IPL 2025: ರಾಜಸ್ಥಾನ್ ವಿರುದ್ಧ ಕನ್ನಡಿಗ ಪ್ರಸಿಧ್ ಪರಾಕ್ರಮ! 58 ರನ್​ಗಳಿಂದ ಗೆದ್ದು ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ಗುಜರಾತ್.

ಗುಜರಾತ್ ಟೈಟಾನ್ಸ್ 2025 ಐಪಿಎಲ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 217 ರನ್ ಗಳಿಸಿ 58 ರನ್ ಜಯ ಸಾಧಿಸಿದೆ. ಸಾಯಿ ಸುದರ್ಶನ್ 82 ರನ್ ಗಳಿಸಿ ಬ್ಯಾಟಿಂಗ್​​ನಲ್ಲಿ ಮಿಂಚಿದರೆ, ಕನ್ನಡಿಗ ಪ್ರಸಿಧ್ ಕೃಷ್ಣ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 23 ನೇ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರನ್​ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಗುಜರಾತ್‌ನ ತವರು ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತ್ತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 159 ರನ್​ಗಳಿಸಿತು.

218ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್  ಪವರ್​ ಪ್ಲೇನಲ್ಲಿ ಯಶಸ್ವಿ ಜೈಸ್ವಾಲ್ (6) ನಿತೀಶ್ ರಾಣಾ (1) ವಿಕೆಟ್ ಕಳೆದುಕೊಂಡಿತು. ಪವರ್​ ಪ್ಲೇನಲ್ಲಿ ಅಬ್ಬರಿಸಿದ ರಿಯಾನ್ ಪರಾಗ್ 14 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 26ರನ್​ಗಳಿಸಿದ್ದ ವೇಳೆ 7ನೇ ಓವರ್​ನಲ್ಲಿ ಖೆಜ್ರೋಲಿಯಾ ಬೌಲಿಂಗ್​​ನಲ್ಲಿ  ಅನುಮಾನಾಸ್ಪದ ಕ್ಯಾಚ್​ಗೆ ಬಲಿಯಾದರು. ನಂತದ ಬಂದ ಧ್ರುವ್ ಜುರೆಲ್ ಕೇವಲ 5 ರನ್​ಗಳಿಗೆ ಔಟ್ ಆಗಿ ಪೆವಲಿಯನ್​​ ಸೇರಿಕೊಂಡರು. 68ಕ್ಕೆ 4 ವಿಕೆಟ್ ಕಳೆದುಕೊಂಡು 100 ರನ್​ಗಳಿಸುವುದು ಅನುಮಾನ ಎನ್ನುವ ಹಂತಕ್ಕೆ ತಲುಪಿತ್ತು.

ನಾಯಕ ಸಂಜು ಸ್ಯಾಮ್ಸನ್​ ಹಾಗೂ ಶಿಮ್ರೋನ್ ಹೆಟ್ಮೈರ್ 5ನೇ ವಿಕೆಟ್​ಗೆ 48 ರನ್​ ಸೇರಿಸಿದರು. ಸಂಜು ಸ್ಯಾಮ್ಸನ್​ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 41 ರನ್​ಗಳಿಸಿ ಔಟ್ ಆದರು.  ಈ ಜೋಡಿ ಬೇರ್ಪಡುತ್ತಿದ್ಧಂತೆ ರಾಯಲ್ಸ್ ಸೋಲು ಖಚಿತವಾಯಿತು. ಹೆಟ್ಮೈರ್ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 52 ರನ್​ಗಳಿಸಿ ಔಟ್ ಆದರು. ತೀಕ್ಷಣ (5), ಆರ್ಚರ್ (4), ತುಷಾರ್ ದೇಶಪಾಂಡೆ(3) ಕೂಡ 20 ಓವರ್​ ಕೋಟಾ ಮುಗಿಯುವವರೆಗೂ ಬ್ಯಾಟ್ ಮಾಡಲಿ ವಿಫಲರಾದರು.

ಕನ್ನಡಿಗ ಪ್ರಸಿಧ್ ಕೃಷ್ಣ 24 ರನ್​ ನೀಡಿ 3 ವಿಕೆಟ್ ಪಡೆದು ತಂಡದ ಟಾಪ್ ಬೌಲರ್ ಎನಿಸಿಕೊಂಡರು. ರಶೀದ್ ಖಾನ್ 37ಕ್ಕೆ2, ಸಾಯಿ ಕಿಶೋರ್ 20ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಭಿಸಿದ ಟೈಟನ್ಸ್​ 3ನೇ ಓವರ್​ನ್ಲೇ ನಾಯಕ ಗಿಲ್​(2) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​ಗೆ ಸುದರ್ಶನ್ ಜೊತೆಯಾದ ಬಟ್ಲರ್ 80ರನ್​ಗಳ ಜೊತೆಯಾಟ ನಡೆಸಿದರು. ಬಟ್ಲರ್ 25 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್​ಗಳಿಸಿ ತೀಕ್ಷಣ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ಬಂದ ಶಾರುಖ್ ಖಾನ್ 20 ಎಸೆತಗಳಲ್ಲಿ 36 ರನ್​ ಸಿಡಿಸಿದರು. ಇವರು ಸುದರ್ಶನ್ ಜೊತೆಗೂಡಿ 3ನೇ ವಿಕೆಟ್​​ಗೆ 62 ರನ್​ ಸೇರಿಸಿದರು.

ಆರಂಭಿಕನಾಗಿ ಬಂದು 19ನೇ ಓವರ್​ನಲ್ಲಿ ಔಟ್ ಆದ ಸುದರ್ಶನ್ 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್​ಗಳ ಸಹಿತ 82 ರನ್​ಗಳಿಸಿ ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸಲು ಟೈಟನ್ಸ್​ಗೆ ನೆರವಾದರು. ಕೊನೆಯಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 12 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ ಅಜೇಯ 24 ರನ್​ಗಳಿಸಿದರು. ರುದರ್ಫೋರ್ಡ್ 7, ರಶೀದ್ ಖಾನ್ 12 ರನ್​ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ತುಷಾರ್ ದೇಶಪಾಂಡೆ 53ಕ್ಕೆ2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಮತೀಶಾ ತೀಕ್ಷಣ ಹಾಗೂ ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1
















Leave a Reply

Your email address will not be published. Required fields are marked *