IPL 2024, SRH vs MI: ಹೈದರಾಬಾದ್​​ ಅಬ್ಬರಕ್ಕೆ RCB ದಾಖಲೆ ಉಡೀಸ್​! ಟಿ20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಎಸ್​​​ಆರ್​ಎಚ್​​.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್​ರೈಸರ್ಸ್​ ಹೈದರಾಬಾದ್​ ಬ್ಯಾಟರ್​ಗಳು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲಾ ಮುಂಬೈ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ-ಸಿಕ್ಸರ್​ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಎಸ್​ಆರ್​ಎಚ್​​ ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ  3 ನಷ್ಟಕ್ಕೆ 277 ರನ್​ ಸಿಡಿಸಿದರು.

ಈ ಬೃಹತ್​ ಸ್ಕೋರ್​ ಮೂಲಕ ಸನ್​ರೈಸರ್ಸ್​​ ಹೈದರಾಬಾದ್​​ ತಂಡವು ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್​​ ದೂಳಿಪಟ ಮಾಡಿದೆ.

ಆರ್​ಸಿಬಿ ತಂಡವು ಪುಣೆ ವಾರಿಯರ್ಸ್​​ ವಿರುದ್ಧ 2013ರಲ್ಲಿ 263 ರನ್​ ಸಿಡಿಸಿದ್ದು ಐಪಿಎಲ್​ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಕೋರ್​ ಆಗಿತ್ತು. ಅಂದು ಆರ್​ಸಿಬಿ ಪರ ಕ್ರಿಸ್​​ ಗೇಲ್​ ಬರೋಬ್ಬರಿ 175 ರನ್​ ಸಿಡಿಸಿದ್ದರು. ಇದು ಇತಿಹಾಸ ನಿರ್ಮಿಸಿದ ಪಂದ್ಯವಾಗಿತ್ತು. ಆದರೆ ಇಂದು ಮುಂಬೈ ವಿರುದ್ಧ ಹೈದರಾಬಾದ್ ದಾಖಲೆ ಮುರಿದಿದೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್​​ ಬ್ಯಾಟರ್​ಗಳು ಅಬ್ಬರಿಸುವ ಮೂಲಕ 20 ಓವರ್​ಗೆ ಕೇವಲ 3 ವಿಕೆಟ್ ನಷ್ಟಕ್ಕೆ 277 ರನ್​ ಸಿಡಿಸುವ ಮೂಲಕ ಆರ್​ಸಿಬಿ ತಂಡದ 263 ರನ್​ ದಾಖಲೆಯನ್ನು ದೂಳಿಪಟ ಮಾಡಿದೆ.

ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್‌ಗಳ ಪಟ್ಟಿ: 2024ರಲ್ಲಿ SRH 277/3 vs MI, 2013 ರಲ್ಲಿ RCB 263/5 vs PWI, 2023 ರಲ್ಲಿ LSG 256/5 vs PBKS, 2016 ರಲ್ಲಿ RCB 248/3 ವಿರುದ್ಧ GL, 2010 ರಲ್ಲಿ CSK 246/5 ​​vs RR, 2018 ರಲ್ಲಿ KKR 245/6 ವಿರುದ್ಧ KXIP, 2008 ರಲ್ಲಿ CSK 240/5 ವಿರುದ್ಧ KXIP, 2023 ರಲ್ಲಿ CSK 235/4 ವಿರುದ್ಧ KKR.

ಈ ವೇಳೆ ಸನ್​ರೈಸರ್ಸ್​ ಹೈದರಾಬಾದ್ ಪರ ಮಾಯಾಂಕ್​ ಅಗರ್ವಾಲ್​ 11 ರನ್​ ಸಿಡಿಸಿದರು. ಬಳಿಕ ಬಂದ ಬ್ಯಾಟರ್​ ಗಳು ಮುಂಬೈ ತಂಡದ ಬೌಲರ್​ ಗಳ ಬೆವರಿಳಿಸಿದರು. ಈ ವೇಳೆ ಟ್ರಾವಿಸ್ ಹೆಡ್ 24 ಎಸೆತದಲ್ಲಿ 3 ಸಿಕ್ಸ್​ ಮತ್ತು 9 ಬೌಂಡರಿ ಮೂಲಕ 62 ರನ್​ ಸಿಡಿಸಿ ಮಿಂಚಿದರು.

ಹೆಡ್​​ ವಿಕೆಟ್ ಬಳಿಕ ಅಭಿಷೇಕ್​ ಶರ್ಮಾ 23 ಎಸೆತದಲ್ಲಿ 7 ಸಿಕ್ಸ್​ ಮತ್ತು 3 ಫೋರ್​ ಮೂಲಕ 63 ರನ್​ ಸಿಡಿಸಿದರು. ಅಡೇನ್​ ಮಾರ್ಕಮ್​ 28 ಎಸೆತದಲ್ಲಿ 1 ಸಿಕ್ಸ್​ ಮತ್ತು 2 ಫೋರ್​ ಮೂಲಕ 42 ರನ್​ ಮತ್ತು ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಚ್ ಕ್ಲಾಸಿನ್​ 34 ಎಸೆತದಲ್ಲಿ 4 ಬೌಂಡರಿ ಮತ್ತು 7 ಸಿಕ್ಸ್​ ಸಹಿನ ಅಜೇಯ 80 ರನ್​ ಗಳಿಸಿದರು.

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್.

Source : https://kannada.news18.com/photogallery/sports/ipl-2024-srh-vs-mi-sunrisers-hyderabad-break-rcb-record-in-highest-team-score-in-ipl-skb-1629406-page-7.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *