Cricket: IPL 2024, RCB vs SRH: ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯದ್ಭುತ ಸ್ಟ್ರೈಕ್ ಮೂಲಕ ಅತಿ ದೊಡ್ಡ ಸ್ಕೋರ್ ಮಾಡಿತು. 287 ರನ್ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರು ಮೈದಾನದಲ್ಲಿಯೇ ಮತ್ತೊಮ್ಮೆ ಮುಗ್ಗರಿಸುವ ಮೂಲಕ ಹೀನಾಯವಾಗಿ ಸೋಲನ್ನಪ್ಪಿತು.

ಐಪಿಎಲ್ 2024ರ 30ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿ ಬೌಲರ್‌ಗಳ ಬೆವರಿಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ನಿರ್ಮಿಸಿದರು. ಹೈದರಾಬಾದ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಆರ್‌ಸಿಬಿ ಗೆಲುವಿಗೆ 288 ರನ್‌ಗಳ ಸವಾಲನ್ನು ನೀಡಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ತಂಡವು ನಿಗದಿತ 20 ಓರವ್ಗೆ 7 ವಿಕೆಟ್ ಗೆ 262 ರನ್ ಗಳಿಸಿತು. ಈ ಮೂಲಕ 26 ರನ್ ಗಳಿಂದ ಸೋಲನ್ನಪ್ಪಿತು.
ಕಾರ್ತಿಕ್ ಏಕಾಂಗಿ ಹೋರಾಟ ವ್ಯರ್ಥ:
ಇನ್ನು, ಹೈದರಾಬಾದ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ತಂಡ ಸಹ ಉತ್ತಮ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೇಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ವೇಳೆ ಕೊಹ್ಲಿ 20 ಎಸೆತದಲ್ಲಿ 42 ರನ್ ಮತ್ತು ಫಾಫ್ 28 ಎಸೆತದಲ್ಲಿ 62 ರನ್ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಬಳಿಕ ಬಂದಂತಹ ವಿಲ್ ಜ್ಯಾಕ್ಸ್ ದುರಾದೃಷ್ಟವಶಾತ್ ಔಟ್ ಆದರು. ಅವರು 7 ರನ್, ರಜತ್ ಪಾಟಿದಾರ್ 9 ರನ್, ಸೌರವ್ ಚೌಹಾಣ್ ಶೂನ್ಯ, ಮಹಿಪಾಲ್ ಲೊಮ್ರೋರ್ 19 ರನ್ ಗಳಿಸಿ ಪೆವೆಲಿಯನ್ ಸೇರಿದರು.
ಆದರೆ ದಿನೇಶ್ ಕಾರ್ತಿಕ್ ಮಾತ್ರ ಏಕಾಂಗಿಯಾಗಿ ಹೋರಾಟ ಮಾಡಿದರು. ಸತತ 2 ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕಾರ್ತಿಕ್ ಅವರಿಗೆ ಇಂದು ಯಾರೊಬ್ಬರೂ ಉತ್ತಮ ಸಾಥ್ ನೀಡಲಿಲ್ಲ. ಇಲ್ಲವಾದ್ದಲ್ಲಿ ಕಾರ್ತಿಕ್ ಪಂದ್ಯದ ಗತಿಯನ್ನೇ ಬದಲಿಸುವ ಸಾಧ್ಯತೆ ಹೆಚ್ಚಿತ್ತು. ಕಾರ್ತಿಕ್ 34 ಎಸೆತದಲ್ಲಿ 7 ಸಿಕ್ಸ್ ಮತ್ತು 5 ಬೌಂಡರಿ ಸಹಿತ 83 ರನ್ ಗಳಿಸಿ ಔಟ್ ಆದರು.
ಚಿನ್ನಸ್ವಾಮಿಯಲ್ಲಿ ಹೈದರಾಬಾದ್ ಅಬ್ಬರ:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೈದರಾಬಾದ್‌ಗೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಸನ್‌ರೈಸರ್ಸ್ ಹೈದರಾಬಾದ್ ಪರ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ 38, ಟ್ರಾವಿಸ್ ಹೆಡ್ 102, ಹೆನ್ರಿ ಕ್ಲಾಸೆನ್ 67, ಏಡನ್ ಮಾರ್ಕ್ರಾಮ್ 32, ಅಬ್ದುಲ್ ಸಮದ್ 37 ರನ್ ಗಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯದ್ಭುತ ಸ್ಟ್ರೈಕ್ ಮೂಲಕ ಅತಿ ದೊಡ್ಡ ಸ್ಕೋರ್ ಮಾಡಿತು. ಇದಕ್ಕೂ ಮೊದಲು ಹೈದರಾಬಾದ್ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಗಳಿಸಿತ್ತು. ಮುಂಬೈ ವಿರುದ್ಧ ಬ್ಯಾಟಿಂಗ್ ಮಾಡುವಾಗ ಹೈದರಾಬಾದ್ 277 ರನ್ ಗಳಿಸಿತ್ತು. ಹೈದರಾಬಾದ್‌ನ ಈ ದಾಖಲೆಯನ್ನು ಯಾರಾದರೂ ಮುರಿಯುವ ಮುನ್ನ ಹೈದರಾಬಾದ್ ತನ್ನದೇ ದಾಖಲೆಯನ್ನು ಮುರಿದಿದೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ 287 ರನ್ ಚಚ್ಚಿ ಬೀಸಾಕಿತು.
ವೇಗದ ಶತಕ ಸಿಡಿಸಿದ ಹೆಡ್:
ಟ್ರಾವಿಸ್ ಹೆಡ್ 9 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು. ಟ್ರಾವಿಸ್ ಹೆಡ್ ಅವರ ಶತಕವು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಯಿತು. ಇದಕ್ಕೂ ಮುನ್ನ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ, ಯೂಸುಫ್ ಪಠಾಣ್ 37 ಎಸೆತ, ಡೇವಿಡ್ ಮಿಲ್ಲರ್ 38 ಎಸೆತ, ಆಡಮ್ ಗ್ಲುಕ್ ಕ್ರಿಸ್ಟ್ 40 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಇದೀಗ ಟ್ರಾವಿಸ್ ಹೆಡ್ ಆಡಮ್ ಗ್ಲುಕ್ ಕ್ರಿಸ್ಟ್ ಅವರನ್ನು ಹಿಂದಿಕ್ಕಿ ನಾಲ್ಕನೇ ವೇಗದ ಶತಕ ಗಳಿಸಿದ್ದಾರೆ. ಟ್ರಾವಿಸ್ ಹೆಡ್ ಶತಕ ಗಳಿಸಿದ ಬಳಿಕ 13ನೇ ಓವರ್ ನ ಮೂರನೇ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು. ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ 102 ರನ್ ಗಳಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1