IPL 2024, CSK vs SRH: ಈ ಟಾರ್ಗೆಟ್ ಬೆನ್ನಟ್ಟಿದ ಎಸ್ಆರ್ಎಚ್ ತಂಡವು ಬಲಿಷ್ಠ ಬ್ಯಾಟಿಂಗ್ ಮೂಲಕ ಭರ್ಜರಿ ಸಿಕ್ಸ್, ಫೋರ್ ಗಳ ಮೂಲಕ 18.1 ಓವರ್ಗೆ 4 ವಿಕೆಟ್ಗೆ 166 ರನ್ ಗಳಿಸುವ ಮೂಲಕ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
![](https://samagrasuddi.co.in/wp-content/uploads/2024/04/image-41.png)
ಐಪಿಎಲ್ 2024, 17ನೇ ಸೀಸನ್ನ (IPL 2024) 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಬಾದ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಘಾತದ ಜೊತೆಗೆ ತಂಡವು ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ 20 ಓವರ್ಗೆ 5 ವಿಕೆಟ್ ಕಳೆದುಕೊಂಡು ಕೇವಲ 165 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಎಸ್ಆರ್ಎಚ್ ತಂಡವು ಬಲಿಷ್ಠ ಬ್ಯಾಟಿಂಗ್ ಮೂಲಕ ಭರ್ಜರಿ ಸಿಕ್ಸ್, ಫೋರ್ ಗಳ ಮೂಲಕ 18.1 ಓವರ್ಗೆ 4 ವಿಕೆಟ್ಗೆ 166 ರನ್ ಗಳಿಸುವ ಮೂಲಕ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ 2 ಸೋಲನ್ನು ಕಂಡಿದೆ. ತವರಿನ ಮೈದಾನ ಹೊರತುಪಡಿಸಿ ಸಿಎಸ್ಕೆ 2 ಪಂದ್ಯವನ್ನೂ ಸೋತಿದೆ.
ಮತ್ತೆ ತವರಿನಲ್ಲಿ ಅಬ್ಬರಿಸಿದ ಹೈದರಾಬಾದ್:
ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸುಲಭ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಭರ್ಜರಿ ಓಫನಿಂಗ್ ನೀಡಿದರು. ಈ ಆರಂಭಿಕ ಜೋಡಿ ಕೇವಲ ಮೊದಲ ವಿಕೆಟ್ ಬೀಳುವ ವೇಳೆಗೆ ಜಸ್ಟ್ 2.4 ಓವರ್ಗೆ 46 ರನ್ ಸಿಡಿಸಿದ್ದರು. ಈ ವೇಳೆ ಟ್ರಾವಿಸ್ ಹೆಡ್ 24 ಎಸೆದತಲ್ಲಿ 1 ಸಿಕ್ಸ್ ಮತ್ತು 3 ಬೌಂಡರಿ ಮೂಲಕ 31 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 12 ಎಸೆತದಲ್ಲಿ 4 ಸಿಕ್ಸ್ ಮತ್ತು 3 ಫೋರ್ ಮೂಲಕ 37 ರನ್ ಗಳಿಸಿದರು. ಬಳಿಕ ಬಂದ ಅಡೇನ್ ಮಾರ್ಕರಂ ಸಹ 36 ಎಸೆತದಲ್ಲಿ 1 ಸಿಕ್ಸ್ 4 ಫೋರ್ ಮೂಲಕ 50 ರನ್ ಗಳಿಸಿದರೆ, ಶಾಬಾಝ್ ಅಹ್ಮದ್ 18 ರನ್ ಗಳಿಸುವ ಮೂಲಕ ಮಿಂಚಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸಿನ್ 18 ರನ್ ಮತ್ತು ನಿತೀಶ್ ಕುಮಾರ್ ರೆಡ್ಡಿ 14 ರನ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
ಅಬ್ಬರಿಸದ ಸಿಎಸ್ಕೆ, ದುಬೆ ಏಕಾಂಗಿ ಹೋರಾಟ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ಎಡವಿತು. ಅದರಲ್ಲಿಯೂ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ಮುಳುವಾಯಿತು. ಆದರೆ ಇದರ ನಡುವೆ ಶಿವಂ ದುಬೆ ಮಾತ್ರ ಉತ್ತಮ ಬ್ಯಾಟಿಂಗ್ ಮಾಡಿ ಮಿಂಚಿದರು.
ದುಬೆ 24 ಎಸೆತದಲ್ಲಿ 4 ಬೌಂಡರಿ ಮತ್ತು 2 ಫೋರ್ ಮೂಲಕ 45 ರನ್ ಗಳಿಸಿದರು. ಆದರೆ ರಚಿನ್ ರವೀಂದ್ರ 9 ಎಸೆತದಲ್ಲಿ 12 ರನ್, ನಾಯಕ ರುತುರಾಜ್ ಗಾಯಕ್ವಾಡ 21 ಎಸೆತದಲ್ಲಿ 26 ರನ್, ಅಜಿಂಕ್ಯಾ ರಹಾನೆ 30 ಎಸೆತದಲ್ಲಿ 35 ರನ್, ರವೀಂದ್ರ ಜಡೇಜಾ 23 ಎಸೆತದಲ್ಲಿ 31 ರನ್, ಡ್ಯಾರೆಲ್ ಮಿಚೆಲ್ 11 ಎಸೆತದಲ್ಲಿ 13 ರನ್ ಹಾಗೂ ಕೊನೆಯಲ್ಲಿ ಎಂಎಸ್ ಧೋನಿ 2 ಎಸೆತದಲ್ಲಿ 1 ರನ್ ಗಳಿಸಿದರು. ಈ ಮೂಲಕ ಹೆಚ್ಚಿನ ವಿಕೆಟ್ ಪತನವಾಗದಿದ್ದರೂ ಸಹ ರನ್ ಹರಿದುಬರಲಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1