IPL 2024, MI vs SRH: ಮುಂಬೈ ಇಂಡಿಯನ್ಸ್ ತಂಡವು 17.2 ಓವರ್‌ಗೆ 3 ವಿಕೆಟ್ ಕಳೆದುಕೊಂಡು 174 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೇ ಈ ವೇಳೆ ಸೂರ್ಯಕುಮಾರ್ ಯಾದವ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈರ್ಸ್ ಹೈದ್ರಾಬಾದ್ (SRH vs MI) ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರ ಭಾಗವಾಗಿ ಇಂದು ಮುಂಬೈ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಅಂತಿಮವಾಗಿ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿದರು. ಬಳಿಕ ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 17.2 ಓವರ್‌ಗೆ 3 ವಿಕೆಟ್ ಕಳೆದುಕೊಂಡು 174 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೇ ಈ ವೇಳೆ ಸೂರ್ಯಕುಮಾರ್ ಯಾದವ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು.
ಸೂರ್ಯಕುಮಾರ್ ಅಬ್ಬರಕ್ಕೆ ಬೆಚ್ಚಿದ ಎಸ್‌ಆರ್‌ಎಚ್:
ಇನ್ನು, ಹೈದರಾಬಾದ್ ನೀಡಿದ 174 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 9 ರನ್ ಹಾಗೂ ರೋಹಿತ್ ಶರ್ಮಾ 4 ರನ್ ಸಿಡಿಸಿ ಔಟ್ ಆದರು. ನಮನ್ ದೀರ್ ಸಹ ಶೂನ್ಯಕ್ಕೆ ಮರಳಿದರು. ಆದರೆ ಸೂರ್ಯಕುಮಾರ್ ಯಾದವ್‌ಗೆ ತಿಲಕ್ ವರ್ಮಾ ಉತ್ತಮ ಸಾಥ್ ನೀಡಿದರು. ಈ ವೇಳೆ ತಿಲಕ್ 32 ಎಸೆತದಲ್ಲಿ 37 ರನ್ ಸಿಡಿಸಿದರು. ಆದರೆ ಇದೇ ವೇಳೆ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ತಂಡ ಪ್ರಕಟವಾದ ನಂತರ ಮೊದಲ ಭಾರತೀಯ ಆಟಗಾರನೊಬ್ಬ ಟಿ20 ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ. ಹೌದು ಸೂರ್ಯಕುಮಾರ್ ಕೇವಲ 51 ಎಸೆತದಲ್ಲಿ 12 ಫೋರ್ ಮತ್ತು 6 ಸಿಕ್ಸ್ ಮೂಲಕ 102 ರನ್ ಸಿಡಿಸಿ ಅಬ್ಬರಿಸಿದರು.
ಇದನ್ನು ಓದಿ : Horoscope Today May 07 2024: ಮಂಗಳವಾರದ ದಿನಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.
ಬ್ಯಾಟಿಂಗ್‌ನಲ್ಲಿ ಅಬ್ಬರಿಸದ ಹೈದರಾಬಾದ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿದರು. ಈ ವೇಳೆ ಎಸ್‌ಆರ್‌ಎಚ್ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ 30 ಎಸೆತದಲ್ಲಿ 1 ಸಿಕ್ಸ್ ಮತ್ತು 7 ಫೋರ್ ಮೂಲಕ 48 ರನ್ ಸಿಡಿಸಿದರು. ಆದರೆ ಅಭಿಷೇಕ್ ಶರ್ಮಾ 11 ರನ್, ಮಾಯಾಂಕ್ ಅರ್ಗವಾಲ್ 5 ರನ್, ನಿತೀಶ್ ಕುಮಾರ್ ರೆಡ್ಡಿ 20 ರನ್, ಹೆನ್ರಿಚ್ ಕ್ಲಾಸಿನ್ 2 ರನ್, ಮಾರ್ಕೋ ಜಾನ್ಸನ್ 17 ರನ್, ಶಾಬ್ಝಾಜ್ ಅಹ್ಮದ್ 10 ರನ್, ಅಬ್ದುಲ್ ಸಮದ್ 3 ರನ್ ಹಾಗೂ ಸನ್ವಿರ್ ಸಿಂಗ್ 8 ರನ್ ಸಿಡಿಸಿದರು. ಆದರೆ ಕೊನೆಯಲ್ಲಿ ನಾಯಕ ಪ್ಯಾಟ್ ಕಮೀನ್ಸ್ 17 ಎಸೆತದಲ್ಲಿ 2 ಸಿಕ್ಸ್ ಮತ್ತು 2 ಫೋರ್ ಮೂಲಕ 35 ರನ್ ಸಿಡಿಸುವ ಮೂಲಕ ಕೊನೆಯಲ್ಲಿ 173 ರನ್ ಕಲೆಹಾಕಲು ಸಹಾಯಕರಾದರು.
ಹಾರ್ದಿಕ್ ಭರ್ಜರಿ ಬೌಲಿಂಗ್:
ಇನ್ನು, ಮುಂಬೈ ಇಂಡಿಯನ್ಸ್ ಭರ್ಜರಿ ಬೌಲಿಂಗ್ ಮಾಡಿದರು. ಅದರಲ್ಲಿಯೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್‌ಗೆ 31 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಕೊನೆಗೂ ಬೌಲಿಂಗ್‌ನಲ್ಲಿ ಪಾಂಡ್ಯ ಮತ್ತೆ ಹಳೆಯ ಚಾರ್ಮ್‌ಗೆ ಮರಳಿದಂತಾಗಿದೆ. ಬಳಿಕ ಪಿಯೂಶ್ ಚಾವ್ಲಾ ಸಹ 4 ಓವರ್‌ಗೆ 33 ರನ್ ನೀಡಿ 3 ವಿಕೆಟ್ ಪಡೆದರು. ಅನ್ಷುಲ್ ಕಂಬೋಜ್ 1 ವಿಕೆಟ್, ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದು ಅಬ್ಬರಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1