IPL 2024, LSG vs KKR: ಲಕ್ನೋ ಸೂಪರ್ ಜೈಂಟ್ಸ್ ತಂಡವು 16.1 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಿತು. ಈ ಮೂಲಕ 98 ರನ್ ಗಳ ಹೀನಾಯ ಸೋಲನ್ನಪ್ಪಿತು. ಈ ಭರ್ಜರಿ ಗೆಲುವಿನ ಮೂಲಕ ಕೋಲ್ಕತ್ತಾ ತಂಡವು ಪ್ಲೇಆಫ್ ಹಂತಕ್ಕೆ ಬಹುತೇಕ ಬಂದು ತಲುಪಿದೆ.

ಐಪಿಎಲ್ 2024ರ 54ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs KKR) ನಡುವೆ ನಡೆಯಿತು. ಈ ಪಂದ್ಯದಲ್ಲಿಟ ಆಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಆದರೆ ಕೆಕೆಆರ್ ತಂಡವು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡ ಮತ್ತೊಮ್ಮೆ 200ಕ್ಕೂ ಹೆಚ್ಚು ರನ್ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನಿಗದಿತ 20 ಓವರ್ಗೆ 6 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತು. ಈ ಮೂಲಕ ಲಕ್ನೋ ಗೆಲುವಿಗೆ 236 ರನ್ ಗಳ ಕಠಿಣ ಸವಾಲು ನೀಡಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 16.1 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಿತು. ಈ ಮೂಲಕ 98 ರನ್ ಗಳ ಹೀನಾಯ ಸೋಲನ್ನಪ್ಪಿತು. ಈ ಭರ್ಜರಿ ಗೆಲುವಿನ ಮೂಲಕ ಕೋಲ್ಕತ್ತಾ ತಂಡವು ಪ್ಲೇಆಫ್ ಹಂತಕ್ಕೆ ಬಹುತೇಕ ಬಂದು ತಲುಪಿದೆ.
ಬ್ಯಾಟಿಂಗ್ನಲ್ಲಿ ಎಡದವಿದ ಲಕ್ನೋ:
ಇನ್ನು, ಟಾಸ್ ಗೆದ್ದರೂ ಮೊದಲು ಬೌಲಿಂಗ್ ಮಾಡಿದ ಲಕ್ನೋಗೆ ಕೆಕೆಆರ್ ಬ್ಯಾಟರ್ಸ್ ಸರಿಯಾದ ಉತ್ತರವನ್ನೇ ನೀಡಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೀಡಿದ 236 ರನ್ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಎಡವಿತು. ಮತ್ತೊಮ್ಮೆ ಲಕ್ನೋ ತಂಡ ಬ್ಯಾಟಿಂಗ್ ನಲ್ಲಿ ಎಡವುವ ಮೂಲಕ ಮತ್ತೊಂದು ಸೋಲನ್ನು ಕಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆಎಲ್ ರಾಹುಲ್ 21 ಎಸೆತದಲ್ಲಿ 3 ಫೋರ್ ಮೂಲಕ 25 ರನ್ ಸಿಡಿಸಿ ಔಟ್ ಆದರು.
ಜೊತೆಗೆ ಅರ್ಷಿನ್ ಕುಲ್ಕರ್ಣಿ ಸಹ ಕೇವಲ 9 ರನ್ ಸಿಡಿಸಿ ಔಟ್ ಆದರು. ಬಳಿಕ ಬಂದ ಮಾರ್ಕಸ್ ಸ್ಟೋನಿಸ್ ಸಹ 21 ಎಸೆತದಲ್ಲಿ 2 ಸಿಕ್ಸ್ ಮತ್ತು 4 ಫೊರ್ ಮೂಲಕ 36 ರನ್ ಗಳಿಸಿ ಔಟ್ ಆದರು. ಉಳದಂತೆ ದೀಪಕ್ ಹೂಡಾ 5 ರನ್, ನಿಕೋಲಸ್ ಪೂರನ್ 10 ರನ್, ಆಯೂಶ್ ಬದೋನಿ 15 ರನ್, ಟರ್ನರ್ 16 ರನ್, ಕೃನಲ್ ಪಾಂಡ್ಯ 5 ರನ್, ಯಧುವೀರ್ ಸಿಂಗ್ 7 ರನ್ ಸಿಡಿಸದರೂ ಸಹ ತಂಡವನ್ನು ಗೆಲುವಿನ ದಡ ಸೇರಲಾಗಲಿಲ್ಲ.
ಇದನ್ನು ಓದಿ : Horoscope May 06 2024: ಸೋಮವಾರದ ದಿನಭವಿಷ್ಯ, ಈ ರಾಶಿಯವರಿಗೆ ಇಂದು ಸ್ವಲ್ಪ ಮಾನಸಿಕ ಆಲಸ್ಯವು ಇರುವುದು.
ಅಬ್ಬರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್:
ಲಕ್ನೋದ ಎಕ್ನಾ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಲು ಸವಾಲು ಹಾಕಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬ್ಯಾಟಿಂಗ್ ಮಾಡಿದ ಸುನಿಲ್ ನರೈನ್ 81 ರನ್, ಫಿಲಿಪ್ ಸಾಲ್ಟ್ 32 ರನ್, ರಘುವಂಶಿ 32 ರನ್, ಆಂಡ್ರೆ ರೌಸೆಲ್ 12 ರನ್, ರಿಂಕು ಸಿಂಗ್ 16 ರನ್, ಶ್ರೇಯಸ್ ಅಯ್ಯರ್ 23 ರನ್, ರಮಣದೀಪ್ ಸಿಂಗ್ 25 ರನ್ ಗಳಿಸಿದರು. ಲಕ್ನೋ ಬೌಲರ್ಗಳಲ್ಲಿ ನವೀನ್ ಉಲ್ ಹಕ್ 3 ವಿಕೆಟ್, ಯಶ್ ಠಾಕೂರ್ 1 ವಿಕೆಟ್, ರವಿ ಬಿಷ್ಣೋಯ್ 1 ವಿಕೆಟ್ ಮತ್ತು ಯುಧ್ವೀರ್ ಸಿಂಗ್ 1 ವಿಕೆಟ್ ಪಡೆದರು. ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 236 ರನ್ ಗಳ ಸವಾಲನ್ನು ನೀಡಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1