IPL 2024 Prize Money: ಐಪಿಎಲ್ 17ನೇ ಸೀಸನ್ ಗೆದ್ದಿರುವ ಕೋಲ್ಕತ್ತಾ ತಂಡ ಎಷ್ಟು ಕೋಟಿ ಬಹುಮಾನದ ಮೊತ್ತ ಗೆದ್ದಿತು? ರನ್ನರ್ ಅಫ್ ತಮಡಕ್ಕೆ ಎಷ್ಟು ಕೋಟಿ? ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರಿಗೆ ಎಷ್ಟು ಮೊತ್ತದ ಬಹುಮಾನ ದೊರಕಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕೆಕೆಆರ್ ಮೊದಲು SRH ತಂಡವನ್ನು ಕೇವಲ 113 ರನ್‌ಗಳಿಗೆ ಆಲೌಟ್ ಮಾಡಿತು. ಇದಾದ ಬಳಿಕ ಕೋಲ್ಕತ್ತಾ 10.3 ಓವರ್‌ಗಳಲ್ಲಿ ಪಂದ್ಯ ಗೆದ್ದಿತು. ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಿದೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಮೊದಲ ಎರಡು ಪ್ರಶಸ್ತಿಗಳನ್ನು (2012 ಮತ್ತು 2014) ಗೆದ್ದಿತ್ತು. ಈಗ 2024ರಲ್ಲಿ ಕೆಕೆಆರ್ ಪ್ರಶಸ್ತಿ ಗೆದ್ದಾಗ ಗೌತಮ್ ಗಂಭೀರ್ ತಂಡದ ಮೆಂಟರ್ ಆಗಿದ್ದಾರೆ. ತಂಡದ ನಾಯಕತ್ವ ಶ್ರೇಯಸ್ ಅಯ್ಯರ್ ಕೈಯಲ್ಲಿತ್ತು. ಈ ಮೂಲಕ ಅಯ್ಯರ್ ಈ ವರ್ಷ ಚಾಂಪಿಯನ್ ಆಗಿದ್ದಾರೆ.
ಹಾಗಿದ್ದರೆ, ಐಪಿಎಲ್ 17ನೇ ಸೀಸನ್ ಗೆದ್ದಿರುವ ಕೋಲ್ಕತ್ತಾ ತಂಡ ಎಷ್ಟು ಕೋಟಿ ಬಹುಮಾನದ ಮೊತ್ತ ಗೆದ್ದಿತು? ರನ್ನರ್ ಅಫ್ ತಮಡಕ್ಕೆ ಎಷ್ಟು ಕೋಟಿ? ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರಿಗೆ ಎಷ್ಟು ಮೊತ್ತದ ಬಹುಮಾನ ದೊರಕಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಐಪಿಎಲ್ 2024ರ ಒಟ್ಟು ಬಹುಮಾನದ ಮೊತ್ತ ಬರೋಬ್ಬರಿ 46.5 ಕೋಟಿ ಆಗಿದೆ. ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲದೆ, ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳಿಗೂ ಬಹುಮಾನ ನೀಡಲಾಗುವುದು. ಹೌದು, ಅಂದರೆ ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಐಪಿಎಲ್ ಬಹುಮಾನದ ಮೊತ್ತ ದೊರಕಲಿದೆ.
ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಬರೋಬ್ಬರಿ 20 ಕೋಟಿ ರೂ ಬಹುಮಾನದ ಮೊತ್ತವನ್ನು ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ಆಗಿರುವಸನ್‌ರೈರ್ಸ್ ಹೈದರಾಬಾದ್ ತಂಡಕ್ಕೆ ಈ ಬಾರಿ 13 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಪಡೆದಿದೆ. ಕಳೆದ ಕೆಲ ವರ್ಷದಿಂದ ಐಪಿಎಲ್ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ.
ಇನ್ನು, ಚಾಂಪಿಯನ್ ತಂಡವಾಗಿರುವ ಕೋಲ್ಕತ್ತಾಗೆ ಟ್ರೋಫಿ ಜೊತೆಗೆ 20 ಕೋಟಿ ಮೊತ್ತ ಸಿಕ್ಕಿದ್ದು. ಬಳಿಕ ರನ್ನರ್‌ಅಫ್ ಆಗಿರುವ ಎಸ್‌ಆರ್‌ಎಚ್ ತಂಡಕ್ಕೆ 13 ಕೋಟಿ ಹಣ ದಕ್ಕಿದೆ. ಅದೇ ರೀತಿ ಈ ಬಾರಿಯ ಐಪಿಎಲ್ ಟೂರ್ನಿಯ ಲ್ಲಿ ಮೂರನೇ ಸ್ಥಾನದಲ್ಲಿರುವ ತಂಡ ರಾಜಸ್ಥಾನ್ ರಾಯಲ್ಸ್ ಮಡಿಲಿಗೆ ಬರೋಬ್ಬರಿ 7 ಕೋಟಿ ರೂ ಹಾಗೂ ನಾಲ್ಕನೇ ಶ್ರೇಯಾಂಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.5 ಕೋಟಿ ರೂ ದೊರಕಿದೆ.
ಇದರೊಂದಿಗೆ ಐಪಿಎಲ್ 2024ರಲ್ಲಿ ವಿಜೇತ ತಂಡಗಳೊಂದಿಗೆ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಇದು ಒಟ್ಟಾರೆಯಾಗಿ ಈ ವರ್ಷದ ಬಹುಮಾನದ ಮೊತ್ತವಾಗಿದೆ.
ಈ ಬಾರಿ 15 ಪಂದ್ಯದಿಂದ ಬರೋಬ್ಬರಿ ದಾಖಲಯೆ 741 ರನ್ ಸಿಡಿಸಿರುವ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದು, ಪಂಜಾಬ್ ಕಿಂಗ್ಸ್ ಬೌಲರ್ ಹರ್ಷಲ್ ಪಟೇಲ್ 14 ಪಂದ್ಯದಿಂದ 24 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಇವರಿಬ್ಬರಿಗೂ ತಲಾ 15 ಲಕ್ಷ ರೂ ಸಿಗಲಿದೆ.