IPL 2024, RR vs PBKS: ಪಂಜಾಬ್ ಕಿಂಗ್ಸ್ ತಂಡವು 18.5 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಸತತ 4ನೇ ಸೋಲನ್ನು ಅನುಭವಿಸಿದೆ.

ಐಪಿಎಲ್ 2024ರ 17ನೇ ಸೀಸನ್‌ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ (RR vs PBKS) ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯವು ಬರ್ಸಾಪುರ ಸ್ಟೇಡಿಯಂನಲ್ಲಿ ನಡೆಯಿತು. ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಾಯಕ ನಿರ್ಧಾರ ಮತ್ತೊಮ್ಮೆ ಕೈಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗಿದತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಸಿಡಿಸಿತು. ಈ ಮೂಲಕ ಪಂಜಾಬ್ ತಂಡಕ್ಕೆ ಸುಲಭ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.5 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಸತತ 4ನೇ ಸೋಲನ್ನು ಅನುಭವಿಸಿದೆ.
ಅಬ್ಬರಿಸಿದ ಪಂಜಾಬ್ ಕಿಂಗ್ಸ್:
ಇನ್ನು, ರಾಜಸ್ಥಾನ್ ನೀಡಿದ ಟಾರ್ಗೆಟ್ ಅನ್ನು ಪಂಜಾಬ್ 18.5 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಪಂಜಾಬ್ ಕಿಂಗ್ಸ್ ಪರ ಪ್ರಭುಸಿಮ್ರಾನ್ ಸಿಂಗ್ 6 ರನ್, ಜಾನಿ ಬೇರ್‌ಸ್ಟೋ 14 ರನ್, ರಿಲ್ಲೆ ರುಸ್ಸೋ 22 ರನ್, ಶಶಾಂಕ್ ಸಿಂಗ್ ಶೂನ್ಯ, ನಾಯಕ ಸ್ಯಾಮ ಕರನ್ 41 ಎಸೆದತಲ್ಲಿ 3 ಸಿಕ್ಸ್ 5 ಬೌಂಡರಿ ಸಹಿತ ಅಜೇಯ 63 ರನ್, ಜಿತೇಶ್ ಶರ್ಮಾ 22 ರನ್ ಹಾಗೂ ಕೊನೆಯಲ್ಲಿ ಅಶುತೋಷ್ ಶರ್ಮಾ 17 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ತಂಡ ಪ್ಲೇಆಫ್‌ನಿಮದ ಹೊರಬಿದ್ದರೂ ಉತ್ತಮವಾಗಿ ಆಡಿ ಪಂದ್ಯ ಗೆದ್ದುಕೊಂಡಿತು.
ರಿಯಾನ್ ಪರಾಗ್ ಏಕಾಂಗಿ ಹೋರಾಟ:
ಇನ್ನು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಸಹ ರಾಜಸ್ಥಾನ್ ರಾಯಲ್ಸ್ ಕಳೆದ ಪಂದ್ಯದಂತೆಯೇ ಈ ಬಾರಿಯೂ ಮುಗ್ಗರಿಸಿತು. ಆರಂಭದಿಂದಲೇ ರನ್ ಗಳಿಸಲು ಕಷ್ಟಪಡುತ್ತಿದ್ದ ರಾಜಸ್ಥಾನ್ ತಂಡವು ಅಂತಿಮವಾಗಿ ನಿಗಿದತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಸಿಡಿಸಿತು. ಈ ವೇಳೆ ಕಳೆದ ಕೆಲ ಪಂದ್ಯದಿಂದ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ರಿಯಾನ್ ಪರಾಗ ತಂಡದ ಮೊತ್ತ ಕೊಂಚ ಹೆಚ್ಚಿಸುವಲ್ಲಿ ಸಹಾಯಕರಾದರು. ಪರಾಗ್ 34 ಎಸೆತದಲ್ಲಿ 6 ಬೌಂಡರಿ ಸಹಾಯದಿಂದ 48 ರನ್ ಸಿಡಿಸಿದರು. ಇವರನ್ನು ಬಿಟ್ಟರೆ ಬೇರೆ ಯಾವೊಬ್ಬ ಆಟಗಾರ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ.
ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 4 ಎಸೆತದಲ್ಲಿ 4 ರನ್, ಟಾಮ್ ಕೋಲ್ಹೇರ್ 23 ಎಸೆತದಲ್ಲಿ 18 ರನ್, ನಾಯಕ ಸಂಜು ಸ್ಯಾಮ್ಸನ್ 15 ಎಸೆತದಲ್ಲಿ 18 ರನ್, ರವಿಚಂದ್ರನ್ ಅಶ್ನಿನ್ 19 ಎಸೆತದಲ್ಲಿ 28 ರನ್, ದ್ರುವ್ ಜುರೇಲ್ ಶೂನ್ಯ, ರೋಮೆನ್ ಪೋವೆಲ್ 5 ಎಸೆತದಲ್ಲಿ 4 ರನ್, ಪೇರಾರಿಯಾ 8 ಎಸೆತದಲ್ಲಿ 7 ರನ್, ಟ್ರೆಂಟ್ ಬೋಲ್ಟ್ 9 ಎಸೆತದಲ್ಲಿ 12 ರನ್ ಹಾಗೂ ಆವೇಶ್ ಖಾನ್ 3 ರನ್ ಸಿಡಿಸುವ ಮೂಲಕ ತಂಡ ಕೊನೆಯಲ್ಲಿ 144 ರನ್ ಗಳಿಸಲು ಸಹಾಯಕರಾದರು. ಅತ್ತ ಪಂಜಾಬ್ ಕಿಂಗ್ಸ್ ಪರ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. PBKS ಪರ ಇಂದು ನಾಯಕ ಸ್ಯಾಮ್ ಕರನ್ 3 ಓವರ್‌ಗೆ 24 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 4 ಓವರ್‌ಗೆ 28 ರನ್ ನೀಡಿ 2 ವಿಕೆಟ್ ಹಾಗೂ ರಾಹುಲ್ ಚಹಾರ್ 4 ಓವರ್‌ಗೆ 26 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅರ್ಷದೀಪ್ ಸಿಂಗ್ 1 ವಿಕೆಟ್ ಹಾಗೂ ನಾಥನ್ ಎಲ್ಲಿಸ್ 1 ವಿಕೆಟ್ ಪಡೆದು ಮಿಂಚಿದರು.