IPL 2024, RCB vs MI: ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಗೆಲುವು, ಆರ್​​ಸಿಬಿಗೆ ಸತತ 5ನೇ ಸೋಲು.

IPL 2024, RCB vs MI: ಆರ್​​ಸಿಬಿ ನೀಡಿದ 197 ರನ್​ ಟಾರ್ಗೆಟ್​​ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಸುಲಭವಾಗಿ ಗುರಿಯನ್ನು ಬೆನ್ನಟ್ಟಿತು. ಯಾವುದೇ ಹಂತದಲ್ಲಿಯೂ ಈ ಸ್ಕೋರ್​ ದೊಡ್ಡ ಮೊತ್ತದ್ದು ಎಂದು ಯಾರಿಗೂ ಅನಿಸದ ರೀತಿಯಲ್ಲಿ ಮುಂಬೈ ಬ್ಯಾಟರ್​ ಗಳು ಅಬ್ಬರಿಸಿದರು.

ಐಪಿಎಲ್ 2024ರ 25ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರ್​​ಸಿಬಿ ತಂಡ ಆರಂಭಿಕ ಆಘಾತ ಎದುರಿಸಿದರೂ ಸಹ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಮತ್ತು ರಜತ್ ಪಾಟಿದಾರ್ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಬೃಹತ್​ ಸ್ಕೋರ್​ ಕಲೆಹಾಕುವಲ್ಲಿ ಯಶಸ್ವಿಯಾದರು. ಈ ಮೂಲಕ ಅಂತಿಮವಾಗಿ ಆರ್‌ಸಿಬಿ 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 196 ರನ್​ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ 197 ರನ್‌ಗಳ ಸವಾಲನ್ನು ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಯನ್ಸ್ ತಂಡವು 15.3 ಓವರ್​ಗೆ 3 ವಿಕೆಟ್ ನಷ್ಟಕ್ಕೆ 199 ರನ್​ ಗಳಿಸುವ ಮೂಲಕ 7 ವಿಕೆಟ್​ ಗಳ ಜಯ ದಾಖಲಿಸಿತು.

ಮುಂಬೈಯಲ್ಲಿ ಹಾರ್ದಿಕ್​ ಬಾಯ್ಸ್​ ಕಮಾಲ್​:

ಇನ್ನು, ಆರ್​​ಸಿಬಿ ನೀಡಿದ 197 ರನ್​ ಟಾರ್ಗೆಟ್​​ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಸುಲಭವಾಗಿ ಗುರಿಯನ್ನು ಬೆನ್ನಟ್ಟಿತು. ಯಾವುದೇ ಹಂತದಲ್ಲಿಯೂ ಈ ಸ್ಕೋರ್​ ದೊಡ್ಡ ಮೊತ್ತದ್ದು ಎಂದು ಯಾರಿಗೂ ಅನಿಸದ ರೀತಿಯಲ್ಲಿ ಮುಂಬೈ ಬ್ಯಾಟರ್​ ಗಳು ಅಬ್ಬರಿಸಿದರು. ಈ ವೇಳೆ ಇಶಾನ್​ ಕಿಶನ್​ 34 ಎಸೆತದಲ್ಲಿ 5 ಸಿಕ್ಸ್, 7 ಫೋರ್​ ಮೂಲಕ 69 ರನ್​, ರೋಹಿತ್ ಶರ್ಮಾ 3 ಸಿಕ್ಸ್, 3 ಬೌಂಡರಿ ಮೂಲಕ 38 ರನ್, ಸೂರ್ಯಕುಮಾರ್ ಯಾದವ್ 19 ಎಸೆತದಲ್ಲಿ 4 ಸಿಕ್ಸ್​ ಮತ್ತು 5 ಫೋರ್​ ಮೂಲಕ 52 ರನ್​ ಸಿಡಿಸುವ ಮೂಲಕ ಮುಂಬೈ ತವರಿನಲ್ಲಿ ಸತತ 2ನೇ ಗೆಲುವನ್ನು ಕಂಡಿದೆ.

ಅಬ್ಬರಿಸಿದ ಆರ್​​ಸಿಬಿ ಬಾಯ್ಸ್:

ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ 9 ಎಸೆತದಲ್ಲಿ ಕೇವಲ 3 ರನ್​ ಗಳಿಸಿ ಬುಮ್ರಾ ಎಸೆತದಲ್ಲಿ ಪೆವೆಲಿಯನ್​ ಸೇರಿದರು. ಬಳಿಕ ಪದಾರ್ಪಣಾ ಪಂದ್ಯದಲ್ಲಿ ವಿಲ್ ಜಾಕ್ಸ್​ ಸಹ 6 ಎಸೆತದಲ್ಲಿ 2 ಬೌಂಡರಿ ಸಹಿತ 8 ರನ್​ ಸಿಡಿಸಿ ಔಟ್ ಆದರು. ಇದಾದ ಬಳಿಕ ಒಂದಾದ ನಾಯಕ ಫಾಫ್ ಡುಪ್ಲೇಸಿಸ್ ಮತ್ತು ರಜತ್​ ಪಾಟಿದಾರ್​ ಭರ್ಜರಿ ಬ್ಯಾಟಿಂಗ್​ ಮಾಡಿದರು.

ಜಸ್ಪ್ರೀತ್​ ಬುಮ್ರಾ ಭರ್ಜರಿ ಬೌಲಿಂಗ್​:

ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಗಳಿಸಿದರೆ, ಆಕಾಶ್ ಮಧ್ವಲ್, ಶ್ರೇಯಸ್ ಗೋಪಾಲ್ ಮತ್ತು ಜೆರಾಲ್ಡ್ ಕೋಟ್ಜಿ ತಲಾ ಒಂದು ವಿಕೆಟ್ ಪಡೆದರು. ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್ ಗಳಿಸಿ ಮುಂಬೈ ಇಂಡಿಯನ್ಸ್ ಗೆಲುವಿಗೆ 197 ರನ್‌ಗಳ ಸವಾಲನ್ನು ನೀಡಿತು. ಅದರಲ್ಲಿಯೂ ಬುಮ್ರಾ ಬರೋಬ್ಬರಿ 5ನೇ ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಸಾಧನೆ ಮಾಡಿದರು.

ಆರ್‌ಸಿಬಿ ಪರ ಆಡುವಾಗ ಫಾಫ್ ಡು ಪ್ಲೆಸಿಸ್ 40 ಎಸೆತದಲ್ಲಿ 3 ಸಿಕ್ಸ್​, 4 ಫೊರ್​ ಮೂಲಕ 61 ರನ್, ರಜತ್ ಪಾಟಿದಾರ್ 26 ಎಸೆತದಲ್ಲಿ 44 ಸಿಕ್ಸ್​ ಮತ್ತು 3 ಬೌಂಡರಿ ಸಹಿತ 50 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ ಕೇವಲ 23 ಎಸೆತದಲ್ಲಿ 4 ಸಿಕ್ಸ್​ ಮತ್ತು 5 ಫೋರ್​ ಮೂಲಕ 53 ರನ್ ಗಳಿಸಿ ಅಬ್ಬರಿಸಿದರು. ಆದರೆ ಮತ್ತದೇ ಡಕೌಟ್ ಆಗುವ ಮೂಲಕ ಗ್ಲೇನ್​ ಮ್ಯಾಕ್ಸ್​​ವೆಲ್​ ನಿರಾಸೆ ಮೂಡಿಸಿದರು. ಇವರಂತೆ ಮಹಿಪಾಲ್​ ಲೋಮ್ರೋರ್​ ಸಹ ಶೂನ್ಯಕ್ಕೆ ವಾಪಸ್ಸಾದರೆ, ಸೌರವ್​ ಚೌಹಾಣ್​ 9 ರನ್​, ವೈಶಾಕ್​ ವಿಜಯ್​ ಕುಮಾರ್ ಶೂನ್ಯ ಮತ್ತು ಆಕಾಶ್​ ದೀಪ್​ 2 ರನ್​ ಸಿಡಿಸಿದರು.

 

Leave a Reply

Your email address will not be published. Required fields are marked *