IPL 2024, CSK vs PBKS: ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 17. 5 ಓವರ್ಗೆ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (PBKS vs CSK) ವಿರುದ್ಧದ ಹಣಾಹಣಿಯಲ್ಲಿ ಮೊದಲಿಗೆ ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಚೆನ್ನೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಸಿಎಸ್ಕೆ ಸಹ ಆರಂಭದಿಂದಲೇ ನಿಧಾನವಾಗಿ ಆಡುವ ಮೂಲಕ ತವರಿನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಈ ಮೂಲಕ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 162 ರನ್ ಗಳಸಲಷ್ಟೇ ಶಕ್ತವಾಯಿತು. ಈ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 17. 5 ಓವರ್ಗೆ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಮತ್ತೆ ಅಬ್ಬರಿಸಿದ ಪಂಜಾಬ್ ಕಿಂಗ್ಸ್:
ಇನ್ನು, ಚೆನ್ನೈ ನೀಡಿದ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಪ್ರಭುಸಿಮರಾನ್ ಸಿಂಗ್ 13 ರನ್, ಜಾನಿ ಬೇರ್ಸ್ಟೋ 30 ಎಸೆತದಲ್ಲಿ 1 ಸಿಕ್ಸ್ 7 ಬೌಂಡರಿ ಸಹಿತ 46 ರನ್, ರಿಲ್ಲೆ ರುಸ್ಸೋ 23 ಎಸೆತದಲ್ಲಿ 2 ಸಿಕ್ಸ್ 5 ಬೌಂಡರಿ 43 ರನ್ ಸಿಡಿಸುವ ಮೂಲಕ ಅಬ್ಬರಿಸಿದರು. ಕೊನೆಯಲ್ಲಿ ಶಶಾಂಕ್ ಸಿಂಗ್ ಮತ್ತು ನಾಯಕ ಸ್ಯಾಮ್ ಕರನ್ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ತವರಿನಲ್ಲಿ ಸೈಲೆಂಟ್ ಆದ ಚೆನ್ನೈ ಬಾಯ್ಸ್:
ಇನ್ನು, ಚೆನ್ನೈನಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕ ಸ್ಯಾಮ್ ಕರನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಾದ ಬಳಿಕ ಚೆನ್ನೈ ತಂಡದ ಆರಂಭಿಕ ಆಟಗಾರರಾಗಿ ಅಜಿಂಕ್ಯ ರಹಾನೆ ಹಾಗೂ ನಾಯಕ ರುದುರಾಜ್ ಗಾಯಕ್ವಾಡ್ ಮೈದಾನಕ್ಕಿಳಿದರು. ಆದರೆ ಈ ಆರಂಭಿಕ ಜೋಡಿ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾಗಲಿಲ್ಲ. ಅಲ್ಲದೇ ಪಂಜಾಬ್ ಸ್ಪಿನ್ ಬೌಲರ್ ಗಳೂ ಸಹ ಉತ್ತಮ ದಾಳಿ ನಡೆಸಿದರು. ಈ ಮೂಲಕ ತಾಳ್ಮೆಯ ಆಟವಾಡಿದ ರಹಾನೆ 24 ಎಸೆತಗಳಲ್ಲಿ 29 ರನ್ ಗಳಿಸಿದರು. ಬಹು ನಿರೀಕ್ಷಿತ ಹಾಗೂ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಶಿವಂ ದುಬೆ ಶೂನ್ಯಕ್ಕೆ ಪೆವೆಲಿಯನ್ ಸೇರಿದರು.
ಬಳಿಕ ರವೀಂದ್ರ ಜಡೇಜಾ 2 ರನ್ ಗಳಿಸಿ ಔಟಾದರು. ಸಮೀರ್ ರಿಜ್ವಿ 21 ರನ್ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಉರುಳಿದರೂ ನಾಯಕ ರುತುರಾಜ್ ಗಾಯಕ್ವಾಡ್ ನಿಧಾನಗತಿಯಲ್ಲಿಯೇ ಆಟವಾಡಿ ರನ್ ಗಳಿಸಿದರು. ಗಾಯಕ್ವಾಡ್ ಅವರು 48 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 62 ರನ್ ಗಳಿಸಿದರು. ಆದರೆ ಅವರ ಈ ನಿಧಾನಗತಿಯ ಬ್ಯಾಟಿಂಗ್ ತಂಡದ ಮೊತ್ತ ಹೆಚ್ಚಿಸುವ ಬದಲು ನಿಯಂತ್ರಿಸು ರೀತಿಯಲ್ಲಿ ಕಂಡುಬಂದಿತು.
ಬಳಿಕ ಕ್ರೀಸ್ಗೆ ಆಗಮಿಸಿದ ಎಂಎಸ್ ಧೋನಿ 11 ಎಸೆತಗಳಲ್ಲಿ 14 ರನ್ ಸೇರಿಸಿ 20 ಓವರ್‌ಗಳ ಅಂತ್ಯಕ್ಕೆ ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಅತ್ತ ಪಂಜಾಬ್ ಕಿಂಗ್ಸ್ ಪರ ಕಗಿಸೋ ರಬಾಡ 1 ವಿಕೆಟ್, ಅರ್ಷದೀಫ್ ಸಿಂಗ್ 1 ವಿಕೆಟ್, ಹರ್ಪ್ರೀತ್ 4 ಓವರ್ಗೆ kಏಔಲ 17 ರನ್ ನೀಡಿ 2 ವಿಕೆಟ್ ಮತ್ತು ರಾಹುಲ್ ಚಹಾರ್ ಸಹ 4 ಓವರ್ಗೆ ಕೇವಲ 16 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1