IPL 2024, MI vs DC: ಡೆಲ್ಲಿ ತಂಡ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ನಿಗದಿತ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸುವ ಮೂಲಕ ಅಬ್ಬರಿಸಿದರು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸುವ ಮೂಲಕ 10 ರನ್ ಗಳಿಂದ ಸೋಲನ್ನಪ್ಪಿದೆ.
ಐಪಿಎಲ್ 2024ರ 43ನೇ ಪಂದ್ಯ ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (MI vs DC) ನಡುವೆ ನಡೆಯಿತು. ಈ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟ್ಸ್‌ಮನ್‌ಗಳು ಮುಂಬೈ ಇಂಡಿಯನ್ಸ್‌ನ ಬೌಲರ್‌ಗಳ ಬೆವರಿಳಿಸಿದರು. ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಡೆಲ್ಲಿ ತಂಡ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ನಿಗದಿತ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸುವ ಮೂಲಕ ಅಬ್ಬರಿಸಿದರು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸುವ ಮೂಲಕ 10 ರನ್ ಗಳಿಂದ ಸೋಲನ್ನಪ್ಪಿದೆ.
ಮುಗ್ಗರಿಸಿದ ಮುಂಬೈ ಇಂಡಿಯನ್ಸ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ಮುಂಬೈಗೆ 258 ರನ್ ಗಳ ಬೃಹತ್ ಟಾರ್ಗೆಟ್ ನೀಡಿತು. ಈ ದೊಡ್ಡ ಮೊತ್ತದ ರನ್ ಚೇಸ್ ಆರಂಭಿಸಿದ ಮುಂಬೈಗೆ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 8 ರನ್ ಮತ್ತು ಇಶಾನ್ ಕಿಶನ್ 20 ರನ್ಗೆ ಬೇಗನೇ ಔಟ್ ಆದರು. ಬಳಿಕ ಬಂದ ಸೂರ್ಯಕುಮಾರ್ ಸಹ ಕೇವಲ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನೆಹಾಲ್ ವಡೇರಾ 4 ರನ್, ಮೊಹಮ್ಮದ್ ನಬಿ 7 ರನ್ ಸಿಡಿಸಿದರು. ತಿಲಕ್ ವರ್ಮಾ ಏಕಾಂಗಿಯಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು. ತಿಲಕ್ 32 ಎಸೆತದಲ್ಲಿ 4 ಸಿಕ್ಸ್ ಮತ್ತು 4 ಫೋರ್ ಮೂಲಕ 63 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 24 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿ ಸಹಿತ 46 ರನ್, ಟಿಮ್ ಡೇವಿಡ್ 17 ಎಸೆತದಲ್ಲಿ 3 ಸಿಕ್ಸ್ 2 ಫೋರ್ ಮೂಲಕ 37 ರನ್ ಗಳಿಸಿದರು. ಕೊನೆಯಲ್ಲಿ ಪಿಯೂಶ್ ಚಾವ್ಲಾ 10 ರನ್ ಮತ್ತು ಲುಕಿ ವುಡ್ 9 ರನ್ ಗಳಿಸಿದರೂ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್:
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲು ಬ್ಯಾಟಿಂಗ್ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಉತ್ತಮ ಆರಂಭ ಪಡೆಯಿತು. ಈ ಬಾರಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೋರಲ್ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಈ ಆರಂಭಿಕ ಜೋಡಿ ಔಟಾಗದೆ 100ಕ್ಕೂ ಹೆಚ್ಚು ಜೊತೆಯಾಟ ನಡೆಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಫ್ರೇಸರ್-ಮೆಕ್‌ಗುರ್ಕ್ 84 ರನ್, ಅಭಿಷೇಕ್ ಪೋರಲ್ 36 ರನ್, ಶಾಯ್ ಹೋಪ್ 41 ರನ್, ರಿಷಬ್ ಪಂತ್ 29 ರನ್, ಟ್ರಿಸ್ಟಿನ್ ಸ್ಟಬ್ 48 ರನ್ ಮತ್ತು ಅಕ್ಷರ್ ಪಟೇಲ್ 11 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ಬೌಲರ್‌ಗಳಾದ ಪಿಯೂಷ್ ಚಾವ್ಲಾ, ಬುಮ್ರಾ, ಲ್ಯೂಕ್ ವುಡ್ ಮತ್ತು ನಬಿ ತಲಾ 1 ವಿಕೆಟ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಗೆಲುವಿಗೆ 258 ರನ್‌ಗಳ ಸವಾಲನ್ನು ನೀಡಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1