IPL 2024, RR vs MI: ಜೈಸ್ವಾಲ್​ ಶತಕಕ್ಕೆ ತತ್ತರಿಸಿದ ಮುಂಬೈ, ಮತ್ತೆ ಮುಗ್ಗರಿಸಿದ ಹಾರ್ದಿಕ್​ ಪಡೆ

Cricket: IPL 2024, MI vs RR: ಮುಂಬೈ ಇಂಡಿಯನ್ಸ್​​ ಮತ್ತು ರಾಜಸ್ಥಾನ್​ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಮತ್ತೊಮ್ಮೆ ರಾಜಸ್ಥಾನ್​ ರಾಯಲ್ಸ್​ ತಂಡವು ಭರ್ಜರಿಯಾಗಿ ಗೆದ್ದುಬೀಗಿದೆ. ಈ ಮೂಲಕ ಮುಂಬೈ ತಂಡವು ಸತತ 5ನೇ ಸೋಲನ್ನು ಅನುಭವಿಸಿದೆ.

ಐಪಿಎಲ್ 2024ರ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ (RR vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್​ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 180 ರನ್ ಗಳ ಸವಾಲನ್ನು ನೀಡಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಸಂದೀಪ್ ಶರ್ಮಾ ಮುಂಬೈ ಪರ 5 ವಿಕೆಟ್ ಕಬಳಿಸಿ ಮಿಂಚಿದರು. ಈ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ ತಂಡವು  18.4 ಓವರ್​ಗೆ 1 ವಿಕೆಟ್​​ ನಷ್ಟಕ್ಕೆ  183 ರನ್​ ಗಳಿಸುವ ಮೂಲಕ 9 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿದೆ.  ಇತ್ತ ಮುಂಬೈ ಇಂಡಿಯನ್ಸ್​ ತಂಡವು 5ನೇ ಸೋಲನ್ನು ಅನುಭವಿಸಿದೆ.

ಯಶಸ್ವಿ ಜೈಸ್ವಾಲ್​ ಭರ್ಜರಿ ಬ್ಯಾಟಿಂಗ್​:

ಇನ್ನು, ಮುಂಬೈ ಇಂಡಿಯನ್ಸ್​ ನೀಡಿದ 180 ರನ್​ ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ ಮತ್ತು ಜೋಶ್ ಬಟ್ಲರ್​ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಆಕರ್ಷಕ ಅರ್ಧಶತಕದ ಜೊತೆಯಾಟವಾಡಿದರು. ಈ ವೇಳೆ ಜೋಶ್ ಬಟ್ಲರ್​ 25 ಎಸೆತದಲ್ಲಿ 6 ಫೋರ್​ ಮೂಲಕ 35 ರನ್​ ಗಳಿಸಿದರು. ಸತತ ವೈಫಲ್ಯದಿಂದ ಕಂಗೆಟ್ಟಿದ್ದ ಯಶಸ್ವಿ ಜೈಸ್ವಾಲ್​ ಇಂದು ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಮಿಂಚಿದರು. ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್​ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಜೈಸ್ವಾಲ್ 60 ಎಸೆತದಲ್ಲಿ 104 ರನ್​ ಗಳಿಸುವ ಮೂಲಕ ಅಬ್ಬರಿಸಿದರು. ಜೈಸ್ವಾಲ್​ಗೆ ಉತ್ತಮ ಸಾಥ್ ನೀಡಿದ ನಾಯಕ ಸಂಜು ಸ್ಯಾಮ್ಸನ್​ ಸಹ ಉತ್ತಮ ಬ್ಯಾಟಿಂಗ್​ ಮಾಡುವ ಮೂಲಕ ಮಿಂಚಿದರು. ಸ್ಯಾಮ್ಸನ್​ 38 ರನ್​ ಗಳಿಸಿದರು.

ತಿಲಕ್​ ವರ್ಮಾ ಏಕಾಂಗಿ ಹೋರಾಟ:

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡಿದಾಗ ಹಾರ್ದಿಕ್ ಪಾಂಡ್ಯ 10 ರನ್, ತಿಲಕ್ ವರ್ಮಾ 65 ರನ್, ಮೊಹಮ್ಮದ್ ನಬಿ 23 ರನ್, ನೇಹಾಲಾ ಅಧೇರಾ 49 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ಮುಂಬೈ ಇಂಡಿಯನ್ಸ್​ ಪರ ರೋಹಿತ್​ ಶರ್ಮಾ 6 ರನ್, ಇಶಾನ್​ ಕಿಶನ್​ ಶೂನ್ಯ, ಸೂರ್ಯಕುಮಾರ್ ಯಾದವ್ 10 ರನ್, ಟೀಮ್​ ಡೇವಿಡ್ 3 ರನ್, ಗ್ರೇಲಾಡ್ ಕೋಟ್ಜೇ ಶೂನ್ಯ, ಪಿಯೂಶ್​ ಚಾವ್ಲಾ 1 ರನ್ ಮತ್ತು ಜಸ್ಪ್ರೀತ್​ ಬುಮ್ರಾ 2 ರನ್​ ಸಿಡಿಸಿದರು.

ರಾಜಸ್ಥಾನದ ಬೌಲರ್‌ಗಳಲ್ಲಿ ಸಂದೀಪ್ ಶರ್ಮಾ 5 ವಿಕೆಟ್, ಟ್ರೆಂಟ್ ಬೌಲ್ಟ್ 2 ವಿಕೆಟ್ ಮತ್ತು ಅವೇಶ್ ಖಾನ್ 1 ವಿಕೆಟ್, ಅಶ್ವಿನ್ 1 ವಿಕೆಟ್ ಮತ್ತು ಯುಜ್ವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು. ರಾಜಸ್ಥಾನದ ಬೌಲರ್ ಸಂದೀಪ್ ಶರ್ಮಾ ಕಳೆದ ಕೆಲ ಪಂದ್ಯದಿಂದ ಪ್ಲೇಯಿಂಗ್ XI ನಿಂದ ಹೊರಗುಳಿದಿದ್ದರು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ 11 ರಲ್ಲಿ ಅವಕಾಶ ಪಡೆದರು ಮತ್ತು ಅವರು ಅವಕಾಶವನ್ನು ಉತ್ತಮವಾಗಿ ಬಳಿಸಿಕೊಂಡರು. ಸಂದೀಪ್ ಶರ್ಮಾ 4 ಓವರ್‌ಗಳಲ್ಲಿ 5 ವಿಕೆಟ್‌ಗಳೊಂದಿಗೆ 18 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ರಾಜಸ್ಥಾನದ ಬೌಲರ್‌ಗಳ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ತಂಡವನ್ನು 179 ರನ್‌ಗಳಿಗೆ ಸೀಮಿತಗೊಳಿಸಿತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 180 ರನ್ ಗಳ ಸವಾಲು ನೀಡಿತು.

Source:https://kannada.news18.com/news/sports/ipl-2024-mi-vs-rr-match-rajasthan-royals-won-by-9-wickets-skb-1666085.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *