪಟ್ಟಿಯಲ್ಲಿ ಸಮಬಲ ಸಾಧಿಸಿದೆ. ಅಲ್ಲದೇ ಟೂರ್ನಿ ಆರಂಭಕ್ಕೂ ಮುನ್ನವೇ ನಾಯಕತ್ವವನ್ನು ದಿಢೀರ್ ಬದಲಾವಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಎಸ್‌ಕೆ ಬಿಗ್ ಶಾಕ್ ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (C) ಎಂಎಸ್ ಧೋನಿ, ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜವರ್ಧನ್ ಹಂರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಜೀತ್ ಸಿಂಗ್, ನಿಶಾಂತ್ ಸಿಂಗ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ. ಡ್ವೈನ್ ಕಾನ್ವೆ, ಮಥೀಶ ಪತಿರಾನ, ಶಿವಂ ದುಬೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1