IPL 2024, LSG vs DC: ಲಕ್ನೋ ವಿರುದ್ಧ ಡೆಲ್ಲಿಗೆ ಭರ್ಜರಿ ಗೆಲುವು, RCB ಹಿಂದಿಕ್ಕಿದ ಪಂತ್​ ಪಡೆ

IPL 2024, LSG vs DC: ಸತತ ಸೋಲಿನಿಂದ ಬೇಸತ್ತಿದ್ದ ಡೆಲ್ಲಿಗೆ ಕೊನೆಗೂ 2ನೇ ಗೆಲುವು ದಕ್ಕಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಹಿಂದಿಕ್ಕಿದೆ.

ಐಪಿಎಲ್ 2024ರ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (DC vs LSG) ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್‌ಮನ್‌ಗಳು ಕೊನೆಯಲ್ಲಿ ಉತ್ತಮ ಬ್ಯಾಟಿಂಗ್​ ಮಾಡುವ ಮೂಲಕ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಲಕ್ನೋ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ದಟಕ್ಕೆ 167 ರನ್ ಗಳಿಸಿತು. ಈ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 18.1 ಓವರ್​ಗೆ 4 ವಿಕೆಟ್ ನಷ್ಟಕ್ಕೆ 170 ರನ್​ ಗಳಿಸುವ ಮೂಲಕ 6 ವಿಕೆಟ್​ ಗಳ ಜಯ ದಾಖಲಿಸಿದೆ.

ಅಬ್ಬರಿಸಿದ ಜಾಕ್​ ಪ್ರೆಸರ್​​- ಆರ್​​ಸಿಬಿ ಹಿಂದಿಕ್ಕಿದ ಡೆಲ್ಲಿ:

ಇನ್ನು, ಲಕ್ನೋ ನೀಡಿದ 168 ರನ್​ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗದಿದ್ದರೂ ಬಳಿಕ ಯುವ ಆಟಗಾರ ಹಾಗೂ ನಾಯಕ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ತಂಡವನ್ನು ಗೆಲುವಿನ ಸನಿಹ ತೆಗದುಕೊಂಡು ಹೋದರು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್​ 8 ರನ್​ ಹಾಗೂ ಪೃಥ್ವಿ ಶಾ 22 ಎಸೆತದಲ್ಲಿ 32 ರನ್​ ಸಿಡಿಸಿದರು. ಬಳಿಕ ಒಂದಾದ ಪಂತ್​ ಮತ್ತು ಪ್ರೆಸರ್ ಭರ್ಜರಿ ಬ್ಯಾಟಿಂಗ್​ ಮಾಡಿದರು. ಈ ವೇಳೆ ರಿಷಭ್​ ಪಂತ್​ 24 ಎಸೆತದಲ್ಲಿ 2 ಸಿಕ್ಸ್​ ಮತ್ತು 4 ಫೋರ್​ ಮೂಲಕ 41 ರನ್ ಹಾಗೂ ಜಾಕೆ ಪ್ರೆಸರ್ ಎಂಸಿಗುರ್ಕ್ 35 ಎಸೆತದಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿ ಸಹಿತ 55 ರನ್​ ಸಿಡಿಸಿದರು.

ಈ ಮೂಲಕ ಸತತ ಸೋಲಿನಿಂದ ಬೇಸತ್ತಿದ್ದ ಡೆಲ್ಲಿಗೆ ಕೊನೆಗೂ 2ನೇ ಗೆಲುವು ದಕ್ಕಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಹಿಂದಿಕ್ಕಿದೆ. 6 ಪಂದ್ಯದಲ್ಲಿ 2ರಲ್ಲಿ ಗೆದ್ದು 4 ಅಂಕ ಗಳಿಸುವುದರೊಂದಿಗೆ ಒಂದು ಸ್ಥಾನ ಮೇಲಕ್ಕೇರಿದ್ದು, ಆರ್​​ಸಿಬಿ ತಂಡವು ಕೊನೆಯ 10ನೇ ಸ್ಥಾನಕ್ಕೆ ಕುಸಿದಿದೆ.

ಕೊನೆಯಲ್ಲಿ ಅಬ್ಬರಿಸಿದ ಬಡೋನಿ:

ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ದಲ್ಲಿ ಲಕ್ನೋ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್‌ನ ಬೌಲರ್‌ಗಳು ಲಕ್ನೋ ಸೂಪರ್ ಜೈಂಟ್ಸ್‌ನ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕುಲದೀಪ್ ಯಾದವ್ ಅವರು ನಿಕೋಲಸ್ ಪೂರನ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಲಕ್ನೋ ಪರ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಹಾಗೂ ಮುಖೇಶ್ ಯಾದವ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಅದೇ ವೇಳೆ ಲಕ್ನೋ ಸೂಪರ್​ ಜೈಂಟಚ್ಸ್​ ಪರ ನಾಯಕ ಕೆಎಲ್ ರಾಹುಲ್ 22 ಎಸೆತದಲ್ಲಿ 5 ಫೋರ್​ ಮೂಲಕ 39 ರನ್​, ಕ್ವಿಂಟನ್ ಡಿ ಕಾಕ್ 19, ದೇವದತ್​ ಪಡಿಕ್ಕಲ್ 3 ರನ್, ಮಾರ್ಕಸ್​ ಸ್ಟೋನಿಸ್ 8 ರನ್, ನಿಕೋಲಸ್​ ಪೂರನ್​ ಶೂನ್ಯ, ದೀಪಕ್​ ಹೂಡ 10 ರನ್ಕೃನಲ್​ ಪಾಂಡ್ಯ 3 ರನ್ ಮತ್ತು ಅರ್ಷದ್ ಖಾನ್​ 20 ರನ್​ ಗಳಿಸಿದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ಆಯುಷ್ ಬಡೋನಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ವೇಳೆ ಅವರು 35 ಎಸೆತದಲ್ಲಿ 5 ಫೋರ್​ ಮತ್ತು 1 ಸಿಕ್ಸ್​ ಮೂಲಕ 55 ರನ್​ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

Source: https://kannada.news18.com/news/sports/ipl-2024-lsg-vs-dc-match-delhi-capitals-won-by-6-wickets-skb-1652205.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *