IPL 2024 Live Streaming: ಹಾಟ್​ಸ್ಟಾರ್​ನಲ್ಲಿ ಇಲ್ಲ ಐಪಿಎಲ್ ಲೈವ್: ಐಪಿಎಲ್ 2024 ನೇರಪ್ರಸಾರ ಯಾವುದರಲ್ಲಿ ವೀಕ್ಷಿಸಬಹುದು?

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಆರಂಭಕ್ಕೆ ಕೇವಲ ಒಂದಿ ದಿನವಷ್ಟೆ ಬಾಕಿಯಿದೆ. ಮಾರ್ಚ್ 22 ರಂದು ಐಪಿಎಲ್ 2024ಕ್ಕೆ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್ ಮತ್ತು ಐದು ಬಾರಿ ವಿಜೇತರಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎದುರಿಸಲಿದೆ.

ಐಪಿಎಲ್ 2024 ಅನ್ನು 12 ಸ್ಥಳಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ, ಅವುಗಳಲ್ಲಿ 10 ಆಯಾ ಫ್ರಾಂಚೈಸಿಗಳ ಹೋಮ್ ಗ್ರೌಂಡ್‌ಗಳಾಗಿವೆ. ದೆಹಲಿ ಕ್ಯಾಪಿಟಲ್ಸ್ ಆರಂಭದಲ್ಲಿ ತಮ್ಮ ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಲಿದೆ. ವಿಶೇಷ ಎಂದರೆ ಭಾರತದ ಕ್ರಿಕೆಟ್ ಕಾಶಿ ಎಂದೇ ಹೇಳಲಾಗುವ ಮನಮೋಹಕ ಕ್ರೀಡಾಂಗಣ ಧರ್ಮಶಾಲಾದಲ್ಲಿ ಐಪಿಎಲ್ ಮ್ಯಾಚ್ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024 ಪಂದ್ಯಗಳ ಸಮಯ ನೋಡುವುದಾದರೆ, ಎಂದಿನಂತೆ ಸಂಜೆ 7:30 PM IST ಕ್ಕೆ ಪ್ರಾರಂಭವಾಗಲಿವೆ. ಆದಾಗ್ಯೂ, ಡಬಲ್-ಹೆಡರ್‌ಗಳನ್ನು ಒಳಗೊಂಡಿರುವ ದಿನಗಳಲ್ಲಿ, ಮೊದಲ ಪಂದ್ಯವು 3:30 PM IST ಕ್ಕೆ ಪ್ರಾರಂಭವಾಗುತ್ತದೆ. ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಉದ್ಘಾಟನಾ ಪಂದ್ಯ ಮಾತ್ರ ರಾತ್ರಿ 8:00 ಗಂಟೆಗೆ ನಿಗದಿಪಡಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 2024 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಭಾರತದ ವೀಕ್ಷಕರು ಜಿಯೋ ಸಿನಿಮಾದ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ವೀಕ್ಷಿಸಬಹುದು. ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಲೈವ್ ಇರುವುದಿಲ್ಲ. ಬದಲಾಗಿ ಟಿವಿಯಲ್ಲಾದರೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಇರಲಿದೆ.

ಇನ್ನು ಈ ವರ್ಷದ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂ ಸಮಾರಂಭಕ್ಕೆ ವೇದಿಕೆಯಾಗಿದೆ. ಓಪನಿಂಗ್ ಸೆರಮನಿ ಸಮಯ ಸಂಜೆ 6:30 IST. ಐಪಿಎಲ್ ಉದ್ಘಾಟನಾ ಸಮಾರಂಭವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ಲೈವ್ ಆಗಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವರ್ಷದ ಉದ್ಘಾಟನಾ ಸಮಾರಂಭಕ್ಕೆ ‘ರೈಸ್ ಆಸ್ ಒನ್’ ಥೀಮ್ ಅನ್ನು ಇಟ್ಟುಕೊಂಡಿದೆ. ಅಕ್ಷಯ್ ಕುಮಾರ್, ಎಆರ್ ರೆಹಮಾನ್, ಟೈಗರ್ ಶ್ರಾಫ್ ಮತ್ತು ಸೋನು ನಿಗಮ್ ಸೇರಿದಂತೆ ಇತರ ತಾರೆಯರು ಗ್ರ್ಯಾಂಡ್ ಈವೆಂಟ್‌ನಲ್ಲಿ ಪ್ರದರ್ಶನ ನೀಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದಾರೆ.

Source : https://tv9kannada.com/photo-gallery/cricket-photos/ipl-2024-not-on-hotstar-ipl-where-to-watch-ipl-2024-live-matches-and-opening-ceremony-vb-802744-5.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *