IPL 2024, RCB vs GT: ವಿಲ್ ಜ್ಯಾಕ್ಸ್​ ಭರ್ಜರಿ ಶತಕ, ಗುಜರಾತ್​ ವಿರುದ್ಧ ಆರ್​​ಸಿಬಿಗೆ ಸೂಪರ್​​ ಗೆಲುವು

Cricket: IPL 2024, RCB vs GT: ಈ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡವು 16 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ 9 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿದರು.

ಐಪಿಎಲ್ 2024ರ 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (GT vs RCB) ನಡುವೆ ಪಂದ್ಯ ನಡೆಯಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​​ಸಿಬಿ ನಾಯಕ ಫಾಫ್​ ಡುಪ್ಲೇಸಿಸ್​​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ತಂಡವು ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 200 ರನ್​ ಗಳಿಸುವ ಮೂಲಕ 201 ರನ್​ ಗಳ ಟಾರ್ಗೆಟ್ ನೀಡಿತು. ಈ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡವು 16 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ 9 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿದರು.

ಗುಜರಾತ್​​ನಲ್ಲಿ ಜ್ಯಾಕ್ಸ್​​ ಭರ್ಜರಿ ಶತಕ:

ಇನ್ನು, ಗುಜರಾತ್​ ನೀಡಿದ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ತಂಡಕ್ಕೆ ವಿಲ್​ ಜ್ಯಾಕ್ಸ್​ ಆಟ ಗೆಲುವಿನ ಹಾರವಾಗಿ ಬದಲಾಯಿತು. ನೋಡ ನೋಡುತ್ತಿದ್ದಂತೆಯೇ ಶತಕ ಸಿಡಿಸಿ ಮ್ಯಾಚ್ ವಿನ್​ ಮಾಡಿದ ವಿಲ್​ ಜ್ಯಾಕ್ಸ್​ ಆರ್​​ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ವಿಲ್​ ಜ್ಯಾಕ್ಸ್ 41 ಎಸೆದತಲ್ಲಿ 10 ಸಿಕ್ಸ್​ ಮತ್ತು 5 ಬೌಂಡರಿ ಮೂಲಕ 243.90 ಸ್ಟ್ರೈಕ್​ ರೇಟ್​​ನಲ್ಲಿ ಭರ್ಜರಿ 100 ರನ್​ ಸಿಡಿಸಿ ಮಿಂಚಿದರು. ಇವರಿಗೆ ವಿರಾಟ್ ಕೊಹ್ಲಿ ಉತ್ತಮ ಸಾಥ್​ ನೀಡಿದರು. ಕೊಹ್ಲಿ ಅಂತಿಮವಾಗಿ 44 ಎಸೆತದಲ್ಲಿ 3 ಸಿಕ್ಸ್​ ಮತ್ತು 6 ಫೋರ್​ ಮೂಲಕ 70 ರನ್​ ಸಿಡಿಸಿ ಅಜೇಯರಾಗಿ ಉಳಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಫಾಫ್​ ಡುಪ್ಲೇಸಿಸ್​ 21 ಎಸೆದತಲ್ಲಿ 24 ರನ್​ ಗಳಿಸಿದ್ದರು.

ಅಬ್ಬರಿಸಿದ ಸಾಯಿ ಸುದರ್ಶನ್​:

ಇನ್ನು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್​ ಟೈಟನ್ಸ್​ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್​ ಸಾಹಾ 5 ರನ್​ ಮತ್ತು ಶುಭ್​ಮನ್ ಗಿಲ್ 16 ರನ್​ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಗುಜರಾತ್​ ತಂಡವು ಮೊದಲ 6 ರನ್​ ಗೆ ಮೊದಲ ವಿಕೆಟ್ ಹಾಗೂ 45 ರನ್​​ ಗೆ 2ನೇ ವಿಕೆಟ್ ಕಳೆದುಕೊಂಡಿತು.

ಆದರೆ ಬಳಿಕ ಸಾಯಿ ಸುದರ್ಶನ್​ ಮತ್ತು ಶಾರೂಖ್​ ಖಾನ್​ ಭರ್ಜರಿ ಬ್ಯಾಟಿಂಗ್​ ಜೊತೆಗೆ ಉತ್ತಮ ಜೊತೆಯಾಟವಾಡಿದರು. ಈ ವೇಳೆ ಶಾರೂಖ್​ ಖಾನ್​ 30 ಎಸೆತದಲ್ಲಿ 5 ಸಿಕ್ಸ್​ ಮತ್ತು 3 ಬೌಂಡಿರಿ ಸಹಿತ 58 ರನ್​ ಗಳಿಸಿದರು. ಸಾಯಿ ಸುದರ್ಶನ್​ 49 ಎಸೆತದಲ್ಲಿ 4 ಸಿಕ್ಸ್​ ಮತ್ತು 8 ಫೋರ್​ ಮೂಲಕ 84 ರನ್​​ ಗಳಿಸಿ ಅಜೇಯರಾಗಿ ಉಳಿದರು. ಬಳಿಕ ಡೇವಿಡ್​​​ ಮಿಲ್ಲರ್​ 19 ಎಸೆತದಲ್ಲಿ 1 ಸಿಕ್ಸ್​ 2 ಫೋರ್​ ಮೂಲಕ 26 ರನ್​ ಚಚ್ಚಿದರು. ಇತ್ತ ಆರ್​​ಸಿಬಿ ಪರ ಸ್ವಪ್ನಿಲ್​ ಸಿಂಗ್​ 1 ವಿಕೆಟ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಮತ್ತು ಗ್ಲೇನ್​ ಮ್ಯಾಕ್ಸ್​​ವೆಲ್​ 1 ವಿಕೆಟ್ ಪಡೆದು ಮಿಂಚಿದರು.

Source: https://kannada.news18.com/news/sports/ipl-2024-rcb-vs-gt-match-royal-challengers-bengaluru-won-by-9-wickets-skb-1675651.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *