IPL 2024, MI vs KKR: ಮುಂಬೈ ಇಂಡಿಯನ್ಸ್ ತಂಡವು 18,5 ಓವರ್‌ಗೆ 145 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕೆಕೆಆರ್ ವಿರುದ್ಧ 24 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಮುಂಬೈ ಬಹುತೇಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಐಪಿಎಲ್ ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಕೆಕೆಆರ್‌ಗೆ ಸ್ಟ್ರಾಂಗ್ ಎಂಬುದನ್ನು ಸಾಬೀತುಪಡಿಸಿದೆ. ವಾಂಖೆಡೆಯಲ್ಲಿ ಭರ್ಜರಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ ಅಂತಿಮವಾಗಿ 19.5 ಓವರ್‌ಗೆ ತನ್ನೆಲ್ಲಾ 10 ವಿಕೆಟ್ ಕಳೆದುಕೊಂಡು 169 ರನ್ ಸಿಡಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 18,5 ಓವರ್‌ಗೆ 145 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕೆಕೆಆರ್ ವಿರುದ್ಧ 24 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಮುಂಬೈ ಬಹುತೇಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಅರ್ಧಶತಕ ಸಿಡಿಸಿದ ಸೂರ್ಯ:
ಕೆಕೆಆರ್ ನೀಡಿದ 170 ರನ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 13 ರನ್ ಮತ್ತು ರೋಹಿತ್ ಶರ್ಮಾ 11 ರನ್ ಸಿಡಿಸಿದರೆ ನಮನ್ ಧೀರ್ ಸಹ 11 ರನ್ ಗಳಿಸಿ ಪೆವೆಲಿಯನ್ ಸೇರಿದರು. ಬಳಿಕ ತಂಡದ ಪ್ರಮುಖ ಆಟಗಾರನಾಗಿದ್ದ ತಿಲಕ್ ವರ್ಮಾ ಸಹ ಕೇವಲ 4 ರನ್‌ಗೆ ಸುಸ್ತಾದರೆ ನೆಹಾಲ್ ವದೇರಾ 6 ರನ್ ಸಿಡಿಸಿ ಔಟ್ ಆದರು. ಮಹತ್ವದ ಪಂದ್ಯದಲ್ಲಿ ನಿಂತು ಆಟವಾಡಬೇಕಿದ್ದ ನಾಯಕ ಹಾರ್ದಿಕ್ ಪಾಂಡ್ಯ ಸಹ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಸಿಡಿಸಿದರು. ಈ ವೇಳೆ ಸೂರ್ಯ 35 ಎಸೆತದಲ್ಲಿ 2 ಸಿಕ್ಸ್ ಮತ್ತು 6 ಫೋರ್ ಮೂಲಕ 56 ರನ್ ಗಳಿಸಿದರು.
ವಾಂಖೆಡೆಯಲ್ಲಿ ಅಬ್ಬರಿಸಿದ ಅಯ್ಯರ್:
ವೆಂಕಟೇಶ್ ಅಯ್ಯರ್ ಮತ್ತು ಮನೀಷ್ ಪಾಂಡೆ ಹೊರತುಪಡಿಸಿ ಕೋಲ್ಕತ್ತಾದ ಯಾವೊಬ್ಬ ಆಟಗಾರನೂ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ವೆಂಕಟೇಶ ಅಯ್ಯರ್ ಒಂದೇ ಕಡೆ ಗೋಡೆಯಂತೆ ನಿಂತು ಹೋರಾಟ ಮುಂದುವರಿಸಿದರು. ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ದಿನ, ಕೆಕೆಆರ್‌ನ ಬ್ಯಾಟಿಂಗ್ ಕ್ರಮಾಂಕವು ಆರಂಭದಿಂದಲೇ ಕುಸಿಯಿತು. ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ನೈಟ್ಸ್ ಒತ್ತಡಕ್ಕೆ ಸಿಲುಕಿತ್ತು. ಅದರಂತೆ 57 ರನ್‌ಗಳ ಒಳಗೆ, KKR ತಂಡದ ಅರ್ಧದಷ್ಟು ಮಂದಿ ಪೆವೆಲಿಯನ್‌ಗೆ ಮರಳಿದರು. ಫಿಲ್ ಸಾಲ್ಟ್ 5 ರನ್, ಸುನಿಲ್ ನರೈನ್ 8 ರನ್, ಆಂಗ್ಕ್ರಿಶ್ ರಘುವಂಶಿ 13 ರನ್, ನಾಯಕ ಶ್ರೇಯಸ್ ಅಯ್ಯರ್ 6 ರನ್, ರಿಂಕು ಸಿಂಗ್ 9 ರನ್ ಗಳಿಸಿ ಔಟ್ ಆದರು.
ಆದರೆ ವೆಂಕಟೇಶ್ ಅಯ್ಯರ್ ಒಂದು ಕಡೆಯಿಂದ ಇನ್ನಿಂಗ್ಸ್ ಉಳಿಸಿಕೊಂಡರು. ಇವರೊಂದಿಗೆ ಕನ್ನಡಿಗ ಮನೀಶ್ ಪಾಂಡೆ ಇಂಫ್ಯಾಕ್ಟ್ ಆಟಗಾರನಾಗಿ ಮಿಂಚಿದರು. ಇಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳು ಕೂಡ ಅಗತ್ಯಕ್ಕೆ ತಕ್ಕಂತೆ ಆಕ್ರಮಣಕಾರಿ ಹೊಡೆತಗಳನ್ನು ಆಡಿದರು. ಈ ವೇಳೆ ವೆಂಕಟೇಶ್ ಅಯ್ಯರ್ ಐವತ್ತನ್ನು ಪೂರೈಸಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ಮನೀಶ್ ಪಾಂಡೆ 83 ರನ್ ಜೊತೆಯಾಟವಾಡಿದರು. ಮನೀಶ್ ಪಾಂಡೆ 31 ಎಸೆತದಲ್ಲಿ 2 ಸಿಕ್ಸ್ 2 ಫೋರ್ ಮೂಲಕ 42 ರನ್ ಗಳಿಸಿ ಔಟಾದರು. ಈ ಜೋಡಿಯನ್ನು ಮುರಿದ ನಂತರ ಕೆಕೆಆರ್ ಬ್ಯಾಟಿಂಗ್ ಮತ್ತೆ ಕುಸಿಯಿತು. ವೆಂಕಟೇಶ್ ಅಯ್ಯರ್ 52 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಬೌಂಡರಿ ಸಹಿತ 70 ರನ್ ಸಿಡಿಸಿದರು. ಬಳಿಕ ಮತ್ತೆ ಕೆಕೆಆರ್ ಪೆವೆಲಿಯನ್ ಪೆರೇಡಟ್ ನಡೆಸಿದರು. ಆಂಡ್ರೆ ರಸೆಲ್ 7 ರನ್ ಗಳಿಸಿ ರನೌಟ್ ಆದರು. ರಮಣದೀಪ್ ಸಿಂಗ್ 2 ಮತ್ತು ಮಿಚೆಲ್ ಸ್ಟಾರ್ಕ್ ಖಾತೆ ತೆರೆಯದೆ ಬುಮ್ರಾಗೆ ಬಲಿಯಾದರು. ಕೊನೆಯಲ್ಲಿ, ವೆಂಕಟೇಶ್ ಅಯ್ಯರ್ 70 ರನ್ ಗಳಿಸುವ ಮೂಲಕ ಜಸ್ಪ್ರೀತ್ ಬುಮ್ರಾಗೆ ಮೂರನೇ ಬಲಿಯಾದರು. ಕೆಕೆಆರ್ 19.5 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದು ಮಿಂಚಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0