IPL 2024, RCB vs GT: ಗುಜರಾತ್‌ ವಿರುದ್ಧ ಆರ್‌‌ಸಿಬಿಗೆ ಭರ್ಜರಿ ಗೆಲುವು, ಹ್ಯಾಟ್ರಿಕ್‌ ಜಯ ದಾಖಲಿಸಿದ ಫಾಫ್‌ ಪಡೆ.

Cricket: IPL 2024: ಆರ್​ಸಿಬಿಯ ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ 52ನೇ ಪಂದ್ಯದಲ್ಲಿ ಆತಿಥೇಯ ಫಾಫ್ ಡುಪ್ಲೆಸಿಸ್ ಪಡೆ, ಗುಜರಾತ್ ಟೈಟಾನ್ಸ್ ತಂಡವನ್ನು 4 ವಿಕೆಟ್​​ಗಳಿಂದ ಮಣಿಸಿದೆ. ಇದು ಈ ಆವೃತ್ತಿಯಲ್ಲಿ ಆರ್​ಸಿಬಿಯ 4ನೇ ಗೆಲುವಾಗಿದ್ದು, ಒಟ್ಟು 8 ಅಂಕಗಳೊಂದಿಗೆ ಆರ್​ಸಿಬಿ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಏಕಾಏಕಿ ಮೂರು ಸ್ಥಾನ ಮೇಲೇರಿ, ಇದೀಗ 7ನೇ ಸ್ಥಾನಕ್ಕೆ ಬಂದು ಕುಳಿತಿದೆ.

ಆರ್​ಸಿಬಿಯ ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ (IPL 2024)  52ನೇ ಪಂದ್ಯದಲ್ಲಿ ಆತಿಥೇಯ ಫಾಫ್ ಡುಪ್ಲೆಸಿಸ್ ಪಡೆ, ಗುಜರಾತ್ ಟೈಟಾನ್ಸ್ (Royal Challengers Bengaluru vs Gujarat Titans) ತಂಡವನ್ನು 4 ವಿಕೆಟ್​​ಗಳಿಂದ ಮಣಿಸಿದೆ. ಇದು ಈ ಆವೃತ್ತಿಯಲ್ಲಿ ಆರ್​ಸಿಬಿಯ 4ನೇ ಗೆಲುವಾಗಿದ್ದು, ಒಟ್ಟು 8 ಅಂಕಗಳೊಂದಿಗೆ ಆರ್​ಸಿಬಿ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಏಕಾಏಕಿ ಮೂರು ಸ್ಥಾನ ಮೇಲೇರಿ, ಇದೀಗ 7ನೇ ಸ್ಥಾನಕ್ಕೆ ಬಂದು ಕುಳಿತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಶಾರುಖ್ ಖಾನ್ 37 ರನ್ ಹಾಗೂ ರಾಹುಲ್ ತೆವಾಟಿಯಾ 35 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಆರಂಭಿಕರಾದ ಫಾಫ್ ಡುಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿಯ (Virat Kohli) ಸ್ಫೋಟಕ ಆರಂಭದ ನೆರವಿನಿಂದ ಇನ್ನು 38 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆಬೀರಿತು.

ತತ್ತರಿಸಿದ ಗುಜರಾತ್ ಇನ್ನಿಂಗ್ಸ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಗುಜರಾತ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ನಾಯಕ ಫಾಫ್ ಡು ಪ್ಲೆಸಿಸ್ ಅವರ ನಿರ್ಧಾರವನ್ನು ಆರ್‌ಸಿಬಿ ಬೌಲರ್‌ಗಳು ಸಮರ್ಥಿಸಿಕೊಂಡರು. ಆರಂಭದಲ್ಲೇ ಗುಜರಾತ್​ ಬ್ಯಾಟರ್​ಗಳ ಹೆಡೆಮುರಿ ಕಟ್ಟಿದ ಆರ್​ಸಿಬಿ ವೇಗಿಗಳು ಗುಜರಾತ್ ತಂಡವನ್ನು 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಮಾಡಿದರು. ತಂಡದ ಪರ ಗರಿಷ್ಠ ರನ್ ಕಲೆಹಾಕಿದ ಶಾರುಖ್ ಖಾನ್ 24 ಎಸೆತಗಳಲ್ಲಿ 37 ರನ್ ಗಳಿಸಿದರು. ರಾಹುಲ್ ತೆವಾಟಿಯಾ ಕೂಡ 35 ರನ್​ಗಳ ಕಾಣಿಕೆ ನೀಡಿದರೆ, ಡೇವಿಡ್ ಮಿಲ್ಲರ್ 30 ರನ್ ಬಾರಿಸಿದರು. ಉಳಿದಂತೆ ರಶೀದ್ ಖಾನ್ 18 ರನ್ ಮತ್ತು ವಿಜಯ್ ಶಂಕರ್ 10 ರನ್ ಕೊಡುಗೆ ನೀಡಿದರು. ಇದನ್ನು ಬಿಟ್ಟರೆ ತಂಡದ ಉಳಿದ ಬ್ಯಾಟರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರಲಿಲ್ಲ. ಇತ್ತ ಇಂದಿನ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ವಿಜಯಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಆರ್​ಸಿಬಿಗೆ ಸ್ಫೋಟಕ ಆರಂಭ

ಗುಜರಾತ್ ತಂಡವನ್ನು 148 ರನ್​ಗಳಿಗೆ ಕಟ್ಟಿಹಾಕಿ ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ಆರಂಭ ನೀಡಿದರು. ಇಬ್ಬರೂ ಕೇವಲ 35 ಎಸೆತಗಳಲ್ಲಿ 92 ರನ್​ಗಳ ಸ್ಫೋಟಕ ಜೊತೆಯಾಟ ನಡೆಸಿದರು. ಈ ನಡುವೆ ಫಾಫ್ ಅರ್ಧಶತಕ ಕೂಡ ಪೂರೈಸಿದರು. ಫಾಫ್ 23 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 64 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆರ್​ಸಿಬಿ 10 ಓವರ್​ ಒಳಗೆ ಜಯದ ನಗೆ ಬೀರಲಿದೆ ಎಂದು ತೊರುತ್ತಿತ್ತು.

25 ರನ್‌ಗಳ ಅಂತರದಲ್ಲಿ 6 ವಿಕೆಟ್

ಆದರೆ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಬಳಿಕ ಆರ್‌ಸಿಬಿ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಹೀಗಾಗಿ ಆರ್‌ಸಿಬಿ ಕೇವಲ 25 ರನ್‌ಗಳ ಅಂತರದಲ್ಲಿ ಬರೋಬ್ಬರಿ 6 ವಿಕೆಟ್ ಕಳೆದುಕೊಂಡಿತು. ವಿಲ್ ಜಾಕ್ಸ್ 1, ರಜತ್ ಪಾಟಿದಾರ್ 2, ಗ್ಲೆನ್ ಮ್ಯಾಕ್ಸ್ ವೆಲ್ 4 ಮತ್ತು ಕ್ಯಾಮರೂನ್ ಗ್ರೀನ್ 1 ಮತ್ತು ವಿರಾಟ್ ಕೊಹ್ಲಿ 42 ರನ್ ಗಳಿಸಿ ಔಟಾದರು. ನಂತರ ಬಂದ ದಿನೇಶ್ ಕಾರ್ತಿಕ್ ಮತ್ತು ಸ್ವಪ್ನಿಲ್ ಸಿಂಗ್ ಜೊತೆಯಾಟ ನಡೆಸಿ ಆರ್​ಸಿಬಿ ಗೆಲುವಿಗೆ ಕಾರಣರಾದರು. ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ 15 ರನ್​ಗಳ ಕೊಡುಗೆ ನೀಡಿದರು. ಗುಜರಾತ್ ಪರ ಜೋಶುವಾ ಲಿಟಲ್ ಒಬ್ಬರೇ 4 ವಿಕೆಟ್ ಹಾಗೂ ನೂರ್ ಅಹ್ಮದ್ 2 ವಿಕೆಟ್ ಪಡೆದರು.

Source: https://tv9kannada.com/sports/cricket-news/ipl-2024-royal-challengers-bangalore-beat-gujarat-titans-by-4-wickets-psr-826533.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *