ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಸಿಡಿಸಿದ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಪ್ರತಿಸ್ಪರ್ಧಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ 18ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2025ರ 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK vs MI) ಬಲಿಷ್ಠ ಎದುರಾಳಿಯಾಗಿರುವ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ4 ವಿಕೆಟ್ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಎಲ್ ಕ್ಲಾಸಿಕೋ ಎಂದೇ ಖ್ಯಾತವಾಗಿರುವ ಈ ಎರಡು ತಂಡಗಳ ಪಂದ್ಯ ಎಂದಿನಂತೆ ರೋಚಕವಾಗಿ ಕೂಡಿತ್ತು. ಮುಂಬೈ ನೀಡಿದ್ದ 156 ರನ್ಗಳ ಗುರಿಯನ್ನ ಸಿಎಸ್ಕೆ 19.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ಸುಲಭ ಜಯ ಸಾಧಿಸಿತು. ನಾಯಕ ಋತುರಾಜ್ ಗಾಯಕ್ವಾಡ್ (53) ಹಾಗೂ ರಚಿನ್ ರವೀಂದ್ರ( ಅಜೇಯ 65) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಗಳಾದರು.

156ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 2ನೇ ಓವರ್ನಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ರಾಹುಲ್ ತ್ರಿಪಾಠಿ (2) 2ನೇ ಓವರ್ನಲ್ಲೇ ಔಟ್ ಆದರು. ಆದರೆ ನಾಯಕ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಮುಂಬೈ ಸಂತೋಷ ಹೆಚ್ಚು ಸಮಯ ಉಳಿಯದಂತೆ ಮಾಡಿದರು. ಈ ಇಬ್ಬರು 2ನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ನಡೆಸಿದರು. ಸ್ಫೋಟಕ ಆಟವಾಗಡಿದ ನಾಯಕ ಋತುರಾಜ್ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಸಿಡಿಸಿ ಔಟ್ ಆದರು.
ರಚಿನ್ -ಗಾಯಕ್ವಾಡ್ ಬ್ಯಾಟಿಂಗ್ ಮಾಡಿದ ರೀತಿ ನೋಡಿದಾಗ ಈ ಪಂದ್ಯ ಒಂದ್ ಸೈಡ್ ಗೇಮ್ ಆಗಬಹುದು ಎಂದು ನಿರೀಕ್ಷಿಸಲಾಗುತ್ತು. ಆದರೆ ಮುಂಬೈನ ಯುವ ಬೌಲರ್ ವಿಘ್ನೇಶ್ ಪುತೂರ್ ಎಲ್ಲರ ನಿರೀಕ್ಷೆ ಹುಸಿಗೊಳಿಸಿದರು. ಗಾಯಕ್ವಾಡ್ ವಿಕೆಟ್ ಜೊತೆಗೆ ಶಿವಂ ದುಬೆ (9), ದೀಪಕ್ ಹೂಡಾ (3) ವಿಕೆಟ್ಗಳನ್ನ ಪಡೆಯುವ ಮೂಲಕ ಸಿಎಸ್ಕೆಗೆ ಶಾಕ್ ನೀಡಿದರು. ಸ್ಯಾಮ್ ಕರನ್ (4) ವಿಲ್ ಜಾಕ್ಸ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಸಿಎಸ್ಕೆ ಕೈಯಿಂದ ಜಾರಬಹುದು ಎಂಬ ಅನುಮಾನ ಬಂದಿದ್ದು ಮಾತ್ರ ಸುಳ್ಳಲ್ಲ.
ಆದರೆ ರಚಿನ್ ರವೀಂದ್ರ ಹಾಗೂ ರವಿಂದ್ರ ಜಡೇಜಾ 6ನೇ ವಿಕೆಟ್ಗೆ 36 ರನ್ ಸೇರಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಆದರೆ ಗೆಲುವಿಗೆ 4 ರನ್ಗಳ ಅಗತ್ಯವಿದ್ದಾಗ ಜಡೇಜಾ ಔಟ್ ಆದರು. ಆದರೆ 20ನೇ ಓವರ್ನ ಮೊದಲ ಎಸೆತದಲ್ಲಿ ರಚಿನ್ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರಂಭಿಕನಾಗಿ ಕ್ರೀಸ್ಗೆ ಬಂದ ರವೀಂದ್ರ 45 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ನೆರವಿನಿಂದ ಅಜೇಯ 65 ರನ್ಗಳಿಸಿದರು.
ಮುಂಬೈ ಪರ ಸ್ಟಾರ್ ಬೌಲರ್ಗಳು ಕೈಕೊಟ್ಟರು, 23ರ ಕೇರಳದ ಸ್ಪಿನ್ನರ್ ವಿಘ್ನೇಶ್ ಪುತೂರ್ 32ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ವಿಲ್ ಜ್ಯಾಕ್ಸ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಆರಂಭದಿಂದ ಅಂತ್ಯದವರೆಗೆ ಬ್ಯಾಟಿಂಗ್ ಮಾಡಲು ಪರದಾಡಿತು. ತಿಲಕ್ ವರ್ಮಾ 31, ಸೂರ್ಯಕುಮಾರ್ ಯಾದವ್ 29 ಹಾಗೂ ದೀಪಕ್ ಚಾಹರ್ ಅಜೇಯ 28 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
150 ಗಡಿ ದಾಟಿಸಿದ ತಿಲಕ್, ದೀಪಕ್
36ಕ್ಕೆ 3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಮುಂಬೈಗೆ ನಾಯಕ ನಾಯಕ ಸೂರ್ಯಕುಮಾರ್ ಯಾದವ್ ( 29 ರನ್, 26 ಎಸೆತ,2 ಬೌಂಡರಿ, 1 ಸಿಕ್ಸರ್) ಹಾಗೂ ತಿಲಕ್ ವರ್ಮಾ (31 ರನ್, 25 ಎಸೆತ, 2 ಬೌಂಡರಿ, 2 ಸಿಕ್ಸರ್), 36 ಎಸೆತಗಳಲ್ಲಿ 51 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ನಾಯಕನ ವಿಕೆಟ್ ಬೀಳುತ್ತಿದ್ದಂತೆ ಮುಂಬೈ ಪೆವಿಲಿಯನ್ ಪರೇಡ್ ನಡೆಸಿತು. ರಾಬಿನ್ ಮಿಂಜ್ (3),ನಮನ್ ಧಿರ್(17), ಮಿಚೆಲ್ ಸ್ಯಾಂಟ್ನರ್ (11) ಹಾಗೂ ಟ್ರೆಂಟ್ ಬೌಲ್ಟ್ (1) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದೀಪಕ್ ಚಾಹರ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 28 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಬೌಲರ್ಗಳ ಅಮೋಘ ಪ್ರದರ್ಶನ
ಚೆನ್ನೈ ಸೂಪರ್ ಕಿಂಗ್ಸ್ ಪರ ಅಫ್ಘಾನಿಸ್ತಾನದ ನೂರ್ ಅಹ್ಮದ್ ಕಮಾಲ್ ಮಾಡಿದರು. 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಖಲೀಲ್ ಅಹ್ಮದ್ 3 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಹಾಗೂ ನೇಥನ್ ಎಲ್ಲಿಸ್ ತಲಾ 1 ವಿಕೆಟ್ ಪಡೆದರು.
10 ಕೋಟಿ ಬೌಲರ್ ಕಮಾಲ್
ನೂರ್ ಅಹ್ಮದ್ರನ್ನ ಸಿಎಸ್ಕೆ ಭಾರೀ ಪೈಪೋಟಿ ನೀಡಿ ಖರೀದಿಸಿತ್ತು. ಹರಾಜಿನಲ್ಲಿ ಗುಜರಾತ್ ಟೈಟನ್ಸ್ 5 ಕೋಟಿಗೆ ಆರ್ಟಿಎಂ ಕಾರ್ಡ್ ಬಳಿಸಿಕೊಳ್ಳಲು ಯತ್ನಿಸಿದಾಗ ಸಿಎಸ್ಕೆ ಬರೋಬ್ಬರಿ 10 ಕೋಟಗೆ ಬಿಡ್ ಏರಿಸಿ ಖರೀದಿಸಿತ್ತು. ಇದೀಗ ಚೆಪಾಕ್ ಮೈದಾನಕ್ಕೆ ಹೇಳಿಮಾಡಿಸಿದ ಬೌಲರ್ ಆಗಿರುವ ನೂರ್, ಇಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಾಬಿನ್ ಮಿಂಜ್ ಹಾಗೂ ಸ್ಯಾಂಟ್ನರ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಫ್ರಾಂಚೈಸಿಯ ನಂಬಿಕೆಯನ್ನ ಉಳಿಸಿಕೊಂಡಿದ್ದಾರೆ.
Source: News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1