IPL 2024, CSK vs LSG: ತವರಿನಲ್ಲಿಯೇ ಮುಗ್ಗರಿಸಿದ ಚೆನ್ನೈ, ಸ್ಟೋನಿಸ್​​ ಶತಕಕ್ಕೆ ವ್ಯರ್ಥವಾದ ರುತುರಾಜ್​ ಶತಕ.

Cricket: IPL 2024, CSK vs LSG: ಇಂದಿನ ಪಂದ್ಯದಲ್ಲಿ ಲಕ್ನೋ ಪರ ಹೀರೋ ಆಗಿರುವ ಸ್ಟೋನಿಸ್​​ ಭರ್ಜರಿ ಶತಕ ಸಿಡಿಸಿ ಪಂದ್ಯ ಲಕ್ನೋ ಗೆಲ್ಲುವಂತೆ ಮುನ್ನಡೆಸಿದರು. ಇಂದಿನ ಗೆಲುವಿನ ಮೂಲಕ ಲಕ್ನೋ ಸೂಪರ್​ ಜೈಂಟ್ಸ್​ ತಂಡವು ಪ್ಲೇಆಫ್​ ಸನಿಹಕ್ಕೆ ಹೋಗಲು ಸಹಾಯಕವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ರಿತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕ, ಶಿವಂ ದುಬೆ ಅವರ ವಿಧ್ವಂಸಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಬೃಹತ್​ ಮೊತ್ತ ಕಲೆಹಾಕಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಇಂದಿನ ಗೆಲುವಿನ ಮೂಲಕ ಲಕ್ನೋ ಸೂಪರ್​ ಜೈಂಟ್ಸ್​ ತಂಡವು ಪ್ಲೇಆಫ್​ ಸನಿಹಕ್ಕೆ ಹೋಗಲು ಸಹಾಯಕವಾಗಿದೆ. ಇನ್ನು, ಚೆನ್ನೈ ನೀಡಿದ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡವು 19.3 ಓವರ್​ಗೆ 213 ರನ್​ ಗಳಿಸುವ ಮೂಲಕ 6 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿತು.

ಸ್ಟೋನಿಸ್​​ ಶತಕದ ಬ್ಯಾಟಿಂಗ್​:

ಇನ್ನು, ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ 211 ರನ್​ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ಸೂಪರ್​ ಜೈಂಟ್ಸ್​ ತಮಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್​ ಡಿ ಕಾಕ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ನಾಯಕ ಕೆಎಲ್ ರಾಹುಲ್​ 14 ಎಸೆತದಲ್ಲಿ 16 ರನ್​ ಗಳಿಸಿ ಪೆವೆಲಿಯನ್​ ಸೇರಿದರು. ನಂತರ ದೇವದತ್​ ಪಡಿಕ್ಕಲ್ 13 ರನ್​ ಹಾಘೂ ನಿಕೋಲಸ್​​ ಪೂರನ್​ 34 ರನ್​ ಗಳಿಸಿದರು. ಆದರೆ ಇಂದಿನ ಪಂದ್ಯದಲ್ಲಿ ಲಕ್ನೋ ಪರ ಹೀರೋ ಆಗಿರುವ ಸ್ಟೋನಿಸ್​​ ಭರ್ಜರಿ ಶತಕ ಸಿಡಿಸಿ ಪಂದ್ಯ ಲಕ್ನೋ ಗೆಲ್ಲುವಂತೆ ಮುನ್ನಡೆಸಿದರು. ಸ್ಟೋನಿಸ್​​ 62 ಎಸೆತದಲ್ಲಿ 12 ಫೋರ್​ ಮತ್ತು 6 ಸಿಕ್ಸ್​ ಮೂಲಕ 120 ರನ್​ ಸಿಡಿಸಿದರು.

ರುತುರಾಜ್​ ಭರ್ಜರಿ ಶತಕ:

ಸಿಎಸ್​​ಜಕೆ ತಂಡದ ಪರ ರಿತುರಾಜ್ ಗಾಯಕ್ವಾಡ್ 108 ರನ್ ಗಳಿಸಿ ಅಜೇಯರಾಗಿ ಉಳಿದರು. ಶಿವಂ ದುಬೆ 66 ರನ್ ಗಳಿಸಿದರು. ತವರಿನ ಮೈದಾನದಲ್ಲಿ ಧೋನಿ 4 ರನ್​ ಗಳಿಸಿ ಅಭಿಮಾನಿಗಳ ಸಂತಸ ಮೂಡಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭ ಉತ್ತಮವಾಗಿರಲಿಲ್ಲ. ಅಜಿಂಕ್ಯ ರಹಾನೆ 1 ರನ್ ಮತ್ತು ಡೆರಿಲ್ ಮಿಚೆಲ್ 11 ರನ್ ಗಳಿಸಿ ಔಟಾದರು. ಆದರೆ, ನಾಯಕ ರುತುರಾಜ್ ಗಾಯಕ್ವಾಡ್ ಉತ್ತಮ ಬ್ಯಾಟಿಂಗ್​ ಮಾಡಿದರು. ರವೀಂದ್ರ ಜಡೇಜಾ ಅವರಿಗೆ ಸ್ವಲ್ಪ ಬೆಂಬಲ ನೀಡಿದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ನಡೆಸಿದರು. ಜಡ್ಡು 16 ರನ್ ಗಳಿಸಿ ಔಟಾದರು.

ನಂತರ ಶಿವಂ ದುಬೆ ಮತ್ತು ರಿತುರಾಜ್ ತಂಡದ ಸ್ಕೋರ್ ಬೋರ್ಡ್ ಅನ್ನು ಮುಂದಕ್ಕೆ ಕೊಂಡೊಯ್ದರು. ದುಬೆ ಮತ್ತು ರಿತು ಲಕ್ನೋ ಬೌಲರ್‌ಗಳೊಂದಿಗೆ ಬೆವರಿಳಿಸಿದರು. ರಿತು-ಶಿವಂ ಜೋಡಿ ತಮ್ಮ ಅರ್ಧಶತಕದ ಜೊತೆಯಾಟವನ್ನು ಬಿರುಸಿನ ವೇಗದಲ್ಲಿ ಪೂರೈಸಿದರು. ರುತುರಾಜ್ ಗಾಯಕ್ವಾಡ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಋತುವಿನಲ್ಲಿ ಇದು ಅವರ ಮೊದಲ ಶತಕವಾಗಿದೆ. ಸ್ಲಾಗ್ ಓವರ್‌ಗಳಲ್ಲಿ ಇಬ್ಬರು ಸ್ಟಾರ್‌ಗಳು ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದರು. ಈ ಮೂಲಕ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು.

ದಾಖಲೆ ಬರೆದ ರಿತು:

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದರು. ಇದು ಐಪಿಎಲ್‌ನಲ್ಲಿ ರುತುರಾಜ್ ಅವರ ಎರಡನೇ ಮತ್ತು ನಾಯಕನಾಗಿ ಮೊದಲ ಶತಕವಾಗಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಸಿಡಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮಹೇಂದ್ರ ಸಿಂಗ್ ಧೋನಿ ಸುದೀರ್ಘ ಕಾಲ ತಂಡದ ನಾಯಕರಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರೂ ಶತಕ ತಲುಪಲು ಸಾಧ್ಯವಾಗಲಿಲ್ಲ. ಆದರೆ ಇದೀಗ ರುತುರಾಜ್​ ಈ ಸಾಧನೆ ಮಾಡಿದರು. ಇನ್ನು, ನಾಯಕನಾಗಿ ರುತುರಾಜ್ ಗಾಯಕ್ವಾಡ್ ಕೊನೆಯ ಓವರ್ ವರೆಗೂ ನಿಂತು ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಕಾರಣರಾದರು.

Source:https://kannada.news18.com/news/sports/ipl-2024-csk-vs-lsg-match-lucknow-super-giants-won-by-6-wickets-skb-1667803.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *